Tuesday, April 16, 2024
spot_imgspot_img
spot_imgspot_img

ಬಂಟ್ವಾಳ ಪೊಲೀಸರ ಭರ್ಜರಿ ಭೇಟೆ ಲಕ್ಷಾಂತರ ರೂ. ಮೌಲ್ಯದ ಗಾಂಜಾ ವಶಕ್ಕೆ: ಓರ್ವ ಆರೋಪಿ ಬಂಧನ, ಇನ್ನೋರ್ವ ಪರಾರಿ.

- Advertisement -G L Acharya panikkar
- Advertisement -

ಮಂಗಳೂರು:- ಬಂಟ್ವಾಳ ನಗರ ಪೊಲೀಸರು ಲಕ್ಷಾಂತರ ರೂ ಮೌಲ್ಯದ ಗಾಂಜಾ ಸೊತ್ತುಗಳನ್ನು ಪತ್ತೆ ಹಚ್ಚಿ ಒರ್ವನನ್ನು ಬಂಧಿಸಿದ ಘಟನೆ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡ ಗ್ರಾಮದ ಮದ್ದ ಎಂಬಲ್ಲಿ ನಡೆದಿದೆ.

ಬಂಟ್ವಾಳ ನಗರ ಪೊಲೀಸರ ದಾಳಿ ನಡೆಸಿದಾಗ ಮನೆಯಲ್ಲಿ ಎರಡು ಪಾಲಿಥೀನ್ ಚೀಲಗಳಲ್ಲಿ , ಮಾದಕ ಗಾಂಜ ಗಿಡದ  ಮೊಗ್ಗು , ಎಲೆ , ಕಡ್ಡಿಗಳು ಇದ್ದು ಅವು ಅರೆ ಒಣಗಿದ್ದು ಸೇರಿದಂತೆ ರೂ.19,97,400/-ಮೌಲ್ಯದ ಒಟ್ಟು ತೂಕ 39 ಕೆ.ಜಿ 948 ಗ್ರಾಮ್ ಗಾಂಜಾ ಪತ್ತೆಯಾಗಿದೆ.

ದಾಳಿ ನಡೆಸುವ ವೇಳೆ ಪ್ರಮುಖ ಆರೋಪಿ ಬಂಟ್ವಾಳ ಮೂಡ ಗ್ರಾಮದ ನಿವಾಸಿ ಅಹಮ್ಮದ್ ಸಾಬೀತ್ (30) ಎಂಬಾತನನ್ನು ವಶಕ್ಕೆ ಪಡೆದಿದ್ದು, ಮತ್ತೋರ್ವ ಆರೋಪಿ ಮಹಮ್ಮದ್ ಅನ್ಸಾರ್ ಎಂಬಾತನು ಪರಾರಿಯಾಗಿದ್ದಾನೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ.ಲಕ್ಷ್ಮೀ ಪ್ರಸಾದ್ ಐಪಿಸಿ ರವರ ನಿರ್ದೇಶನದಲ್ಲಿ ಬಂಟ್ವಾಳ ಡಿ ವೈ ಎಸ್ ಪಿ‌ ವೆಲೆಂಟೈನ್ ಡಿಸೋಜ ರವರ ಮಾರ್ಗದರ್ಶನದಲ್ಲಿ, ಬಂಟ್ವಳ‌ವೃತ್ತ ನಿರೀಕ್ಷಕರಾದ ಟಿ ಡಿ ನಾಗರಾಜ್, ಬಂಟ್ವಾಳ ನಗರ ಠಾಣಾ ಪಿ ಎಸ್ ಐ ಅವಿನಾಶ್ ಹೆಚ್ ರವರ ನೇತೃತ್ವದಲ್ಲಿ ಪ್ರೊ.ಪಿ ಎಸ್ ಐ ಪ್ರಶಾಂತ್, ಸಿಬ್ಬಂದಿಗಳಾದ ಸುಜು, ಶ್ರೀಕಾಂತ್, ವನಿತಾ ವಿಜಯ ಹಾಗೂ ಬಂಟ್ವಾಳ ವೃತ್ತ ನಿರೀಕ್ಷಕರ ಅಪರಾಧ ಪತ್ತೆ ದಳದ ಗೋಣಿ ಬಸಪ್ಪ, ವಿವೇಕ್, ಕುಮಾರ್ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

- Advertisement -

Related news

error: Content is protected !!