Thursday, July 10, 2025
spot_imgspot_img
spot_imgspot_img

ವಿಟ್ಲ: ಫೆ. 27 ರಂದು ಯುವಕೇಸರಿ ಅಬೀರಿ ಅತಿಕಾರಬೈಲು (ರಿ ) ಚಂದಳಿಕೆ ಸಂಘಟನೆಯ 7 ನೇ ವರ್ಷದ ವಾರ್ಷಿಕೋತ್ಸವ: ಈ ಪ್ರಯುಕ್ತ ತುಳು ವಿಭಿನ್ನ ಶೈಲಿಯ ನಾಟಕ ಶಿವಧೂತೆ ಗುಳಿಗೆ

- Advertisement -
- Advertisement -

ವಿಟ್ಲ: ಇದೇ ಬರುವ ಫೆಬ್ರವರಿ 27 ನೇ ಆದಿತ್ಯವಾರ ಸಂಜೆ ಗಂಟೆ 7.00 ರಿಂದ ಯುವಕೇಸರಿ ಸಂಭ್ರಮ 2021-2022 ಕಾರ್ಯಕ್ರಮ ಚಂದಳಿಕೆ ಶಾಲೆಯಲ್ಲಿ ನಡೆಯಲಿದೆ. ಸಂಜೆ ಗಂಟೆ 7 ಕ್ಕೆ ಯುವಕೇಸರಿ ಸಂಘದ ಅಧ್ಯಕ್ಷರಾದ ಚಿದಾನಂದ ಶೆಟ್ಟಿ ಉಜಿರೆಮಾರ್ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಮಂಗಳೂರಿನ ಉದ್ಯಮಿಗಳಾದ ಅಶೋಕ್ ಕುಮಾರ್ ರೈ , SLV ಗ್ರೂಪ್ಸ್ ಮೈಸೂರ್ ಸಂಸ್ಥೆಯ ದಿವಾಕರ ದಾಸ್ ನೇರ್ಲಜೆ , ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ , ಪುತ್ತೂರು ಮಂಡಲ ಅಧ್ಯಕ್ಷ ಸಜಾ ರಾಧಾಕೃಷ್ಣ ಆಳ್ವ , ವಿಟ್ಲದ ಉದ್ಯಮಿಗಳಾದ ದಿನಕರ ಭಟ್ ಮಾವೆ , ಸುಬ್ರಾಯ ಪೈ , ಸಂಜೀವ ಪೂಜಾರಿ ವಿಟ್ಲ , ದೇಜಪ್ಪ ಪೂಜಾರಿ ನಿಡ್ಯ , ಯುವವಾಹಿನಿಯಾ ವಿಟ್ಲ ಘಟಕದ ಅಧ್ಯಕ್ಷ ಯಶವಂತ ಪೂಜಾರಿ ಪರನೀರು ನಿಡ್ಯ , ವಿಟ್ಲ ಪಟ್ಟಣ ಪಂಚಾಯತ್ ನ ಸದಸ್ಯರಾದ ರಕ್ಷಿತಾ ಸನತ್ ಮಡಿವಾಳ ಮತ್ತು ಹರೀಶ್ ವಿಟ್ಲ , ಚಂದಳಿಕೆ ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಾರಾಯಣ ಪೂಜಾರಿ ಮತ್ತು ಯುವಕೇಸರಿಯ ಗೌರವ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಭಾಗವಹಿಸಲಿದ್ದಾರೆ.

ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ್ ಅಮೈ ಮತ್ತು ನಿವೃತ್ತ ಯೋಧ ದಾಸಪ್ಪ ಪೂಜಾರಿ ನೆಕ್ಕಿಲಾರು ಇವರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ.

7.30 ಕ್ಕೆ ಸಾರ್ವಜನಿಕ ಊಟದ ವ್ಯವಸ್ಥೆ ಮತ್ತು ರಾತ್ರಿ 8.00 ಕ್ಕೆ ವಿಜಯ ಕುಮಾರ್ ಕೊಡಿಯಾಲಬೈಲ್ ನಿರ್ದೇಶನದಲ್ಲಿ ತುಳು ವಿಭಿನ್ನ ಶೈಲಿಯ ನಾಟಕ ಶಿವಧೂತೆ ಗುಳಿಗೆ ನಡೆಯಲಿದೆ ಎಂದು ಯುವಕೇಸರಿಯ ಪ್ರಧಾನ ಕಾರ್ಯದರ್ಶಿ ಯೋಗೀಶ್ ಕೇಪುಲಗುಡ್ಡೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!