Tuesday, July 8, 2025
spot_imgspot_img
spot_imgspot_img

ವಿಟ್ಲ: ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ ಇದರ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಕಿಟ್‌ ವಿತರಣಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಲ ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಟ ಕಣ್ಣಿನ ಆಸ್ಪತ್ರೆ ಮಂಗಳೂರು ಮತ್ತು ಕಟ್ಟಡ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಶ್ರಮಯೋಗಿ ಪೆನ್ಷನ್ ನೋಂದಾವಣಿ ಹಾಗೂ ಸಾರ್ವಜನಿಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ, ಪ್ರತಿರಕ್ಷಣ ಕಿಟ್ ವಿತರಣೆಯು ಅಕ್ಷಯ ಸಮುದಾಯ ಭವನ ಶಾಂತಿನಗರ ಮಂಗಳೂರು ರಸ್ತೆ ವಿಟ್ಲ ಇಲ್ಲಿ ನಡೆಯಿತು.

ಈ ಶಿಬಿರದಲ್ಲಿ ಐನೂರಕ್ಕಿಂತಲೂ ಅತೀ ಹೆಚ್ಚು ಜನ ಭಾಗವಹಿಸಿದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗ ಸಂಘದ ಪ್ರಧಾನ ಕಾರ್ಯದರ್ಶಿ ಕೆ ಮೋನಪ್ಪ ಗೌಡ ಶಿವಾಜಿನಗರ, ಪ್ರಸಾದ್ ನೇತ್ರಾಲಯದ ಡಾ. ವೃಂದ, ಕರ್ನಾಟಕ ಕಾರ್ಮಿಕ ಇಲಾಖೆ ಆರೋಗ್ಯ ಕೇಂದ್ರದ ಡಾ.ಪ್ರಶಸ್ತಿ, ವಿಟ್ಲ ಅರಮನೆಯ ಜಯರಾಮ್ ಬಲ್ಲಾಲ್, ಹಿರಿಯ ಕಾರ್ಮಿಕರು ಲಿಂಗಪ್ಪ ಗೌಡ , ಮಾಜಿ ಪಟ್ಟಣ ಪಂಚಾಯತ್ ಸದಸ್ಯರು ಶ್ರೀಕೃಷ್ಣ ವಿಟ್ಲ ಉಪಸ್ಥಿತರಿದ್ದರು.

ವಿಟ್ಲ ಬಿಎಂಎಸ್‌ ಅಧ್ಯಕ್ಷ ರಾಜೇಶ್. ವಿ ಬೊಬ್ಬೆಕೇರಿ, ಉಪಾಧ್ಯಕ್ಷರು ನಾಗೇಶ್ ಸುವರ್ಣ, ಕಾರ್ಯದರ್ಶಿ ಸಂದೇಶ್ ಕೆಳಿಂಜ, ಜೊತೆ ಕಾರ್ಯದರ್ಶಿ ಸಂತೋಷ್ ಕೆಳಿಂಜ, ಬಿಎಂಎಸ್ ವಿಟ್ಲ ಕಚೇರಿಯ ವ್ಯವಸ್ಥಾಪಕ ಪ್ರೀತಮ್ ಗೌಡ ದೇವಸ್ಯ ವಿಟ್ಲ ಹಾಗೂ ವೀರಕಂಬ ಬಿಎಂಎಸ್ ಅಧ್ಯಕ್ಷ ಅನಂತೇಶ ಹಾಜರಿದ್ದರು.

ಆರೋಗ್ಯ ಶಿಬಿರ ಮತ್ತು ನೇತ್ರ ತಪಾಸಣಾ ಶಿಬಿರವು ಸಾರ್ವಜನಿಕರಿಗಾಗಿ ಮಂಗಳವಾರದಂದು ಅಕ್ಷಯ ಸಮುದಾಯ ಭವನ ಶಾಂತಿನಗರ ಮಂಗಳೂರು ರಸ್ತೆ ವಿಟ್ಲ ಇಲ್ಲಿ ನಡೆಯಲಿದೆ.

- Advertisement -

Related news

error: Content is protected !!