Thursday, May 2, 2024
spot_imgspot_img
spot_imgspot_img

ವಿಟ್ಲ: ಪಾಂಡವರ ಕೋಟೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ವಿರುದ್ದ ಗ್ರಾಮಸ್ಥರಿಂದ ಬ್ಯಾನರ್ ಅಳವಡಿಕೆ

- Advertisement -G L Acharya panikkar
- Advertisement -
vtv vitla

ಗ್ರಾಮಸ್ಥರಿಂದ ಮುಂದಿನ ವಿಧಾನ ಸಭಾ ಚುನಾವಣೆಗೆ ಬಹಿಷ್ಕಾರ

“ನಮ್ಮ ಊರಿನ ರಕ್ಷಣೆ ಮೊದಲು ನಂತರ ರಾಜಕಾರಣ.. ಇದು ಪ್ರತಿಭಟನೆ ಮಾತ್ರವಲ್ಲ ನಮ್ಮ ಗ್ರಾಮದ ಗೌರವದ ಪ್ರಶ್ನೆ”

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಕೋಟೆತ್ತಡ್ಕ ಎಂಬ ಅತೀ ಎತ್ತರದ ಪ್ರದೇಶದಲ್ಲಿ ಪುರಾತನ ಐತಿಹಾಸಿಕ ಬೆಟ್ಟದಲ್ಲಿರುವ ಪುರಾತನ ಕಾಲದ ಪಾಂಡವರ ಒಲೆ, ನಿಧಿ ಕೋಟೆಯ ರಕ್ಷಣೆಗೆ ವಿಫಲರಾದ ಮತ್ತು ಈ ಪ್ರದೇಶದಲ್ಲಿ ನಿಯಮ ಮೀರಿ ದಿನದ 24 ಗಂಟೆ ಭಾರೀ ಪ್ರಮಾಣದ ಕೆಂಪು ಕಲ್ಲು, ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು ಇದರಿಂದ ಮುಂದೆ ಭಾರೀ ಪ್ರಮಾಣದ ಪ್ರಕೃತಿ ವಿಕೋಪ ಸಂಭವಿಸುವ ಸಾಧ್ಯತೆ ಇದ್ದು, ಈ ಬಗ್ಗೆ ದೂರು ನೀಡಿದರೂ ಸ್ಪಂದಿಸದ ಜಿಲ್ಲಾಡಳಿತ ಮತ್ತು ಪುತ್ತೂರು ಶಾಸಕರ ಧೋರಣೆಯಿಂದ ಬೇಸತ್ತು ಮುಂದಿನ ಚುನಾವಣೆಗೆ ಜಾತಿ ಮತ ಮರೆತು ನಂಬಿಕೆಯ ಬೆಟ್ಟ ಉಳಿವಿಗಾಗಿ ಸಾಮೂಹಿಕ ಮತ ಬಹಿಷ್ಕರಿಸುತ್ತೇವೆ ಎಂದು ಅಳಿಕೆ ಮತ್ತು ಪೆರುವಾಯಿ ಗ್ರಾಮಸ್ಥರು ಅಳಿಕೆ ಗ್ರಾಮದ ಬಿಲ್ಲಂಪದವು ಎಂಬಲ್ಲಿ ಬ್ಯಾನರ್ ಅಳವಡಿಸಿದ್ದು, “ನಮ್ಮ ಊರಿನ ರಕ್ಷಣೆ ಮೊದಲು ನಂತರ ರಾಜಕಾರಣ.. ಇದು ಪ್ರತಿಭಟನೆ ಮಾತ್ರವಲ್ಲ ನಮ್ಮ ಗ್ರಾಮದ ಗೌರವದ ಪ್ರಶ್ನೆ” ಎಂಬ ಧ್ಯೇಯ ವಾಕ್ಯದೊಂದಿಗೆ ಬ್ಯಾನರ್ ಅಳವಡಿಸಿ ವಿಧಾನ ಸಭಾ ಚುಣಾವಣೆಗೆ ಬಹಿಷ್ಕಾರ ಹಾಕಿದ್ದಾರೆ.

ಈ ಹಿಂದೆ ಪಾಂಡವರ ಕೋಟೆಯ ಇತಿಹಾಸ, ಈಗ ನಡೆಯುತ್ತಿರುವ ಅಕ್ರಮ ಕೆಂಪು ಕಲ್ಲು ಹಾಗೂ ಮಣ್ಣು ಗಣಿಗಾರಿಕೆಯ ಬಗ್ಗೆ ಮಾಧ್ಯಮ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಆದರೆ ಈ ಬಗ್ಗೆ ಕೆಲ ಮಾಧ್ಯಮಗಳು “ಕೆಂಪು ಕಲ್ಲು ಗಣಿಗಾರಿಕೆ ಸಂಪೂರ್ಣ ಸಕ್ರಮವಾಗಿದೆ, ಈ ಭಾಗದಲ್ಲಿ ಪಾಂಡವರ ಕೋಟೆಯೇ ಇಲ್ಲ” ಎಂಬ ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದವು. ಈ ಬಗ್ಗೆ ತೀವ್ರ ಆಕ್ರೋಶಗೊಂಡ ಪೆರುವಾಯಿ ಮುಳಿಯ ಗ್ರಾಮದ ಗ್ರಾಮಸ್ಥರು ಈ ಹಿಂದೆ ಈ ಬಗ್ಗೆ ದೂರು ನೀಡಿದ್ದರೂ ಸ್ಪಂದಿಸದ ಜಿಲ್ಲಾಡಳಿತ, ಶಾಸಕರ, ಸಂಬಂಧಪಟ್ಟ ಅಧಿಕಾರಿಗಳ ಧೋರಣೆಯಿಂದ ಬೇಸತ್ತು ಮುಂದಿನ ವಿಧಾನ ಸಭಾ ಚುಣಾವಣೆಗೆ ಬಹಿಷ್ಕಾರ ಮಾಡುವುದಾಗಿ ಬ್ಯಾನರ್ ಅಳವಡಿಸಿದ್ದಾರೆ.

- Advertisement -

Related news

error: Content is protected !!