Saturday, May 18, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯಿತಿ ನಗರೋತ್ಥಾನ ಯೋಜನೆಯ ಕ್ರೀಯಾ ಯೋಜನೆಯಲ್ಲಿ ತಾರತಮ್ಯ.! – ಕಾಂಗ್ರೆಸ್ ಖಂಡನೆ

- Advertisement -G L Acharya panikkar
- Advertisement -

ವಿಟ್ಲ: ಪಟ್ಟಣ ಪಂಚಾಯಿತಿ ನಗರೋತ್ಥಾನ ಯೋಜನೆಯ ಕ್ರೀಯಾ ಯೋಜನೆಯಲ್ಲಿ ತಾರತಮ್ಯ ಮಾಡಲಾಗಿದೆ. ೫ಕೋಟಿ ರೂ ಅನುದಾನ ಮಂಜೂರಾತಿಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಮಂಜೂರು ಮಾಡದೇ ಅನ್ಯಾಯವೆಸಗಲಾಗಿರುವುದನ್ನು ಖಂಡಿಸುತ್ತೇವೆ ಎಂದು ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ಹೇಳಿದರು.

ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಅವರು ನಗರೋತ್ಥಾನ ಯೋಜನೆಯಡಿಯಲ್ಲಿ ೫ ಕೋಟಿ ರೂ. ಅನುದಾನ ಮಂಜೂರು ಮಾಡಿದ್ದಾಗ ಎಲ್ಲಾ ಪಕ್ಷವರಿಗೂ ಸಮನಾಗಿ ಅನುದಾನ ಹಂಚಿಕೆ ಮಾಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಿದ್ದರು. ಆದರೆ ಈ ಬಾರಿ ಏಕಪಕ್ಷೀಯವಾದ ನಿರ್ಧಾರವನ್ನು ಮಾಡಲಾಗಿದೆ. ಶಾಸಕರು ಪಕ್ಷಕ್ಕೆ ಮಾತ್ರವಾಗಿರದೆ, ಅಗತ್ಯ ಯೋಜನೆಗಳಿಗೆ ಅನುದಾನ ನೀಡುವ ಜವಾಬ್ದಾರಿ ಇದೆ. ರಾಜಕೀಯ ಮಾಡಬಾರದು ರಾಜಕಾರಣ ಮಾಡಬೇಕೆಂದು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.

ಕಳೆದ ಶಾಸಕರ ಅವಧಿಯಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ಪಂಚಾಯಿತಿ ಕಾರ್ಯಾಲಯಕ್ಕೆ ೫೦ ಲಕ್ಷ ರೂ.ಗಳನ್ನು ಕಾದಿರಿಸಲಾಗಿತ್ತಾದರೂ, ಪಂಚಾಯಿತಿ ಆಡಳಿತ ಅದನ್ನು ಬೇರೆ ಯೋಜನೆಗಳಿಗೆ ಬಳಸಿದೆ. ಈ ಬಾರಿ ಅದಕ್ಕೆ ಬದಲಾಗಿ ವಾಣಿಜ್ಯ ಸಂಕೀರ್ಣಕ್ಕೆ ೫೦ ಲಕ್ಷ ರೂ. ಅನುದಾನ ಕಾದಿರಿಸಿದ್ದಾರೆ. ಹಾಗಾದರೆ ಸುಸಜ್ಜಿತ ಕಾರ್ಯಾಲಯ ವಿಟ್ಲ ಪಟ್ಟಣ ಪಂಚಾಯತ್‌ಗೆ ಅವಶ್ಯವಿಲ್ಲವೇ ಎಂದರು.

ನೂತನ ಕ್ರಿಯಾಯೋಜನೆಯಲ್ಲಿ ಪೌರ ಕಾರ್ಮಿಕರ ಗೃಹ ನಿರ್ಮಾಣಕ್ಕೆ ಅಗತ್ಯವಿರುವ ನಿವೇಶನಕ್ಕೆ ೨೦.೪೮ ಲಕ್ಷ ರೂ. ಅನುದಾನ ಕಾದಿರಿಸಲಾಗಿದೆ. ವಿಟ್ಲ ಪೇಟೆಯ ೧ ಕಿಮೀ ವ್ಯಾಪ್ತಿಯಲ್ಲಿರುವ ಸರಕಾರಿ ಜಾಗವನ್ನು ಕಾದಿರಿಸದೇ, ನಿವೇಶನವನ್ನು ಖರೀದಿಸುವುದು ನಾಗರಿಕರ ಪಾವತಿಸಿದ ತೆರಿಗೆ ಹಣವನ್ನು ದುರುಪಯೋಗ ಮಾಡಲಾಗುತ್ತಿದೆ. ಸ್ವಾಗತ ಕಮಲ್ ರಚನೆಗೆ ೨೦ ಲಕ್ಷ ರೂ. ಅನುದಾನ ಕಾದಿರಿಸಲಾಗಿದೆ. ಆದರೆ ಕೆಲವು ಸಂಘ ಸಂಸ್ಥೆಗಳು ಸ್ವಾಗತ ಕಮಾನು ರಚಿಸಲು ಮುಂದೆ ಬಂದಿದ್ದು, ಅನುಮತಿಗಾಗಿ ವಿಟ್ಲ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಉಚಿತವಾಗಿ ನಿರ್ಮಾಣವಾಗುವ ಕಮಾನಿಗೆ ಅನುದಾನ ಇಡುವ ಅಗತ್ಯವಿದೆಯಾ ಎಂದು ಪ್ರಶ್ನಿಸಿದರು.

ವಿಟ್ಲ ಪ.ಪಂ.ಸದಸ್ಯರಾದ ಅಬ್ದುಲ್‌ರಹಿಮಾನ್ ನೆಲ್ಲಿಗುಡ್ಡೆ, ವಿ.ಕೆ.ಎಂ.ಅಶ್ರಫ್, ಡೀಕಯ್ಯ, ಕಾಂಗ್ರೆಸ್ ಪಕ್ಷದ ಎನ್.ಎಸ್.ಡಿ.ಅಶೋಕ್ ಉಪಸ್ಥಿತರಿದ್ದರು.

vtv vitla
- Advertisement -

Related news

error: Content is protected !!