Saturday, April 27, 2024
spot_imgspot_img
spot_imgspot_img

ವಿಟ್ಲ : (ಜ. 26-28) ಜೋಗಿಬೆಟ್ಟು ಶ್ರೀ ಜುಮಾದಿ ಕಲ್ಲಾಲ್ದ ಗುಳಿಗ ದೈವಸ್ಥಾನ ಮತ್ತು ಪರಿವಾರ ದೈವಗಳ ಧರ್ಮಚಾವಡಿಯ ಪುನರ್ ನಿರ್ಮಾಣಗೊಂಡ ದೈವಸ್ಥಾನ ಧರ್ಮಚಾವಡಿಯ ಪ್ರವೇಶೋತ್ಸವ, ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ ಮತ್ತು ನೇಮೋತ್ಸವ

- Advertisement -G L Acharya panikkar
- Advertisement -

ವಿಟ್ಲ : ಜೋಗಿಬೆಟ್ಟು ಶ್ರೀ ಜುಮಾದಿ ಕಲ್ಲಾಲ್ದ ಗುಳಿಗ ದೈವಸ್ಥಾನ ಮತ್ತು ಪರಿವಾರ ದೈವಗಳ ಧರ್ಮಚಾವಡಿಯ ಪುನರ್ ನಿರ್ಮಾಣಗೊಂಡ ದೈವಸ್ಥಾನ ಧರ್ಮಚಾವಡಿಯ ಪ್ರವೇಶೋತ್ಸವ, ದೈವಗಳ ಪುನಃ ಪ್ರತಿಷ್ಠಾ ಕಲಶಾಭಿಷೇಕ ಮತ್ತು ನೇಮೋತ್ಸವ ಕಾರ್ಯಕ್ರಮವು ಜ.26 ರಿಂದ 28 ರ ವರೆಗೆ ಶ್ರೀ ವೇದಮೂರ್ತಿ ನಡಿಬೈಲು ಶಂಕರನಾರಾಯಣ ಭಟ್ ಇವರ ನೇತೃತ್ವದಲ್ಲಿ ನಡೆಯಲಿದೆ.

ಜ.26 ರಂದು ಸಂಜೆ ತಂತ್ರಿಗಳ ಆಗಮನ, ಶಿಲ್ಪಗಳಿಂದ ಆಲಯ ಪರಿಗ್ರಹ, ಸ್ಥಳ ಶುದ್ದಿ, ಸಪ್ತ ಶುದ್ದಿ, ಪುಣ್ಯಹ, ಆಚಾಯಾಗ್ಯಾದಿ ಋತ್ವಿಗ್ಚರಣ, ವಾಸ್ತುಪೂಜೆ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತುಬಲಿ, ಬಿಂಬ ಶುದ್ದಿ, ಆಧಿವಾಸ ಕ್ರಿಯೆಗಳು, ಅಧಿವಾಸ ಹೋಮ ಪ್ರತಿಷ್ಠಾ ಕಲಶ ಪೂರಣೆ, ಕಲಶ ಪೂಜೆ ನಡೆಯಲಿದೆ.

ಜ. 27 ರಂದು ಪ್ರಾತಃಕಾಲ ಗಣಪತಿ ಹೋಮ, ಪ್ರತಿಷ್ಠಾ ಕಲಶಪೂಜೆ, ಕಲಶ ಪ್ರಧಾನ ಹೋಮ, ಬಳಿಕ ದೈವಸ್ಥಾನದಲ್ಲಿ ಶ್ರೀ ಜುಮಾದಿ, ಕಲ್ಲಾಲ್ದಗುಳಿಗ ಮತ್ತು ಚಾವಡಿಯಲ್ಲಿ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ಕಲ್ಕುಡ ದೈವಗಳ ಪ್ರತಿಷ್ಠಾ ಕಲಶಾಭಿಷೇಕ ನಡೆಯಲಿದೆ. ನಂತರ ಶ್ರೀ ಸತ್ಯನಾರಾಯಣ ಪೂಜೆ, ಮುಡಿಪು ಪೂಜೆ, ದೈವಗಳಿಗೆ ಪರ್ವ ತಂಬಿಲ, ಮಂಗಳಾರತಿ, ಪ್ರಸಾದ ವಿತರಣೆ, ಮಂತ್ರಾಕ್ಷಣೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಕುಮಾರಿ ಸಂಧ್ಯಾ ಪೂಜಾರಿ ಮತ್ತು ಬಳಗದವರಿಂದ ’ಯಕ್ಷ’ ಗಾನವೈಭವ ನಡೆಯಲಿದೆ. ಸಂಜೆ ದೈವಗಳ ಭಂಡಾರ ಇಳಿಯುವುದು, ರಾತ್ರಿ ಕಲ್ಲಾಲ್ದ ಗುಳಿಗ ಕೋಲ, ಕಲ್ಲುರ್ಟಿ, ಕಲ್ಕುಡ ಕೋಲ, ಕೊರತಿ ಕೋಲ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ನೇಮ ನಡೆಯಲಿದೆ.

ಜ. 28 ರಂದು ಬೆಳಿಗ್ಗೆ ಜುಮಾದಿ ನೇಮೋತ್ಸವ ನಡೆದು ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!