


ವಿಟ್ಲ: ಅಳಿಕೆ ಗ್ರಾಮದ ಕಲ್ಲೆಂಚಿಪಾದೆ ಶ್ರೀ ಪಿಲಿಚಾಮುಂಡಿ ದೈವದ ಸನ್ನಿಧಿ ಜೀರ್ಣೋದ್ಧಾರದ ಹಂತದಲ್ಲಿದೆ. ಈ ಹಿನ್ನಲೆ ಶ್ರೀ ಪಿಲಿಚಾಮುಂಡಿ ದೈವದ ಸೇವಾ ಸಮಿತಿ (ರಿ) ವತಿಯಿಂದ ಜೀರ್ಣೋದ್ಧಾರದ ಪ್ರಯುಕ್ತ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ದೈವಸ್ಥಾನದ ಜೀರ್ಣೋದ್ಧಾರಕ್ಕೆ ಬೇಕಾದಂತಹ ಕೆತ್ತನೆಯ ಶಿಲೆಗಳನ್ನು ಮೆರವಣಿಗೆಯ ಮೂಲಕ ಕಲ್ಲೆಂಚಿಪಾದೆಗೆ ಸಾಗಲಿದೆ.
ಜನವರಿ 8 ರಂದು ಶಿಲಾ ಮೆರವಣಿಗೆ ಮತ್ತು ನಿಧಿ ಸಂಗ್ರಹಣೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿಲಾ ಮೆರವಣಿಗೆ ಸಮಯದಲ್ಲಿ ತಮ್ಮ ವಾಹನ (ಬೈಕ್, ಕಾರ್, ರಿಕ್ಷಾ, ಟೆಂಪೋ, ಪಿಕಪ್) ವಾಹನಗಳಿಗೆ ದ್ವಜವನ್ನು ಕಟ್ಟಿಕೊಂಡು, ಬಿಳಿ ಬಟ್ಟೆ ಸಹಿತ ಕೇಸರಿ ಶಾಲು ಧರಿಸಿಕೊಂಡು ಬಂದು ಶಿಲಾ ಮೆರವಣಿಗೆಯನ್ನು ಚಂದಗಾಣಿಸಿಕೊಡಬೇಕೆಂದು ಆಯೋಜಕರು ತಿಳಿಸಿದ್ದಾರೆ.
ಕಾರ್ಕಳದಿಂದ ಆಗಮಿಸಲಿರುವ ದಾರಂದ ಹಾಗೂ ಕಲ್ಲುಗಳನ್ನು ವಿಟ್ಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದಿಂದ ವಾಹನ ಜಾಥಾ ಮೂಲಕ ಉಕ್ಕುಡ ದರ್ಬೆ- ಪಡಿಬಾಗಿಲು – ಅಳಿಕೆ – ಚೆಂಡುಕಳ – ಶಾರದಾವಿಹಾರ – ಮಡಿಯಾಲ – ಬೈರಿಕಟ್ಟೆ – ಆನೆಪದವು – ಕಾಂತಡ್ಕ ಮಾರ್ಗವಾಗಿ ಕಲ್ಲೆಂಚಿಪಾದೆ ಶ್ರೀದೈವಸ್ಥಾನ ಸನ್ನಿಧಿಗೆ ಸಾಗಿ ಬರಲಿದೆ. ತಂತ್ರಿಗಳ ಸೂಚನೆಯಂತೆ ಪೂರ್ವಭಾವಿಯಾಗಿ ಸ್ಥಳದಲ್ಲಿ ಗಣಹೋಮ ನಡೆಯಲಿದೆ.
