Wednesday, May 1, 2024
spot_imgspot_img
spot_imgspot_img

ವಿಟ್ಲ : ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ದಕ್ಷಿಣ ಕನ್ನಡ ವಿಟ್ಲ ಸ್ಥಳೀಯ ಸಂಸ್ಥೆಯಿಂದ ದೇಶಭಕ್ತಿ ಗೀತೆ  ಮತ್ತು ಜಾನಪದ ಗೀತಾ ಗಾಯನ ಕಾರ್ಯಕ್ರಮ

- Advertisement -G L Acharya panikkar
- Advertisement -

ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ದಕ್ಷಿಣ ಕನ್ನಡ ವಿಟ್ಲ ಸ್ಥಳೀಯ ಸಂಸ್ಥೆ ವಿಟ್ಲ ನಾಡೋಜ ಡಾ. ಗೋ. ರ ಚನ್ನಬಸಪ್ಪನವರ ಹೆಸರಿನಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ದೇಶಭಕ್ತಿ ಗೀತೆ  ಮತ್ತು ಜಾನಪದ ಗೀತಾ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ (ಆರ್ ಎಂ ಎಸ್ ಎ) ಶಾಲೆಯಲ್ಲಿ ದಿನಾಂಕ 26/ 8/ 2023ರ ಶನಿವಾರರಂದು ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಸುದರ್ಶನ್  ಪಡಿಯರ್ ರವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ವಿಟ್ಲ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಯಾದ ಶ್ರೀಮತಿ ಜಲಜಾಕ್ಷಿ ವಹಿಸಿದ್ದರು . ಅತಿಥಿಗಳಾಗಿ ವಿಟ್ಲ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಯುತ ಜಯರಾಮ್ ಬಲ್ಲಾಳ್, ಶ್ರೀಮತಿ ಪುಷ್ಪ, ವಿಟ್ಲ ಕ್ಲಸ್ಟರ್ ಸಿ ಆರ್ ಪಿ ಶ್ರೀಮತಿ ಬಿಂದು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಮತಿ ವಾರಿಜ ಕಾರ್ಯದರ್ಶಿಯಾದ ಶ್ರೀಯುತ ಪ್ರತೀಪ ಭಾಗವಹಿಸಿದರು.
ಕಾರ್ಯಕ್ರಮ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಸ್ವಾಗತವನ್ನು ಕಾರ್ಯದರ್ಶಿಗಳು ನೆರವೇರಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಜಯಶ್ರೀ ಅವರು ನೆರವೇರಿಸಿದರು.

ಸ್ಪರ್ಧೆಯಲ್ಲಿ ವಿಜೇತರಾದ ವಿಭಾಗ ವಾರು ಸಂಸ್ಥೆಯ ವಿವರ

ಜಾನಪದ ಗೀತೆ —-
ರೇಂಜರ್ ವಿಭಾಗದಲ್ಲಿ
1 .ಸರ್ಕಾರಿ ಪ್ರಥಮ ದರ್ಜೆಯ ಕಾಲೇಜ್ ವಿಟ್ಲ .

ಸ್ಕೌಟ್ಸ್ ವಿಭಾಗ
ಪ್ರಥಮ –
ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ .

ದ್ವಿತೀಯ –
ಶ್ರೀ ಸರಸ್ವತಿ ವಿದ್ಯಾ ಕೇಂದ್ರ ಕನ್ಯಾನ

ತೃತೀಯ
ವಿಠಲ್ ಪ್ರೌಢಶಾಲೆ ವಿಟ್ಲ

ಗೈಡ್ಸ್ ವಿಭಾಗದಲ್ಲಿ
ಪ್ರಥಮ ಸ್ಥಾನ
ವಿಠಲ್ ಜೆಸಿಸ್ ಆಂಗ್ಲ ಮಾಧ್ಯಮ ಶಾಲೆ ವಿಟ್ಲ

ದ್ವಿತೀಯ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕನ್ಯಾನ.

ತೃತೀಯ
ಶ್ರೀ ಸರಸ್ವತಿ ವಿದ್ಯಾ ಕೇಂದ್ರ ಕನ್ಯಾನ
ತೀರ್ಪುಗಾರರಾಗಿ ಶ್ರೀಮತಿ ನಯನಗೌರಿ. (ಕೆ. ಪಿ. ಎಸ್. ಕನ್ಯಾನ ಪ್ರಾಥಮಿಕ ಶಾಲೆ ಶಿಕ್ಷಕಿ. )
ರಾಮ ನಾಯ್ಕ (ಶಿಕ್ಷಕರು ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ನೀರ್ಕಜೆ )
ಶ್ರೀಮತಿ ರೇಷ್ಮಾ (ಶಿಕ್ಷಕರು ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ಮಾದರಿ )ಸಹಕರಿಸಿದರು.

- Advertisement -

Related news

error: Content is protected !!