Sunday, June 7, 2026
spot_imgspot_img
spot_imgspot_img

ವಿಟ್ಲ: (ಜು24) “ಆಟಿಡ್ ಬಂಟೆರೆನ ಕೆಸರ್‌ಡೊಂಜಿ ದಿನ”

- Advertisement -
- Advertisement -

ವಿಟ್ಲ: ಬಂಟರ ಸಂಘ ವಿಟ್ಲ ವಲಯ ಇದರ “ಆಟಿಡ್ ಬಂಟೆರೆನ ಕೆಸರ್‌ಡೊಂಜಿ ದಿನ” ಕಾರ್ಯಕ್ರಮವು ಜುಲೈ 24ರ ಆದಿತ್ಯವಾರ ಕೇಪು-ಕಲ್ಲಂಗಳ ಗುತ್ತು ಚೌಕಮಾರ್ ಗದ್ದೆಯಲ್ಲಿ ನಡೆಯಲಿದೆ.

ಮಾಣಿಲ, ಪೆರುವಾಯಿ, ಕೇಪು, ಅಳಿಕೆ, ಪುಣಚ, ಕುಳ, ಕುಂಡಡ್ಕ, ಇಡ್ಕಿದು, ಕನ್ಯಾನ, ಕರೋಪಾಡಿ, ವಿಟ್ಲ ಭಾಗದ ಜನರಿಗೆ ಈ ಕಾರ್ಯಕ್ರಮದಲ್ಲಿ ಅವಕಾಶವಿದ್ದು, ಎಲ್ಲರಿಗೂ ಬಂಟರ ಸಂಘ ವಿಟ್ಲ ವಲಯ ಸ್ವಾಗತ ಬಯಸಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ವಲಯ ಬಂಟರ ಸಂಘದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೋಟುಗುತ್ತು, ಕೇಂದ್ರ ಸರ್ಕಾರ ಹಾಗೂ ಜಾರಿ ನಿರ್ದೇಶನಾಲಯದ ವಕೀಲರಾದ ರಾಜೇಶ ರೈ ಕಲ್ಲಂಗಳಗುತ್ತು, ಬಂಟ್ವಾಳ ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ರಮಾ ಎಸ್. ಭಂಡಾರಿ ಆಗಮಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿಟ್ಲ ಬಂಟರ ಸಂಘದ ಗೌರವಧ್ಯಕ್ಷ ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು, ಬಂಟೆರೆ ಅಪ್ಪೆ ಕೂಟ ಕುಡ್ಲ ಇದರ ಭಾಸ್ಕರ ಶೆಟ್ಟಿ ವಿಟ್ಲ, ವಿಟ್ಲ ಬಂಟರ ಸಂಘದ ಉಪಾಧ್ಯಕ್ಷ ಶ್ರೀಧರ ಶೆಟ್ಟಿ ಗುಬ್ಯಗುತ್ತು, ಬಂಟರ ಸಂಘ ಕೇಪು ಗ್ರಾಮ ಸಮಿತಿ ಅಧ್ಯಕ್ಷ ಬೇಡೆಮಾರ್ ಜಗಜ್ಜೀವನ್‌ರಾಮ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ.

- Advertisement -

Related news

error: Content is protected !!