Sunday, April 28, 2024
spot_imgspot_img
spot_imgspot_img

ವಿಟ್ಲ : ( ಮಾ.08- ಮಾ.13) ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

- Advertisement -G L Acharya panikkar
- Advertisement -
vtv vitla

ವಿಟ್ಲ : ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ದಿನಾಂಕ 08-03-2023ನೇ ಬುಧವಾರದಿಂದ ದಿನಾಂಕ 13-03-2023ನೇ ಸೋಮವಾರದ ವರೆಗೆ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಮಾ. 8ರಂದು ಬೆಳಗ್ಗೆ ಗಂಟೆ 10ಕ್ಕೆ ಉಗ್ರಾಣ ಮುಹೂರ್ತ ನಡೆಯಿತು. ಆಜೇರು ಪುರುಷೋತ್ತಮ ನಾಯಕ್ ಮಲ್ಯರವರು ದೀಪ ಪ್ರಜ್ವಲನೆ ಮಾಡಿದರು. ಸಂಜೆ ಗಂಟೆ 3 ರಿಂದ ಪುಣಚ ಪರಿಯಾಲ್ತಡ್ಕ ಅಶ್ವತ್ಥಕಟ್ಟೆ ವಠಾರದಿಂದ ಹಸಿರುವಾಣಿ (ಹೊರಕಾಣಿಕೆ) ಸಮರ್ಪಣೆ ನಡೆಯಲಿದೆ. ಶ್ರೀರಾಮಚಂದ್ರ ಭಟ್ ಕುಚ್ಚುಚ್ಚಾರು, ಎಣ್ಣೆತ್ತೋಡಿ, ಪುಣಚ, ನಿವೃತ್ತ ಮುಖ್ಯೋಪಾಧ್ಯಾಯರು ಉದ್ಘಾಟಿಸಲಿದ್ದಾರೆ.

ವೈದಿಕ ಹಾಗೂ ತಾಂತ್ರಿಕ ಕಾರ್ಯಕ್ರಮಗಳು ಸಂಜೆ ಗಂಟೆ 4.30ರಿಂದ ಕ್ಷೇತ್ರದ ತಂತ್ರಿಗಳಿಗೆ ಹಾಗೂ ಋತ್ವಿಜರಿಗೆ ಪೂರ್ಣಕುಂಭ ಸ್ವಾಗತ, ಸಂಜೆ ಗಂಟೆ 6 ರಿಂದ ದೇವತಾ ಪ್ರಾರ್ಥನೆ, ಆಚಾರ್ಯಾದಿ ಋತ್ವಿಗರಣೆ, ಸ್ವಸ್ತಿ ಪುಣ್ಯಾಹವಾಚನ, ಖನನಾದಿ ಸಪ್ತಶುದ್ಧಿ , ಪ್ರಾಸಾದ ಶುದ್ಧಿ , ರಾಕ್ಷೋಘ್ನ ಸೂಕ್ತ ಹೋಮ, ಅಸ್ತ್ರ ಕಲಶ ಪೂಜೆ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತುಬಲಿ, ಅಂಕುರಾರೋಹಣ, ರಾತ್ರಿ ಪೂಜೆ. ಸಂಜೆ ಗಂಟೆ 5 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.

ರಾತ್ರಿ ಗಂಟೆ 7 ಕ್ಕೆ ದಾಸ ಸಂಕೀರ್ತನಕಾರ, ಭಜನಾಗ್ರೇಸರ, ಗಡಿನಾಡು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಮಧ್ವಾಧೀಶ ವಿಠಲದಾಸ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ ದಾಸ-ದೇಶ-ಭಕ್ತಿ-ತತ್ವ ಜಾನಪದ ಭಾವಗೀತೆಗಳ “ಗಾನಾಮೃತ ಮಂಜರಿ ” ನಡೆಯಲಿದೆ.

- Advertisement -

Related news

error: Content is protected !!