Monday, June 22, 2026
spot_imgspot_img
spot_imgspot_img

ವಿಟ್ಲ : (ಫೆ.18-20) ಶ್ರೀ ಉಮಾಮಹೇಶ್ವರ ದೇವಸ್ಥಾನ, ಮಾಮೇಶ್ವರ ಮಂಗಲಪದವು ಶಿವರಾತ್ರಿಯ ವರ್ಷಾವಧಿ ಜಾತ್ರೆ ಹಾಗೂ 42 ವರ್ಷದ ಭಜನಾ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಗೊನೆ ಮುಹೂರ್ತ, ಆಮಂತ್ರಣ ಪತ್ರಿಕೆ ಬಿಡುಗಡೆ

- Advertisement -
- Advertisement -

ವಿಟ್ಲ :ಶ್ರೀ ಉಮಾಮಹೇಶ್ವರ ದೇವಸ್ಥಾನ, ಮಾಮೇಶ್ವರ ಮಂಗಲಪದವು ಇಲ್ಲಿ ಫೆ.18-20ರ ವರೆಗೆ ಮಹಾಶಿವರಾತ್ರಿಯ ವರ್ಷಾವಧಿ ಜಾತ್ರೆ ಹಾಗೂ 42 ವರ್ಷದ ಭಜನಾ ಮಹೋತ್ಸವ ಕಾರ್ಯಕ್ರಮವು ನಡೆಯಲಿದ್ದು ಆ ಪ್ರಯುಕ್ತ ಫೆ. 11 ರಂದು ಗೊನೆ ಮುಹೂರ್ತ ಕಾರ್ಯಕ್ರಮ ನಡೆಯಿತು.

ಮಹಾಶಿವರಾತ್ರಿಯ ವರ್ಷಾವಧಿ ಜಾತ್ರೆ ಹಾಗೂ 42 ವರ್ಷದ ಭಜನಾ ಮಹೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮೊಕ್ತೇಸರರಾದ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಅರ್ಚಕ ಶ್ರೀನಿವಾಸ ಶಗ್ರೀತ್ತಾಯ, ಅಧ್ಯಕ್ಷ ವೀರಪ್ಪ ರಾಯರಬೆಟ್ಟು, ಕಾರ್ಯದರ್ಶಿ ಜಗದೀಶ್ಚಂದ್ರ ನಾಯ್ತೋಟು, ಕೋಶಾಧಿಕಾರಿ ದಿನೇಶ ಮಾಮೇಶ್ವರ, ಉಪಾಧ್ಯಕ್ಷ ವಿಶ್ವನಾಥ ನಾಯ್ತೋಟು, ಜತೆ ಕಾರ್ಯದರ್ಶಿ ಉಮೇಶ ಮಾಡ್ತೇಲು ಸದಸ್ಯರಾದ ಪದ್ಮನಾಭ ಮಂಜಲಾಡಿ, ರಾಘವ ಅಡ್ಡಾಳಿ, ನಾರಾಯಣ ಡೊಂಬಯ್ಯ ನೇಲ್ಯಾರ್, ನಾರಾಯಣ ಮಾಮೇಶ್ವರ, ಶ್ರೀ ಉಮಾಹೇಶ್ವರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಮೋನಪ್ಪ ರಾಯರಬೆಟ್ಟು , ಭಜನಾ ಮಂಡಳಿ ಕಾರ್ಯದರ್ಶಿ ಪ್ರಶಾಂತ್ ಅಡ್ಡಾಳಿ, ಅಣ್ಣು ಮಂಜಲಾಡಿ, ಧರ್ಣಪ್ಪ ಮಾಮೇಶ್ವರ, ಪ್ರಕಾಶ ಕೈಂತಿಲ, ಶಶಿಧರ ಕೈಂತಿಲ, ಹೊನ್ನಪ್ಪ ಕೋಚೋಡಿ, ಪ್ರವೀಣ್ ಮಾಡ, ದಿನೇಶ್ ಸುರುಳಿಮೂಲೆ ಉಪಸ್ಥಿತರಿದ್ದರು.

- Advertisement -

Related news

error: Content is protected !!