Thursday, May 2, 2024
spot_imgspot_img
spot_imgspot_img

ವಿಟ್ಲ: ಬರೋಬ್ಬರಿ 15,000 KM ಸೈಕಲ್‌ ಯಾತ್ರೆ ಕೈಗೊಳ್ಳಲಿದ್ದಾರೆ ಸಾಬಿತ್..! ಮಕ್ಕಾ ಯಾತ್ರೆ, ಈಜಿಫ್ಟ್‌ನಲ್ಲಿ ಉನ್ನತ ಧಾರ್ಮಿಕ ವಿಧ್ಯಾಭ್ಯಾಸಕ್ಕಾಗಿ ಪಯಣ

- Advertisement -G L Acharya panikkar
- Advertisement -

ವಿಟ್ಲದ ಯುವಕನೊಬ್ಬ ವಿಶೇಷ ಸಾಧನೆ ಮಾಡಲು ಮುಂದಾಗಿದ್ದಾರೆ. ಬರೋಬ್ಬರಿ ೧೫ ಸಾವಿರ ಕಿಲೋ ಮೀಟರ್‌ ದೂರವನ್ನು ಸೈಕಲ್‌ ಮೂಲಕ ಸಂಚರಿಸಲಿದ್ದಾರೆ. ಪವಿತ್ರ ಮಕ್ಕಾ ಯಾತ್ರೆ ಹಾಗೂ ಈಜಿಪ್ಟ್ ನಲ್ಲಿ ಉನ್ನತ ಧಾರ್ಮಿಕ ವಿಧ್ಯಾಭ್ಯಾಸ ಪಡೆಯಲು 10 ದೇಶಗಳನ್ನೊಳಗೊಂಡ 15,000 ಕಿ.ಮೀ. ಕ್ರಮಿಸುವ ಸೈಕಲ್ ಯಾತ್ರೆ ಕೈಗೊಳ್ಳಲಿದ್ದಾರೆ. ವಿಟ್ಲ ಸಮೀಪದ ಬೈರಿಕಟ್ಟೆಯ ಸಾಬಿತ್ ಎಂಬುವವರೇ ಈ ಅಪೂರ್ವ ಸಾಧನೆ ಮಾಡಲು ಮುಂದಾದ ಯುವಕ.

ಇದೇ ಅ. 20 ರಂದು ಕೇರಳದ ತಿರುವನಂತಪುರದಿಂದ ಯಾತ್ರೆ ಹೊರಡಲಿದ್ದಾರೆ. ಹಾಫಿಲ್ ಅಹ್ಮದ್ ಸಾಬಿತ್ ಅವರು ಈಗಾಗಲೇ ಕೇರಳವನ್ನು ಸೈಕಲ್ ನಲ್ಲಿ ಸುತ್ತಿ ಅನುಭವ ಪಡೆದಿದ್ದಾರೆ. ಮದೀನಾ ಮತ್ತು ಈಜಿಫ್ಟಿನ ವಿಶ್ವವಿದ್ಯಾನಿಲಯಕ್ಕೆ ಸೈಕಲ್ ಮೂಲಕ 15,000 ಕಿಲೋಮೀಟರ್ ದೂರ ಸಂಚರಿಸಿ ಭೇಟಿ ನೀಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಬಿತ್, ಅಕ್ಟೋಬರ್ 19ರಂದು ಕನ್ಯಾಕುಮಾರಿ ತಿರುವನಂತಪುರದಿಂದ ಹೊರಡುವ ಕರ್ನಾಟಕ, ಗೋವಾ, ಮಹಾರಾಷ್ಟ್ರ, ರಾಜಸ್ತಾನ, ಹರಿಯಾಣ, ಪಂಜಾಬ್, ಜಮ್ಮು ಕಾಶ್ಮೀರ, ಲಡಾಖ್ ಸಾಗಿ ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್, ಯುಎಇ, ಸೌದಿ ಮದೀನಾ ತಲುಪುವ ಉದ್ದೇಶ ಹೊಂದಿದ್ದೇನೆ. ಅಲ್ಲಿಂದ ಆಫ್ರಿಕಾ ಖಂಡದ ಈಜಿಫ್ಟ್‌ ಕೈರೋಗೆ ಹೋಗುತ್ತೇನೆ. ಅಲ್ಲಿ ಎರಡು ವರ್ಷಗಳ ಕಾಲ ಹೆಚ್ಚಿನ ವಿದ್ಯಾಭ್ಯಾಸ ಮಾಡುವು ಗುರಿ ಹೊಂದ್ದಿದ್ದೇನೆ ಎಂದು ತಿಳಿಸಿದರು.

ಸಾಬಿತ್ ಅವರು ಕುರ್ ಆನ್ ಕಂಠಪಾಠ ಮತ್ತು ಉಪನ್ಯಾಸ ನೀಡುವುದರಲ್ಲಿ ಈಗಾಗಲೇ ಸಾಧನೆ ಮಾಡಿದ್ದಾರೆ. ಇವರು ಇನ್ ಸ್ಟಾಗ್ರಾಮ್ ನಲ್ಲಿ 60,000ಕ್ಕೂ ಹೆಚ್ಚು ಮಂದಿ ಫಾಲೋವರ್ ಗಳನ್ನು ಹೊಂದಿದ್ದಾರೆ. ಅತ್ಯಂತ ಕಿರಿಯ ತರಬೇತುದಾರನಾಗಿ ಇಂಡಿಯಾ ಬುಕ್ ರೆಕಾರ್ಡ್ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅಬೂಬಕರ್ ಪುತ್ತೂರು, ಉಬೈದ್ ವಿಟ್ಲ ಬಝಾರ್, ಮೊದಲಾದವರು ಉಪಸ್ಥಿತರಿದ್ದರು.

astr
- Advertisement -

Related news

error: Content is protected !!