Sunday, June 7, 2026
spot_imgspot_img
spot_imgspot_img

ವಿಟ್ಲ ಮಾ.12,13ರಂದು : ನೆಕ್ಕರೆಕಾಡು ರಕ್ತೇಶ್ವರಿ, ಗುಳಿಗ, ನಾಗಶಿಲೆ ಪ್ರತಿಷ್ಠಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ನೆಕ್ಕರೆಕಾಡು ರಕ್ತೇಶ್ವರಿ, ಗುಳಿಗ, ನಾಗಬನ ಜೋಣೋದ್ಧಾರ ಸಮಿತಿಯ ವತಿಯಿಂದ ಗುಳಿಗ ಮತ್ತು ನಾಗಶಿಲೆ
ಪ್ರತಿಷ್ಠಾ ಕಾರ್ಯಕ್ರಮ ಮಾ.12ರಿಂದ ಮಾ.13ರವರೆಗೆ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

12 ಆದಿತ್ಯವಾರ ದಂದು ಸಂಜೆ ಗಂಟೆ 5.00ಕ್ಕೆ ಸ್ವಸ್ತಿ ಪುಣ್ಯಹವಾಚನ, ಸ್ಥಳಶುದ್ಧಿ, ಪ್ರಾಸಾದಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜೆ, ವಾಸ್ತು ಬಲಿ, ಬಿಂಬಾಧಿವಾಸ ಬಳಿಕ ಅನ್ನದಾನ ಸೇವೆ ನಡೆಯಲಿದೆ.

13 ಸೋಮವಾರ ದಂದು ಬೆಳಗ್ಗೆ ಗಂಟೆ 6.00 ರಿಂದ ಗಣಪತಿ ಹೋಮ, ಪ್ರತಿಷ್ಠಾ ಪ್ರಧಾನ ಹೋಮ, ಪಂಚವಿಂಶತಿ ಕಲಶಾರಾಧನೆ, ಪ್ರಧಾನ ಹೋಮ ನಡೆಯಲಿದೆ. ಬೆಳಗ್ಗೆ10.30ಕ್ಕೆ ಊರ ಮಕ್ಕಳಿಂದ ಭಜನಾ ಕಾರ್ಯಕ್ರಮ ಹಾಗೂ 10.45 ವೃಷಭ ಲಗ್ನದಲ್ಲಿ ನಾಗಶಿಲಾ ಪ್ರತಿಷ್ಠೆ, ರಕ್ತೇಶ್ವರಿ ಮತ್ತು ಗುಳಿಗ ದೈವದ ಪ್ರತಿಷ್ಠೆ ಕಲಶಾಭಿಷೇಕ, ಆಶ್ಲೇಷ ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ನಂತರ ಅನ್ನಸಂತರ್ಪಣೆ ಸೇವೆ ಜರುಗಲಿದೆ.

- Advertisement -

Related news

error: Content is protected !!