Friday, March 29, 2024
spot_imgspot_img
spot_imgspot_img

ವಿಟ್ಲ : ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಮಜಿ ವೀರಕಂಬ ಇಲ್ಲಿ ಎಂಟನೇ ತರಗತಿ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮ

- Advertisement -G L Acharya panikkar
- Advertisement -
vtv vitla

ವಿಟ್ಲ : ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಮಜಿ ವೀರಕಂಬ ಇಲ್ಲಿ 2022-23ನೇ ಸಾಲಿನ ಎಂಟನೇ ತರಗತಿ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಎಸ್ ಕೆ, ಪ್ರಾರ್ಥಮಿಕ ಹಂತದಲ್ಲಿ ಪಡೆದ ಶಿಕ್ಷಣವು ಮಕ್ಕಳ ಮುಂದಿನ ಭವಿಷ್ಯಕ್ಕೆ ಭವ್ಯ ಬುನಾದಿ ಆಗಿದೆ. ಮಜಿ ಶಾಲೆಯಲ್ಲಿ ಪಡೆದಂತ ಸಂಸ್ಕಾರಯುಕ್ತ ಶಿಕ್ಷಣವನ್ನು ಮುಂದುವರಿಸಿ ಬೇರೆ ಶಾಲೆಯಲ್ಲಿ ಕೂಡ ಉತ್ತಮ ವಿದ್ಯಾರ್ಥಿಗಳಾಗಿ ಹೊರ ಹೊಮ್ಮಿ ನೀವು ಇಷ್ಟ ಪಟ್ಟ ಕ್ಷೇತ್ರಗಳಲ್ಲಿ ಉತ್ತಮ ವ್ಯಕ್ತಿಗಳಾಗಿ ಪ್ರಾಥಮಿಕ ಶಿಕ್ಷಣ ಪಡೆದ ಈ ಶಾಲೆಗೂ ಹಾಗೂ ಊರಿಗೆ ಕೀರ್ತಿ ತನ್ನಿ ಎಂದು ಎಂಟನೇ ತರಗತಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶುಭ ಹಾರೈಸಿದರು.

ಹಿರಿಯ ಶಿಕ್ಷಕಿ ಶಕುಂತಳ ಎಂ ಬಿ ಮಕ್ಕಳಿಗೆ ಶುಭ ಹಾರೈಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಒಂದು ಶಾಲೆಯನ್ನು ಬಿಟ್ಟು ಇನ್ನೊಂದು ಶಾಲೆಗೆ ಮಕ್ಕಳು ಹೋಗುವುದು ಅನಿವಾರ್ಯ, ಈ ಶಾಲೆಯಿಂದ ಬಿಳ್ಕೊಡುತ್ತಿರುವ ಮಕ್ಕಳನ್ನು ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಎಲ್ಲಾ ಶಿಕ್ಷಕರು ತಮ್ಮ ಸ್ವಂತ ಮಕ್ಕಳಂತೆ ತಿದ್ದಿ ಬುದ್ದಿ ಹೇಳಿ ಉತ್ತಮ ವಿದ್ಯಾರ್ಥಿಗಳನ್ನಾಗಿ ರೂಪಿಸಿದ್ದೇವೆ, ಮುಂದೆ ನೀವು ಸೇರಿದ ಶಾಲೆಗಳಲ್ಲಿಯೂ ಅಲ್ಲಿನ ಶಿಕ್ಷಕರಿಗೆ ಆದರ್ಶ ವಿದ್ಯಾರ್ಥಿಗಳಾಗಿ ಎಂದು ಶುಭ ಹಾರೈಸಿದರು.

ಎಂಟನೇ ತರಗತಿ ವಿದ್ಯಾರ್ಥಿ ಕುಮಾರಿ ಮಾನಸ ತನ್ನ ಶಾಲಾ ಶಿಕ್ಷಕರ ಬಗ್ಗೆ ಸ್ವಂತ ಕವನ ಬರೆದು ವಾಚಿಸಿದಳು ಇದು ಎಲ್ಲರ ಗಮನಸಲೇಯಿತು. ಬೀಳ್ಕೊಳ್ಳುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಮಜಿ ಶಾಲೆಯಲ್ಲಿ ಪಡೆದ ಅನುಭವವದ ಬಗ್ಗೆ ತಮ್ಮ ಅನಿಸಿಕೆ ತಿಳಿಸಿದರು. ಶಾಲಾ ಮಕ್ಕಳು ವಿದಾಯ ಗೀತೆ ಹಾಡಿದರು. ಬಿಳ್ಕೊಳ್ಳುತ್ತಿರುವ ಎಂಟನೇ ತರಗತಿ ವಿದ್ಯಾರ್ಥಿಗಳು ತಮ್ಮ ಸವಿನೆನಪಿಗಾಗಿ ಶಾಲಾ ಕಚೇರಿಗೆ ಎರಡು ಕಚೇರಿ ಚಯರ್ ಕೊಡುಗೆಯಾಗಿ ನೀಡಿದರು.

ವೇದಿಕೆಯಲ್ಲಿ ನಿವೃತ್ತ ಶಿಕ್ಷಕಿ ಸಿಸಿಲಿಯ, ಶಿಕ್ಷಕಿಯರಾದ ಸಂಗೀತ ಶರ್ಮಾ, ಅನುಷಾ, ಮುರ್ಷಿದ ಬಾನು, ಅತಿಥಿ ಶಿಕ್ಷಕಿಯರಾದ ಮೀನಾಕ್ಷಿ, ಪ್ರೇಮಲತಾ, ಹರಿಣಾಕ್ಷಿ, ಕೆ ಜಿ ಶಿಕ್ಷಕಿಯರಾದ ಜಯಲಕ್ಷ್ಮಿ , ಜಯಚಿತ್ರ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಎಲ್ಲಾ ವಿದ್ಯಾರ್ಥಿಗಳು ಅಡುಗೆ ಸಿಬ್ಬಂದಿಗಳು ಭಾಗವಹಿಸಿದರು. ವಿದ್ಯಾರ್ಥಿನಿ ಧನ್ವಿಲಕ್ಷ್ಮಿ ಸ್ವಾಗತಿಸಿ, ದೀಕ್ಷಾ ವಂದಿಸಿದರು. ಧನ್ವಿತ ಕಾರ್ಯಕ್ರಮ ನಿರೂಪಿಸಿದಳು.

- Advertisement -

Related news

error: Content is protected !!