Saturday, April 27, 2024
spot_imgspot_img
spot_imgspot_img

ವಿಟ್ಲ : (ಫೆ.5) ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ

- Advertisement -G L Acharya panikkar
- Advertisement -

ವಿಟ್ಲ : ಬಿಲ್ಲವ ಸಂಘ (ರಿ) ಕುಂಡಡ್ಕ ಗುರುನಗರ ಎಂಬಲ್ಲಿ ನೂತನವಾಗಿ ನಿರ್ಮಿಸಲಾದ ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ ಇದರ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ ಫೆ. 5 ರಂದು ನಡೆಯಲಿದೆ.

ಫೆ.04 ರಂದು ಸಂಜೆ ಗಂಟೆ 6.00ಕ್ಕೆ ವಾಸ್ತು ಪೂಜೆ, ವಿವಿಧ ವೈದಿಕ ವಿಧಿವಿಧಾನಗಳು ನಡೆಯಲಿದೆ. ಫೆ.05ರಂದು ಬೆಳಿಗ್ಗೆ 8.00ರಿಂದ ಗಣಹೋಮ, ಗುರುನಾಮ ಸಂಕೀರ್ತನೆ ನಂತರ ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ ಉದ್ಘಾಟನೆಗೊಂಡು ಸಭಾ ಕಾರ್ಯಕ್ರಮ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಅಪರಾಹ್ನ ಗಂಟೆ 3.00 ರಿಂದ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಸಂಜೆ 7.00ಕ್ಕೆ ಸರ್ವಜಾತಿ ಸಮ್ಮೀಲನ ನಡೆಯಲಿದೆ. ನಂತರ ಉಮೇಶ್ ಮಿಜಾರ್ ಸಾರಥ್ಯದ “ನಮ್ಮ ಕಲಾವಿದೆರ್‌ ಬೆದ್ರ” ತಂಡದಿಂದ “ಕುಸಲ್ದ ಗೊಬ್ಬು” ತುಳು ಹಾಸ್ಯಮಯ ನಾಟಕ ಪ್ರದರ್ಶನ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಫೆ.5ರಂದು ಬೆಳಿಗ್ಗೆನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಪರಮಪೂಜ್ಯ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಶ್ರೀ ಚಾಮುಂಡೇಶ್ವರೀ ದೇವಿ ಕ್ಷೇತ್ರ, ಕಣಿಯೂರು, ಮುರುವ ಮಾಣಿಲ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗೂರೂಜಿ ಆಶೀರ್ವಚನ ನೀಡಲಿದ್ದಾರೆ. ಕುಂಡಡ್ಕ ಬಿಲ್ಲವ ಸಂಘ (ರಿ.)ದ ಅಧ್ಯಕ್ಷ ದೂಮಪ್ಪ ಪೂಜಾರಿ ಅಧ್ಯಕ್ಷತೆ ವಹಿಸಲಿದ್ದಾರೆ. ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖಾ ಸಚಿವ ವಿ. ಸುನಿಲ್ ಕುಮಾರ್ ಘನ ಉಪಸ್ಥಿತರಿರುವರು. ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಸಂಜೀವ ಮಠಂದೂರು, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಗಣ್ಯ ಉಪಸ್ಥಿತರಿರುವರು.

ಕುದ್ರೋಳಿ ಗೋಕರ್ಣನಾಥ ಕ್ಷೇತ್ರ ಕೋಶಾಧಿಕಾರಿ ಪದ್ಮರಾಜ್ ಆರ್., ಲಯನ್ಸ್‌ ಜಿಲ್ಲಾ ಪೂರ್ವ ರಾಜ್ಯಪಾಲರು ಲಯನ್ ಡಾ| ಗೀತಪ್ರಕಾಶ್ ಎ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಶ್ಮಿ ಎಸ್. ಆರ್, ವಿಟ್ಲಮುಡ್ನೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಜಯಪ್ರಕಾಶ್ ನಾಯಕ್‌, ಉಪ್ಪಿನಂಗಡಿ ಯುವವಾಹಿನಿ ಕೇಂದ್ರ ಸಮಿತಿ ಹಾಗೂ ದಂತ ವೈದ್ಯರು, ಗಿರಿಜಾ ದಂತ ಚಿಕಿತ್ಸಾಲಯದ ಮಾಜಿ ಅಧ್ಯಕ್ಷ ಡಾ| ರಾಜಾರಾಮ್ ಕೆ. ಬಿ, ಪಲಿಮಾರು ರಾಧಾಕೃಷ್ಣ ಪೈ, ಉದ್ಯಮಿ, ವಿಟ್ಲ, ಕೆ. ಸಂಜೀವ ಪೂಜಾರಿ ಅಧ್ಯಕ್ಷರು, ದ. ಕ, ಜಿಲ್ಲಾ ಮೂರ್ತೆದಾರರ ಮಹಾಮಂಡಲ, ಡಾ| ಬಾಬು ಗೋವಿಂದ ಪೂಜಾರಿ, ಉದ್ಯಮಿ, ಪ್ರವೀಣ್ ಕುಮಾರ್ ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ಜಿಲ್ಲಾ ಕಛೇರಿ, ದ. ಕ. – 2, ಸಂಜೀವ ಪೂಜಾರಿ ನಿಡ್ಯ ಅಧ್ಯಕ್ಷರು, ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ ನಿ, ವಿಟ್ಲ, ಕೃಷ್ಣ ಎಂ ಪೂಜಾರಿ, ಉದ್ಯಮಿ, ಮುಂಬಯಿ, ಐರೋಡಿ ವಿಠಲ ಪೂಜಾರಿ ರಾಜ್ಯ ಕಾರ್ಯದರ್ಶಿ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ, ಯತೀಶ್ ಪೂಜಾರಿ ಹೊಸಗದ್ದೆ, ವಿಜಯಲಕ್ಷ್ಮೀ ಕ್ರಷರ್, ಪೈಸಾರಿ, ಸಂತೋಷ್ ಜೀವನ್, ಕ್ರಷರ್‌ ಉದ್ಯಮಿ, ಮಾಡತ್ತಡ್ಕ, ಪಿ. ಅಬ್ದುಲ್ ಕುಂಞಿ, ಎನ್‌.ಎಸ್.ಕ್ರಷರ್, ಕಂಬಳಿಮೂಲೆ, ಜಗದೀಶ್ ನಿಂಬಾಳ್ಕರ್‌ ಜೂನಿಯರ್ ಇಂಜಿನಿಯರ್ R.W.S. ಸಬ್ ಡಿವಿಷನ್ ಬಂಟ್ವಾಳ, ಉಷಾ ಡಿ., ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವಿಟ್ಲ , ಸರಿತಾ ರೂಪರಾಜ್‌ ಅಧ್ಯಕ್ಷರು, ಬಿಲ್ಲವ ಸಂಘ ಮಹಿಳಾ ಘಟಕ, ವಿಟ್ಲ, ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಾರಾಯಣ ಪೂಜಾರಿ ಎಸ್‌. ಕೆ. ಗೌರವಾಧ್ಯಕ್ಷರು, ಬಿಲ್ಲದ ಸಂಘ (ರಿ.) ಕುಂಡಡ್ಕ, ಯತೀಶ ಪೂಜಾರಿ ಬೇರಿಕೆ, ಸಂಚಾಲಕರು, ಕಟ್ಟಡ ಸಮಿತಿ ಗೌರವ ಉಪಸ್ಥಿತರಿರುವರು.

ಫೆ. 5 ರಂದು ಸಂಜೆ ನಡೆಯುವ ಸರ್ವಜಾತಿ ಸಮ್ಮಿಲನದಲ್ಲಿ ವಿಠಲ ಪೂಜಾರಿ, ನಿಕಟಪೂರ್ವ ಅಧ್ಯಕ್ಷರು, ಬಿಲ್ಲವ ಸಂಘ (ರಿ.) ಕುಂಡಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆರ್. ಸಿ. ನಾರಾಯಣ ರೆಂಜ ಜಿಲ್ಲಾಧ್ಯಕ್ಷರು, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ, ದ. ಕ., ಸಚಿನ್ ಕುಮಾರ್ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಉಡುಪಿ ಜಿಲ್ಲೆ, ಹರೀಶ್ ಸಿ. ಹೆಚ್. ಅಧ್ಯಕ್ಷರು, ಬಿಲ್ಲವ ಸಂಘ (ರಿ.) ವಿಟ್ಲ, ಅವಿನಾಶ್, ನಿಯೋಜಿತ ಅಧ್ಯಕ್ಷರು, ಯುವವಾಹಿನಿ ವಿಟ್ಲ, ನರ್ಸಪ್ಪ ಪೂಜಾರಿ ನಿಡ್ಯ, ಅಧ್ಯಕ್ಷರು, ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘ, ವಿಟ್ಲ, ವಿಶ್ವನಾಥ ಪೂಜಾರಿ, ಮಂಜುನಾಥ ಆಗ್ರೋ ಕೇರ್, ಮೈಸೂರು, ಕೇತನ್ ಬಂಗೇರ, ವಕೀಲರು, ಬೆಂಗಳೂರು, ಬಾಲಕೃಷ್ಣ ಶೆಟ್ಟಿ ಅಧ್ಯಕ್ಷರು, ಶ್ರೀ ಕ್ಷೇ. ಧ. ಗ್ರಾ, ಯೋಜನೆ, ವಿಟ್ಲಮುಡೂರು ಒಕ್ಕೂಟ, ವಿಟ್ಲ ವಲಯ, ಚಂದ್ರಾವತಿ, ಉಪಾಧ್ಯಕ್ಷರು, ವಿಟ್ಲಮುಡ್ನೂರು ಗ್ರಾಮ ಪಂಚಾಯತ್‌, ರೋಹಿಣಿ, ಸದಸ್ಯರು, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌, ಉಮೇಶ್ ಗೌಡ, ಸದಸ್ಯರು, ವಿಟ್ಲಮುಡ್ನೂರು ಗ್ರಾಮ ಪಂಚಾಯತ್‌, ಬಿ. ಕೆ. ರವಿ, ಶರಣಂ ಕನ್‌ಸ್ಟ್ರಕ್ಷನ್, ಪುತ್ತೂರು, ತೀರ್ಥರಾಮ ಗೌಡ, ಅಧ್ಯಕ್ಷರು, ಹಾಲು ಉತ್ಪಾದಕರ ಸಂಘ, ಕುಂಡಡ್ಕ, ದಯಾನಂದ ಶೆಟ್ಟಿ ಉಜಿರೆಮಾರು, ಅಧ್ಯಕ್ಷರು, ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ವಿಷ್ಣುನಗರ, ಬಿ. ಚೆನ್ನಪ್ಪ ಪೂಜಾರಿ ಗೌರವ ಸಲಹೆಗಾರರು, ಬ್ರಹ್ಮಶ್ರೀ ವಿವಿಧೋದ್ದೇಶ ಸಹಕಾರಿ ಸಂಘ, ವಿಟ್ಲ, ಮಹೇಶ್ ಓಟೆ, ಎಂ.ಸಿ.ಎಫ್. ಮಂಗಳೂರು, ಚೇತನ್‌ ಕುಮಾರ್, ಮೀನುಗಾರಿಕಾ ಸಹಾಯಕ ನಿರ್ದೇಶಕರು, ಹೊನ್ನಾವರ, ಚೇತನ್ ಮರುವಾಳ, ಉದ್ಯಮಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!