Sunday, May 19, 2024
spot_imgspot_img
spot_imgspot_img

ವಿಟ್ಲ: ಬೃಹತ್ ಹಿಂದೂ ಜಾಗೃತಿ ಸಭೆ; ‘ಆಕ್ಷನ್ ಗೆ ರಿಯಾಕ್ಷನ್ ಹಿಂದೂ ಸಮಾಜದ ಧರ್ಮ’; ಮುರಳಿಕೃಷ್ಣ ಹಸಂತಡ್ಕ

- Advertisement -G L Acharya panikkar
- Advertisement -

ವಿಟ್ಲ: ವಿಶ್ವ ಹಿಂದು ಪರಿಷದ್ ಬಜರಂಗದಳ ವಿಟ್ಲ ಪ್ರಖಂಡ ಮತ್ತು ಹಿಂದು ಜಾಗರಣ ವೇದಿಕೆ ವಿಟ್ಲ ಆಶ್ರಯದಲ್ಲಿ ಲವ್ ಜಿಹಾದ್, ಮತಾಂತರ, ಗೋಹತ್ಯೆ, ಸಾಮಾಜಿಕ ಜಾಲತಾಣಗಳಲ್ಲಿ ಹಿಂದು ನಾಯಕರ ಅವಹೇಳನದ ವಿರುದ್ದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೃಹತ್ ಹಿಂದು ಜಾಗೃತಿ ಸಭೆಯು ವಿಟ್ಲದ ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದ ಸಮೀಪ ನಡೆಯಿತು.

ಈ ಸಭೆಯಲ್ಲಿ ಕರ್ನಾಟಕ ದಕ್ಷಿಣ ಸಹ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ರವರು ಮಾತನಾಡಿ ಹಿಂದುಗಳೇ ಬದುಕಿ ಆಳಬೇಕಾಗಿರುವ ಈ ನಾಡಿನಲ್ಲಿ ಜಿಹಾದಿನ ಹೆಸರಿನಲ್ಲಿ ಹಿಂದೂ ಸಮಾಜವನ್ನು ನುಚ್ಚುನೂರು ಮಾಡ್ತೀವಿ, ಜಿಹಾದಿನ ಹೆಸರಿನಲ್ಲಿ ಹಿಂದೂ ಸಮಾಜದ ಮೇಲೆ ದೌರ್ಜನ್ಯ ಮಾಡ್ತೀವಿ, ಎಂದು ಅಲ್ಲಲ್ಲಿ ನಮ್ಮನ್ನು ತಾಂಟಲು ಕರಿಯುತ್ತಿರುವ ದುಷ್ಟ ಶಕ್ತಿಗಳು ಯಾರಿದ್ದಾರೆ ಅವರಿಗೊಂದು ಸಂದೇಶ ಹೊಗ್ಬೇಕು. ದೇಶಕ್ಕೆ ಬಂದಿರುವ ಎಲ್ಲರನ್ನೂ ಸ್ವೀಕಾರ ಮಾಡಿರುವ ಹಿಂದೂ ಸಮಾಜವನ್ನು ಜಿಹಾದಿನ ಹೆಸರಿನಲ್ಲಿ ಒಡೆಯುವ ಪಿತೂರಿ ನಡೆಯುತ್ತಿದೆ. ಹಿಂದೂ ಸಮಾಜ ಒಟ್ಟಾಗಿ ಸಿಂಹ ಘರ್ಜನೆ ಹಾಕುವಂತಹ ಕಾಲ ಸನ್ನಿಹಿತವಾಗಿದೆ‌. ‌ಹಿಂದೂ ಸಮಾಜಕ್ಕೆ ತನ್ನದೇ ಆಗರುವ ಬದ್ಧತೆ ಇದೆ. “ಆಕ್ಷನ್ ಗೆ ರಿಯಾಕ್ಷನ್ ಹಿಂದೂ ಸಮಾಜದ ಧರ್ಮ” ಎಂದು ಹೇಳಿದರು.

ಕಣಿಯೂರಿನಲ್ಲಿ ನಡೆದ ಬಾಲಕಿಯ ಸಾವು ಆತ್ಮಹತ್ಯೆಯಲ್ಲ ಅದೊಂದು ಕೊಲೆ, ಘೋರ ಅನ್ಯಾಯವಾಗಿದೆ. 
ಯಾರೂ ಅವರಿಗೆ ಸಾಂತ್ಚನ ಹೇಳಲು ಬಂದಿಲ್ಲ. ದಲಿತರು ನಮ್ಮ ಜೊತೆ ಇದ್ದಾರೆ ಎಂದು ಭಾಷಣ ಮಾಡಿದ್ರು. ದಲಿತರು ನಾವು ಒಟ್ಟಾಗುತ್ತೀವಿ ಭಾಯಿ ಭಾಯಿ ಎಂದು ಹೇಳಿದ್ರು. ಅದರೆ ಮುಸ್ಲಿಂ ಸಮುದಾಯದ ವ್ಯಕ್ತಿಯೋರ್ವ ಬಾಲಕಿಯನ್ನು ಲವ್ ಜಿಹಾದ್ ನಡೆಸಿ ಕೊಲೆ ಮಾಡಿರುವಂತಹ ಸಂದರ್ಭದಲ್ಲಿ ಯಾವೊಬ್ಬನೂ ಸಾಂತ್ವನ ಹೇಳಿಲ್ಲ. ಆಗ ಹಿಂದೂ ಸಮಾಜ ಅವರಿಗೆ ಧೈರ್ಯ ತುಂಬಿತ್ತು. ಅನೇಕ ಕೆಟ್ಟ ಪದಗಳನ್ನು ಬಳಸಿ ಮಾತಾಡ್ತೀರಲ್ಲ ನೀವು ಆಕೆಗೆ ಸಾಂತ್ವನ ಹೇಳಿದ್ರಾ, ಬೆಂಬಲ ಸೋಚಿಸಿದ್ರಾ. ಯಾಕಾಗಿ ಮಾಡ್ಲಿಲ್ಲಾ ಎಲ್ಲವೂ ನಿಮ್ಮ ನಾಟಕವಲ್ವಾ ಸ್ವಾಮಿ. ದೇಶದ ಸವಲತ್ತುಗಳು ಬೇಕು, ಸಂವಿಧಾನ ಬೇಡ ಎನ್ನುವ ಕಾರ್ಯವಾಗುತ್ತಿದೆ ಎಂದರು.

ವಿಶ್ವ ಸಂವಾದ ವಿಭಾಗ ಪ್ರಚಾರ ಪ್ರಮುಖ್ ತನ್ಮಯಿಯವರು ಮಾತನಾಡಿ ವಿವಿಧ ರೀತಿಯಲ್ಲಿ ಹಿಂದು ಯುವತಿಯರನ್ನು ಸಿಲುಕಿಸುವ ಕಾರ್ಯ ಮಾಡಲಾಗುತ್ತದೆ. ಜ್ಞಾನ ಕೇಂದ್ರಗಳ ಮೇಲೆ ದಾಳಿಗಳನ್ನು ಮಾಡಲಾಗುತ್ತಿದೆ. ಹಿಂದುಗಳಿಗೆ ಭಾರತವೊಂದೇ ಮಾತೃಭೂಮಿಯಾಗಿದ್ದು, ಷಡ್ಯಂತ್ರಗಳನ್ನು ನಾವು ತಿಳಿದುಕೊಂಡು ಎಚ್ಚೆತ್ತುಕೊಳ್ಳಬೇಕು. ಜಾಗೃತ ಸಮಾಜದಿಂದ ಅದ್ಭುತ ದೇಶ ಕಟ್ಟಲು ಸಾಧ್ಯ. ಇಡೀ ಹಿಂದೂ ಸಮಾಜ ಯಾವತ್ತು ಷಂಡರಂತೆ ಮಲಗಿಲ್ಲ. ನಮಗೆ ಪ್ರೀತಿಯ ಬಗ್ಗೆ ದ್ವೇಷವಿಲ್ಲ‌. ಇಡೀ ದೇಶಕ್ಕೆ ಪರಿಶುದ್ಧ ಪ್ರೇಮ ಕಲಿಸಿಕೊಟ್ಟವರು ಹಿಂದೂಗಳು. “ಇಸ್ಲಾಂ ಧರ್ಮವಲ್ಲ ಅದೊಂದು ಮತ ಮಾತ್ರ” ಎಂದರು.

ತನ್ಮಯಿ

ಹಿಂದು ಜಾಗರಣ ವೇದಿಕೆ ಪ್ರಾಂತ ಪ್ರಶಿಕ್ಷಣ್ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯರವರು ಮಾತನಾಡಿ ಇಸ್ಲಾಂ ಧರ್ಮ ಒಂದು ಕ್ರೌರ್ಯ, ಅಮಾನುಷತೆ.  ಅವರೆಲ್ಲರ ಚಟುವಟಿಕೆಗಳು ಮುಂಚೂಣಿಗೆ ಬಂದಾಗ ನಮಗದು ಅರ್ಥವಾಗುತ್ತದೆ. ವಿಕೃತ ಮನಸ್ಸಿನವರು ಮುಸ್ಲೀಮರು. ನಾವು ಅವರನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸೋತಿದ್ದೇವೆ. ನಮ್ಮ ಬುದ್ದಿಶಕ್ತಿಯನ್ನು ಚುರುಕುಗೊಳಿಸುವ ಕೆಲಸ ಮಾಡಬೇಕು. ಇಡೀ ಜಗತ್ತನ್ನು ಸ್ವೀಕಾರ ಮಾಡಿದವರು ನಾವು. ಹಿಂದೂ ಎಂದರೆ ಸಕಲ ಸದ್ಗುಣಗಳ ಗಣಿ. ಪ್ರತಿಯೊಬ್ಬರು ಭಾರತದ ಇತಿಹಾಸವನ್ನು ಅದ್ಯಯನ‌ ಮಾಡುವ ಕೆಲಸವಾಗಬೇಕು. ಜಗತ್ತನ್ನು ಉಳಿಸಲು ಹಿಂದು ಸಮಾಜ ಶಕ್ತಿಶಾಲಿಯಾಗಬೇಕು. ಹಿಂದು ಭಾವನೆ ಹೃದಯದಿಂದ ಬೆಳಗಬೇಕು. ಉತ್ತಮ ಕೆಲಸ ಮಾಡಿದವರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಪಿಶಾಚಿಗಳ ಉಚ್ಚಾಟನೆಗೆ ಸರಿಯಾದ ಸಿದ್ಧತೆ ಮಾಡಬೇಕಾಗಿದೆ. ಹಿಂದು ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯವಾಗಬೇಕು ಎಂದರು.

ರಾಧಾಕೃಷ್ಣ ಅಡ್ಯಂತಾಯ

ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಪ್ರತಿನಿಧಿಯಾಗಿ ಜಯರಾಮ ವಿಟ್ಲ, ವಿಶ್ವ ಹಿಂದು ಪರಿಷದ್ ಜಿಲ್ಲಾ ಅಧ್ಯಕ್ಷ ಡಾ. ಕೆ. ಪ್ರಸನ್ನ ಉಪಸ್ಥಿತರಿದ್ದರು.

ಚರಣ್ ಧರ್ಮನಗರ ವೈಯಕ್ತಿಕ ಗೀತೆ ಹಾಡಿದರು. ವಿಶ್ವ ಹಿಂದು ಪರಿಷದ್ ವಿಟ್ಲ ಪ್ರಖಂಡ ಅಧ್ಯಕ್ಷ ಪದ್ಮನಾಭ ಕಟ್ಟೆ ಸ್ವಾಗತಿಸಿದರು. ಜಿಲ್ಲಾ ಸಹ ಕಾರ್ಯದರ್ಶಿ ಗೋವರ್ಧನ್ ವಂದಿಸಿದರು. ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಪುತ್ತೂರು ರಸ್ತೆಯ ಮೇಗಿನ ಪೇಟೆಯ ಜೈನಬಸದಿ ಬಳಿಯಿಂದ ಸಭಾ ವೇದಿಕೆಯವರೆಗೆ ಮೆರವಣಿಗೆ ನಡೆಯಿತು.

- Advertisement -

Related news

error: Content is protected !!