Wednesday, July 2, 2025
spot_imgspot_img
spot_imgspot_img

ವಿಟ್ಲ: ಮನೆ ಸಮೀಪ ಅಕ್ರಮ ಮದ್ಯ ಮಾರಾಟ; ಓರ್ವ ವಶಕ್ಕೆ

- Advertisement -
- Advertisement -
suvarna gold

ವಿಟ್ಲ: ಮನೆಯೊಂದರ ಪಕ್ಕದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ 24.93 ಲೀಟರ್ ಸಮೇತ ಆರೋಪಿಯನ್ನು ಬಂಧಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ. ಬಂಧಿತ ಆರೋಪಿ ಆನಂದ ಪೂಜಾರಿ ಎನ್ನಲಾಗಿದೆ.

ಜ.15 ರಂದು ವಿಟ್ಲ ಎಸ್.ಐ.ಸಂದೀಪ್ ಕುಮಾರ್ ಶೆಟ್ಟಿಯವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯ ಅಳಿಕೆ ಗ್ರಾಮದ ಕುದ್ದುಪದವು ಎಂಬಲ್ಲಿ ಆನಂದ ಪೂಜಾರಿ ಎಂಬವರ ವಾಸ್ತವ್ಯದ ಮನೆಯ ಪಕ್ಕದ ಕೋಣೆಯಲ್ಲಿ ಅಕ್ರಮವಾಗಿ ಮದ್ಯವನ್ನು ಶೇಖರಿಸಿ ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸಂಜೆ ವೇಳೆಗೆ ದಾಳಿ ನಡೆಸಿದ್ದರು.

vtv vitla

ದಾಳಿ ಮಾಡಿದ ವೇಳೆ ಬೆಂಗಳೂರು ವಿಸ್ಕಿ 90 ಎಂಎಲ್ ಮದ್ಯ ತುಂಬಿರುವ 40 ಪ್ಯಾಕೆಟ್, ಓರಿಜಿನಲ್ ಚಾಯಿಸ್ 90 ಎಂಎಲ್ ಮದ್ಯ ತುಂಬಿರುವ 19 ಪ್ಯಾಕೆಟ್, ಓರಿಜಿನಲ್ ಚಾಯಿಸ್ 180 ಎಂಎಲ್ ಮದ್ಯ ತುಂಬಿರುವ 40 ಪ್ಯಾಕೆಟ್, ಪ್ರೆಸ್ಟಿಜ್ ವಿಸ್ಕಿ 90 ಎಂಎಲ್ ಮದ್ಯ ತುಂಬಿರುವ 50 ಪ್ರೆಸ್ಟಿಜ್ ವಿಸ್ಕಿ 180 ಎಂಎಲ್ ಮದ್ಯ ತುಂಬಿರುವ 29 ಪ್ಯಾಕೆಟ್, ಮೈಸೂರ್ ಲ್ಯಾನ್ಸರ್ 90 ಎಂಎಲ್ ಮದ್ಯ ತುಂಬಿರುವ 30 ಪ್ಯಾಕೆಟ್ ಸೇರಿ ಒಟ್ಟು 10,493 ರೂಪಾಯಿ ಅಂದಾಜಿನ 24.93 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.

ಇದೇ ವೇಳೆ ಆರೋಪಿ ಆನಂದ ಪೂಜಾರಿಯ ವಶದಲ್ಲಿದ್ದ 14,193ರೂ ನಗದು ವಶ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

vtv vitla
vtv vitla
- Advertisement -

Related news

error: Content is protected !!