Sunday, June 14, 2026
spot_imgspot_img
spot_imgspot_img

ವಿಟ್ಲ: ಬೀದಿ ನಾಯಿಗಳ ಹಾವಳಿಗೆ ತತ್ತರಿಸಿದ ನಾಗರಿಕರು: ಪ.ಪಂ ಮುಖ್ಯಾಧಿಕಾರಿಯವರಿಗೆ ದೂರು

- Advertisement -
- Advertisement -
vtv vitla

ವಿಟ್ಲ ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಿದ್ದು ಪಟ್ಟಣದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಎಂ.ಆರ್ ನಾಯಕ್ ಪೆಟ್ರೋಲ್ ಪಂಪ್ ಬಳಿ ಬೀದಿ ನಾಯಿಗಳ ಕಾಟ ಮಿತಿಮೀರಿದ್ದು, ವಿಟ್ಲ ಪೇಟೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿರುವುದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಹಾಗೂ ಪಾದಾಚಾರಿಗಳ ಮೇಲೆ ದಾಳಿ ಮಾಡಲು ಧಾವಿಸುವ ಬೀದಿ ನಾಯಿಗಳ ಕುರಿತು ಅತೀ ಶೀಘ್ರವಾಗಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಪೆಟ್ರೋಲ್ ಪಂಪ್ ಬಳಿಯ ನಾಗರಿಕರು ವಿಟ್ಲ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಯವರಿಗೆ ದೂರನ್ನು ನೀಡಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

- Advertisement -

Related news

error: Content is protected !!