Friday, June 19, 2026
spot_imgspot_img
spot_imgspot_img

ವಿಟ್ಲ: ನಾಪತ್ತೆಯಾಗಿದ್ದ ಅವಿವಾಹಿತ ಯುವಕ ಪತ್ತೆ

- Advertisement -
- Advertisement -

ವಿಟ್ಲ: ನಿನ್ನೆ ನಾಪತ್ತೆಯಾಗಿದ್ದ ಅವಿವಾಹಿತ ಯುವಕ ಪುತ್ತೂರಿನಲ್ಲಿ ಪತ್ತೆಯಾಗಿದ್ದಾನೆ.

ಪುಣಚ ಅಜೇರುಮಜಲು ನಿವಾಸಿ ಬಾಲಕೃಷ್ಣ(39)ನಾಪತ್ತೆಯಾದ ವ್ಯಕ್ತಿ. ಪುತ್ತೂರು ಬಸ್‌ ನಿಲ್ದಾಣದಲ್ಲಿ ತನ್ನ ಬ್ಯಾಗು ಕಳೆದು ಹೋದ ಬಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣೆಗೆ ದೂರು ಕೊಡಲು ಬಂದ ವೇಳೆ ಪೊಲೀಸರು ಗುರುತು ಹಿಡಿದಿದ್ದಾರೆ. ನಂತರ ಮನೆಯವರನ್ನು ಕರೆಸಿ ವಿಚಾರಣೆ ಬಳಿಕ ಕಳುಹಿಸಿಕೊಟ್ಟಿದ್ದಾರೆ.

ಘಟನೆ ವಿವರ

ಬಾಲಕೃಷ್ಣರವರು ಗಾರೆ ಕೆಲಸ ಮಾಡಿಕೊಂಡಿದ್ದು, ಅವಿವಾಹಿತರಾಗಿದ್ದಾರೆ. ಬಾಲಕೃಷ್ಣ ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯರಾಗಿದ್ದು, ಸುಮಾರು 1 ಲಕ್ಷ ರೂ. ಹಣವನ್ನು ಸಾಲವಾಗಿ ಪಡೆದಿದ್ದು ಸರಿಯಾಗಿ ಸಂಘಕ್ಕೆ ಮರುಪಾವತಿ ಮಾಡದೇ ಇದ್ದು, ಅಷ್ಟೇ ಅಲ್ಲದೇ ಸ್ಥಳೀಯವಾಗಿ ಕೆಲವರಿಂದ ಹಣವನ್ನು ಕೈ ಸಾಲವಾಗಿ ಪಡೆದು ಅದನ್ನು ಹಿಂತಿರುಗಿಸದೆ ಇದ್ದು, ಕೆಲವರು ಹಣ ಮರು ಪಾವತಿಸುವಂತೆ ಒತ್ತಡ ಏರುತ್ತಿದ್ದರು.

ಆ.8 ರಂದು ಬಾಲಕೃಷ್ಣ ಕೆಲಸಕ್ಕೂ ತೆರಳದೆ ಸಂಜೆ ವೇಳೆ ಮನೆಯಿಂದ ಹೊರಗಡೆ ಹೋಗಿದ್ದು, ಮನೆಯಲ್ಲಿ ಇನ್ನೂ ಮುಂದಕ್ಕೆ ಮನೆಗೆ ಬರುವುದಿಲ್ಲ ಎಂದು ಹೊರಟು ಹೋಗಿದ್ದು, ಆತನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದರು.ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ 128/2022 ರಂತೆ ಪ್ರಕರಣ ದಾಖಲಾಗಿತ್ತು.

- Advertisement -

Related news

error: Content is protected !!