Friday, April 26, 2024
spot_imgspot_img
spot_imgspot_img

ವಿಟ್ಲ: ಬಾಲಗೋಕುಲ ಸಮಿತಿ ವತಿಯಿಂದ ವಿಜೃಂಭಣೆಯಿಂದ ನಡೆದ ಶ್ರೀಕೃಷ್ಣ ಜನಾಷ್ಟಮಿ ಆಚರಣೆ

- Advertisement -G L Acharya panikkar
- Advertisement -

ವಿಟ್ಲ: ಬಾಲಗೋಕುಲ ಸಮಿತಿ ವಿಟ್ಲ ಕ್ಷೇತ್ರ ಮೈತ್ರೇಯಿ ಗುರುಕುಲದ ಸಹಕಾರದೊಂದಿಗೆ ವಿಟ್ಲ ಸುತ್ತಮುತ್ತಲಿನ ಎಲ್ಲಾ ಬಾಲಗೋಕುಲದ ಮಕ್ಕಳನ್ನೊಳಗೊಂಡು ದಿನಾಂಕ 18-08-2022ನೇ ಗುರುವಾರ ಬೆಳಿಗ್ಗೆ 15ನೇ ವರುಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಿತು.

ಬೆಳಿಗ್ಗೆ 9.30ಕ್ಕೆ ವಿಟ್ಲ ಶ್ರೀ ಪಂಚಲೀಂಗೆಶ್ವರ ದೇವಸ್ಥಾನದ ವಠಾರದಿಂದ ವಿಟ್ಲದ ಪ್ರಮುಖ ರಸ್ತೆಯಲ್ಲಿ ಶ್ರೀ ಕೃಷ್ಣ ವೇಷಧಾರಿ ಮಕ್ಕಳ ಶೋಭಾಯಾತ್ರೆ ನಡೆಯಿತು. ಈ ಕಾರ್ಯಕ್ರಮಕ್ಕೆ ನಿವೃತ್ತ ಭೂಸೇನಾ ಅಧಿಕಾರಿಯಾಧ ಡಾ. ಕ್ಯಾಪ್ಟನ್‌ ದಾಸಪ್ಪ ಪೂಜಾರಿ ನೆಕ್ಕಿಲಾರು, ಚಾಲನೆ ನೀಡಿದ್ದರು.

ನಂತರ ಬೆಳಿಗ್ಗೆ 11.00 ಗಂಟೆಗೆ ಸುವರ್ಣ ರಂಗಮಂದಿರ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ದೀಪ ಪ್ರಜ್ವಲನೆಯನ್ನು ವಿಠಲ ಕೂಜಪ್ಪಾಡಿ, ವಿಟ್ಲ ಇವರು ಬೆಳಗಿಸಿ, ಅಧ್ಯಕ್ಷತೆಯನ್ನು ವಿಟ್ಲ ಪಡ್ನೂರು ಗ್ರಾಮಪಂಚಾಯತ್ ಅಧ್ಯಕ್ಷರಾದ ರೇಷ್ಮಾಶಂಕರಿ ಬಲಿಪಗುಳಿ ವಹಿಸಿದ್ದರು. ಮುಖ್ಯ ಭಾಷಣವನ್ನು ಕುಟುಂಬ ಪ್ರಬೋದನ ಮಂಗಳೂರು ವಿಭಾಗ ಸಹ ಸಂಯೊಜಕ್, ಗಜಾನನ ಪೈ ಮಾಡಿದ್ದರು. ಅತಿಥಿಗಳಾಗಿ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮುರಳಿ ಶ್ಯಾಮ್ ಹಾಗೂ ಹಿಂದೂ ಯುವಸೇನೆ ವಿಟ್ಲ ಅಧ್ಯಕ್ಷರಾದ ರಘುಪತಿ ಪೈ ವಹಿಸಿದ್ದರು.

ಲಲಿತ ಕಲಾ ಸಧನ ವಿಟ್ಲ ಇದರ ನಿರ್ದೇಶಕಿ ವಿಧೂಷಿ ನಯನಾ ಸತ್ಯನಾರಾಯಣ ಮತ್ತು ಬಳಗದವರಿಂದ ಭರತನಾಟ್ಯ ಕಾರ್ಯಕ್ರಮ ಮತ್ತು ಬಾಲಗೋಕುಲದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ವಿಟ್ಲ ಪರಿಸರದ ಮಕ್ಕಳು ಶ್ರೀ ಕೃಷ್ಣ ಗೋಪಿಕೆಯರ ವೇಷ ಧರಿಸಿ ಕಂಗೋಳಿಸಿದ್ದರು.

vtv vitla
- Advertisement -

Related news

error: Content is protected !!