Thursday, June 4, 2026
spot_imgspot_img
spot_imgspot_img

ವಿಟ್ಲ : (ಫೆ.25) ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿಟ್ಲ ಇದರ ಕನ್ನಡ ಮತ್ತು ಸಾಹಿತ್ಯ ಸಮಿತಿ ಸಹಕಾರದೊಂದಿಗೆ ಪುಸ್ತಕ ಬಿಡುಗಡೆ, ಸಂವಾದ, ಬಾಲಕವಿಗೋಷ್ಟಿ ಮತ್ತು ಕವಿಗೋಷ್ಠಿ ಕಾರ್ಯಕ್ರಮ ನಡೆ ಸಾಹಿತ್ಯದೆಡೆಗೆ – 2023

- Advertisement -
- Advertisement -

ವಿಟ್ಲ : ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿಟ್ಲ ಇದರ ಕನ್ನಡ ಮತ್ತು ಸಾಹಿತ್ಯ ಸಮಿತಿ ಸಹಕಾರದೊಂದಿಗೆ ಪುಸ್ತಕ ಬಿಡುಗಡೆ, ಸಂವಾದ, ಬಾಲಕವಿಗೋಷ್ಟಿ ಮತ್ತು ಕವಿಗೋಷ್ಠಿ ಕಾರ್ಯಕ್ರಮ ನಡೆ ಸಾಹಿತ್ಯದೆಡೆಗೆ – 2023 ದಿನಾಂಕ 25-೦2-2023ನೇ ಶನಿವಾರ ಅಪರಾಹ್ನ 1.30 ರಿಂದ ವಿಟ್ಲ ಜೇಸೀ ಪೆವೇಲಿಯನ್, ವಿಠ್ಠಲ್ ಜೇಸೀಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ನಡೆಯಲಿದೆ.

ಮಧ್ಯಾಹ್ನ ನಡೆಯುವ ಸಭಾಕಾರ್ಯಕ್ರಮದಲ್ಲಿ ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಧ್ಯಕ್ಷ ಯಲ್.ಯನ್ ಕೂಡೂರು ಅಧ್ಯಕ್ಷತೆ ವಹಿಸಲಿದ್ದಾರೆ. ಭಾಸ್ಕರ ಅಡ್ವಾಳ ಮಕ್ಕಳ ಲೋಕ ಬಂಟ್ವಾಳ ಪುಸ್ತಕ ಬಿಡುಗಡೆ ಮತ್ತು ಉಪನ್ಯಾಸ ಮಾಡಲಿದ್ದಾರೆ. ಮಾಣಿ ಪ.ಪೂ ಕಾಲೇಜಿನ ಪ್ರಾಂಶುಪಾಲೆ ರಶ್ಮಿತಾ ಸುರೇಶ್, ಶೈಲಜಾ ಜಿ.ಎನ್, ಡಾ. ಕೃಷ್ಣಮೂರ್ತಿ ಪೋಷಕರ ಪರವಾಗಿ ಅನಿಸಿಕೆ ವ್ಯಕ್ತಪಡಿಸಲಿದ್ದಾರೆ. ಉಪ ಪ್ರಾಂಶುಪಾಲರಾದ ಜ್ಯೋತಿ ಶೆಣೈ, ಶಿಕ್ಷಕಿ ಸವಿತ ಶಿಕ್ಷಕರ ಪರವಾಗಿ ಅನಿಸಿಕೆ ವ್ಯಕ್ತಪಡಿಸಲಿದ್ದಾರೆ. ಪ್ರಾಂಶುಪಾಲ ಜಯರಾಮ ರೈ ಸ್ವಾಗತಿಸಲಿದ್ದಾರೆ. ಆಡಳಿತಾಧಿಕಾರಿ ರಾಧಾಕೃಷ್ಣ ಎ ಪ್ರಸ್ತಾವನೆಗೈಲಿದ್ದಾರೆ. ಪುಸ್ತಕ ಪರಿಚಯ ಸರಸ್ವತಿ ಡಿ., ಸಹಕಾರ ದೇವಿಕ ಪ್ರವೀಣ್ ವಿಟ್ಲ , ನಿರೂಪಣೆ ನಿಹಾ, ನವ್ಯ ಭಟ್ , ಸಹಕಾರ ಸಂಧ್ಯಾ ., ತನುಶ್ರೀ, ಉಪಪ್ರಾಂಶುಪಾಲರಾದ ಹೇಮಲತಾ ವಂದಿಸಲಿದ್ದಾರೆ.

ಅಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಯಲ್. ಯನ್. ಕೂಡೂರು ಅಧ್ಯಕ್ಷರು ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಅಧ್ಯಕ್ಷತೆ ವಹಿಸಲಿದ್ದಾರೆ. ಶಮ, ಚಿನ್ಮಯಿ, ನಮ್ರತಾ, ಋತ್ವಿಕಾ, ಮೊನೀಶ್ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಶಿಕ್ಷಕಿ ಕವಿತಾ, ಸರ್ವಮಂಗಳ ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ಕವಿಗೋಷ್ಠಿಯಲ್ಲಿ ರಾಜರಾಮ ವರ್ಮ ವಿಟ್ಲ ಕವಿಗೋಷ್ಠಿ ಅಧ್ಯಕ್ಷತೆ ವಹಿಸಲಿದ್ದಾರೆ. ತುಳಸಿ ಕೈರಂಗಳ ಕವಿಗೋಷ್ಠಿಗೆ ಚಾಲನೆ ನೀಡಲಿದ್ದಾರೆ. ಆದ್ಯಾ, ಅವನಿ, ದೃತಿ, ನವ್ಯ, ಪ್ರಜ್ವಲ್, ಮೋನಿಷ್, ಶಮಂತ್, ಶ್ರೀಯಾ, ಮೋಹಿತ್ ಹೆಚ್, ರಸ್ಕಿಯಾ, ನಮ್ರತ, ಮಹೀಮ ಆರ್.ಕೆ., ನಿನಾದ್ ಕೈರಂಗಳ ಬಾಲ ಕವಿಗಳಾಗಿ ಭಾಗವಹಿಸಲಿದ್ದಾರೆ. ಅಶೋಕ ಕಡೇಶಿವಾಲಯ, ಅನ್ನಪೂರ್ಣ ಕುತ್ಪಾಜೆ, ಜಯರಾಮ ಪಡ್ರೆ, ವಿಷ್ಣುಗುಪ್ತ ಪುಣಚ, ತುಳಸಿ ಕೈರಂಗಳ, ನಾರಾಯಣ ಕುಂಬ್ರ, ಡಾ.ಮೈತ್ರಿ ಭಟ್, ಹಿತೇಶ್ ಕುಮಾರ್, ಕಾವ್ಯಶ್ರೀ ಅಳಿಕೆ, ಲಿಖಿತ ಕೋಟ್ಯಾನ್, ಸೀತಾಲಕ್ಷ್ಮಿ ವರ್ಮ, ಶ್ರೀಕಲಾ ಕಾರಂತ್ ಅಳಿಕೆ, ರಶ್ಮಿತಾ ಸುರೇಶ್ ಹಿರಿಯ ಕವಿಗಳಾಗಿ ಭಾಗವಹಿಸಲಿದ್ದಾರೆ. ಶಿಕ್ಷಕಿಯರಾದ ಸೌಮ್ಯಾ ಸರಸ್ವತಿ, ಗೀತಾ, ಜಯಶ್ರೀ, ಶೀಲಾ ಸ್ವಾಗತಿಸಿ, ನಿರೂಪಿಸಲಿದ್ದಾರೆ. ವಿ.ಜೆ.ಇ.ಎಮ್. ಸಾಹಿತ್ಯ ಸಮಿತಿ ಪದಾಧಿಕಾರಿಗಳಾದ ಅಕ್ಷತಾ ಮತ್ತು ಅನನ್ಯ ಅಧ್ಯಕ್ಷರನ್ನು ಪರಿಚಯಿಸಲಿದ್ದಾರೆ. ಶಲೆಟ್ ಸೆಲೆಸ್ಟಿನ್ ಕಾರ್ಯಕ್ರಮ ವಂದಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!