Saturday, April 27, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ

- Advertisement -G L Acharya panikkar
- Advertisement -
vtv vitla

ವಿಟ್ಲ ಪ.ಪಂ. ವ್ಯಾಪ್ತಿಯ 94 CC ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ವಿಟ್ಲ : ವಿಟ್ಲ ಹೋಬಳಿಯ ನಾಡಕಚೇರಿಯ ನೂತನ ಕಟ್ಟಡ ಉದ್ಘಾಟನೆ, ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ 94 ಸಿಸಿ ಹಕ್ಕುಪತ್ರಗಳ ವಿತರಣೆ ಸಮಾರಂಭವು ವಿಟ್ಲ ಚಂದಳಿಕೆ ಭಾರತ ಆಡಿಟೋರಿಯಂನಲ್ಲಿ ನಡೆಯಿತು. ರೈತರಿಗೆ ಸಹಾಯಧನದಲ್ಲಿ ಕೃಷಿ ಉಪಕರಣಗಳ ವಿತರಣೆ ಮಾಡಲಾಯಿತು. ವಿಟ್ಲ ಪಟ್ಟಣ ಪಂಚಾಯತ್ ಎಸ್.ಎಫ್.ಸಿ.ನಿ ಯ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. 3376.78 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನಡೆಸಲಾಯಿತು.

ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು 18.84 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನಾಡಕಚೇರಿಯ ನೂತನ ಕಟ್ಟಡವನ್ನು ಉದ್ಘಾಟಿಸಿ, ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡಿ, ವಿಟ್ಲ ಹೋಬಳಿಯನ್ನು ತಾಲೂಕು ಮಾಡಲಾಗುವುದು, ವಿಟ್ಲ ಸಮುದಾಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲಾಗುವುದು. ಕೇರಳಕ್ಕೆ 400 ಕೆವಿ ವಿದ್ಯುತ್ ಸರಬರಾಜು ವ್ಯವಸ್ಥೆಯ ಮಾರ್ಗವನ್ನು ವಿರೋಧಿಸಿ, ಸ್ಥಗಿತಗೊಳಿಸಲಾಗುವುದು. ವಿಟ್ಲದಲ್ಲಿ ರೈತ ಸಂಪರ್ಕ ಕೇಂದ್ರ, ನಾಡಕಚೇರಿ, ಪ.ಪಂ.ಗೆ ನಗರೋತ್ಥಾನ ಯೋಜನೆಯಲ್ಲಿ 5 ಕೋಟಿ ರೂ. ಅನುದಾನ, 75 ಶಾಲೆಗಳಿಗೆ ಕೊಠಡಿ, 260 ಲೋಕೋಪಯೋಗಿ ರಸ್ತೆಗಳನ್ನು ಮೇಲ್ದರ್ಜೆಗೆ, ಒಟ್ಟು 500 ಕಿಮೀ ರಸ್ತೆಗೆ ಕಾಂಕ್ರೀಟ್ ಇತ್ಯಾದಿ 1200 ಕೋಟಿ ರೂ.ಗಳಿಗೂ ಅಧಿಕ ಅನುದಾನವನ್ನು ಕ್ಷೇತ್ರಕ್ಕೆ ಒದಗಿಸಲಾಗಿದೆ. ವಿಟ್ಲ ಮತ್ತು ಅಳಿಕೆಗೆ 350 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆ ಪ್ರಸ್ತಾವನೆ ಅಂತಿಮ ಹಂತದಲ್ಲಿದೆ. ವಿಟ್ಲ ಮಾದರಿ ಶಾಲೆ ಪ್ರೌಢಶಾಲೆಯಾಗಿದೆ ಮತ್ತು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಆರಂಭವಾಗಲಿದೆ ಎಂದು ತಿಳಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸಮಾರಂಭವನ್ನು ಉದ್ಘಾಟಿಸಿದರು.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ತಹಶೀಲ್ದಾರ್ ಸತೀಶ್ ಬಿ.ಕೂಡಲಗಿ, ದಯಾನಂದ್, ಗೃಹ ಮಂಡಳಿಯ ಸಿ. ಕೆ. ಮಂಜುಳಾ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಯಪ್ರಕಾಶ್, ವೀಣಾ ರೈ, ವಿಟ್ಲ ಪ.ಪಂ.ಸದಸ್ಯರಾದ ರವಿಪ್ರಕಾಶ್, ಅಶೋಕ್ ಕುಮಾರ್ ಶೆಟ್ಟಿ, ಹರೀಶ್ ಪೂಜಾರಿ ಸಿ.ಎಚ್., ಕರುಣಾಕರ ನಾಯ್ತೊಟ್ಟು, ಜಯಂತ್ ಸಿ.ಎಚ್., ರಕ್ಷಿತಾ ಸನತ್, ವಸಂತ ಪುಚ್ಚೆಗುತ್ತು, ಗೋಪಿಕೃಷ್ಣ, ಸಂಗೀತಾ ಪಾಣೆಮಜಲು, ವಿಜಯಲಕ್ಷ್ಮೀ ಉಕ್ಕುಡ, ಮುಖ್ಯಾಧಿಕಾರಿ ಗೋಪಾಲ ನಾಯ್ಕ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪದ್ಮನಾಭ, ಶ್ರೀಜಾ, ಮುಖಂಡರಾದ ಪುರುಷೋತ್ತಮ ಮುಂಗ್ಲಿಮನೆ, ಪರಮೇಶ್ವರೀ ಬಲ್ನಾಡು, ಮಂಜುನಾಥ ಕಲ್ಲಕಟ್ಟ, ರಾಮದಾಸ ಶೆಣೈ, ನರ್ಸಪ್ಪ ಪೂಜಾರಿ, ಕೃಷ್ಣ ಮುದೂರು ಮತ್ತಿತರರು ಉಪಸ್ಥಿತರಿದ್ದರು.
ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅರುಣ್ ಎಂ.ವಿಟ್ಲ ಸ್ವಾಗತಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು. ಪಟ್ಟಣ ಪಂಚಾಯತ್ ಸದಸ್ಯ ರವಿಪ್ರಕಾಶ್ ವಿಟ್ಲ ವಂದಿಸಿದರು.

- Advertisement -

Related news

error: Content is protected !!