Friday, May 3, 2024
spot_imgspot_img
spot_imgspot_img

ವಿಟ್ಲ : ಯುವಕೇಸರಿ ಅಬೀರಿ- ಅತಿಕಾರಬೈಲು (ರಿ) ಚಂದಳಿಕೆ ಸಂಘಟನೆಯ 8 ನೇ ವರ್ಷದ ವಾರ್ಷಿಕೋತ್ಸವ

- Advertisement -G L Acharya panikkar
- Advertisement -

ವಿಟ್ಲ : ಯುವಕೇಸರಿ ಸಂಘಟನೆಯ 8 ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಚಂದಳಿಕೆ ಶಾಲೆಯಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರುರವರು ಮಾತನಾಡಿ ಯುವಕೇಸರಿ ಸಂಘಟನೆಯು ಕಳೆದ 8 ವರ್ಷಗಳಿಂದ ಮಾಡಿದ ಸಾಧನೆಯು ಬಹಳ ಅದ್ಭುತವಾಗಿದೆ. ಮುಂದಿನ ದಿನಗಳಲ್ಲಿ ಇವರಿಗೆ ರಾಜ್ಯ ಪ್ರಶಸ್ತಿ ಸಿಗುವಂತಾಗಲಿಯೆಂದು ಶುಭ ಹಾರೈಸಿದರು.

ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಮಾತನಾಡಿ ನೀವು ಮಾಡಿದ ಸಮಾಜ ಸೇವೆಗೆ ನಾನು ಯಾವಾಗಲು ಚಿರಋಣಿ ಮತ್ತು ಯಾವತ್ತು ನೀವು ಮಾಡುವ ಒಳ್ಳೆಯ ಕೆಲಸಕ್ಕೆ ನಿಮ್ಮ ಜೋತೆ ನಾನು ಇರುತ್ತೆನೆ ಎಂದು ಶುಭ ಹಾರೈಸಿದರು.

ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಯುವಕೇಸರಿ ಸಂಘಟನೆಯ ಅಧ್ಯಕ್ಷ ಗಣೇಶ್ ಪೂಜಾರಿ ಪಟ್ಲರವರು ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಮೈಸೂರ್ SLV ಇದರ ಮಾಲಕರದ ದಿವಾಕರ್ ದಾಸ್ ನೆರ್ಲಾಜೆ, ಉದ್ಯಮಿಯಾದ ದಿನಕರ್ ಭಟ್ ಮಾವೆ, ಹರೀಶ್ ಕುತ್ತಾರ್, ಸಂಜೀವ ಪೂಜಾರಿ ವಿಟ್ಲ , ಸುಬ್ರಾಯ ಪೈ ಚಂದಳಿಕೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸುಮತಿ ನಿಡ್ಯ, ಪಟ್ಟಣ ಪಂಚಾಯತ್ ಸದಸ್ಯರಾದ ರಕ್ಷಿತಾ ಸನತ್ ಚಂದಳಿಕೆ, ಕುಂಡಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಉಮೇಶ್ ಗೌಡ ಅರ್ಕಳ್ ತೋಟ, ಯುವಕೇಸರಿಯ ಗೌರವ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು ಮತ್ತು ಕಾರ್ಯದರ್ಶಿಯಾದ ವನಿತ್ ಅಬೀರಿ ಇವರುಗಳು ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸರಪಾಡಿ ಅಶೋಕ್ ಕುಮಾರ್ ಶೆಟ್ಟಿ , ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ದೇಜಪ್ಪ ಪೂಜಾರಿ ನಿಡ್ಯ , ರಾಜೇಶ್ ಆರ್. ಕೆ ಆರ್ಟ್ಸ್ ವಿಟ್ಲ , ಚಂದ್ರಶೇಖರ ಕೇಪುಳಗುಡ್ಡೆ, ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವಿಶ್ವನಾಥ ಗೌಡ ಕುಳಾಲು, ಹಿರಿಯ ನಾಟಕ ಕಲಾವಿದ ನಾರಾಯಣ ಶೆಟ್ಟಿ ನಿಡ್ಯ, ಯಕ್ಷಗಾನದ ಹಾಸ್ಯ ಕಲಾವಿದರಾದ ದಿನೇಶ್ ಕೋಡಪದವು ಹಾಗೂ ಯುವಕೇಸರಿ ಸಂಘಟನೆಯ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿರುವ ದಿವಾಕರ ಶೆಟ್ಟಿ ಅಬೀರಿ ಮತ್ತು ಸುಶಾಂತ್ ಸಾಲಿಯಾನ್ ಚಂದಳಿಕೆ ಇವರುಗಳನ್ನು ಸನ್ಮಾನಿಸಲಾಯಿತು.
“4 ವರ್ಷಗಳಿಂದ ನಮ್ಮ ಸಂಘಟನೆಯು ದತ್ತಿನಿಧಿ ಯೋಜನೆಯ ಮೂಲಕ ರೂ. 5,14,530 ಸಹಾಯಧನ ಹಾಗೂ 1000 ಕೆಜಿಗಿಂತ ಹೆಚ್ಚು ಅಕ್ಕಿಯನ್ನು ವಿತರಿಸಲಾಯಿತು” ಎಂದು ಯುವಕೇಸರಿಯಾ ಸಂಘಟನಾ ಕಾರ್ಯದರ್ಶಿ ಯೋಗೀಶ ಕೇಪುಳಗುಡ್ಡೆ ದತ್ತಿನಿಧಿ ವರದಿ ವಾಚಿಸಿದರು.

ಅಲ್ಲದೇ ಅನಾರೋಗ್ಯದಿಂದ ಬಲಳುತ್ತಿರುವ ನೇಮು ಮೂಲ್ಯ ಮೇಗಿನಪೇಟೆ ಇವರಿಗೆ 10,000 ರೂ. ಮತ್ತು 52 ಕೆ. ಜಿ ಅಕ್ಕಿ, ಚಂದಳಿಕೆ ಶಾಲೆಯ ಶಾಲಾಭಿವೃದ್ದಿ ಸಮಿತಿಗೆ 5000 ರೂ. ಹಾಗೂ ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಭಾರತೀ ನಿಡ್ಯ, ನಳಿನಿ ಇರಂದೂರ್, ಸೇಸಪ್ಪ ಬದನಾಜೆ, ವರ್ಷಿಣಿ ಕಂಬಳಬೆಟ್ಟು ಇವರುಗಳಿಗೆ ತಲಾ 52 ಕೆ. ಜಿ ಅಕ್ಕಿಯನ್ನು ವಿತರಣೆ ಮಾಡಲಾಯಿತು.

ಸುಶಾಂತ್ ಸಾಲಿಯಾನ್ ಸ್ವಾಗತಿಸಿ, ದಿವಾಕರ ಶೆಟ್ಟಿ ವಂದಿಸಿ, ವಿಠಲ ಪೂಜಾರಿ ಅತಿಕಾರಬೈಲು ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಮೇಳದ ದೇವರಿಗೆ ಚೌಕಿ ಪೂಜೆ ನಡೆದು, ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಬಪ್ಪನಾಡು ಮೇಳದ ವತಿಯಿಂದ ಡಿ. ಮನೋಹರ ವಿರಚಿತ “ಗೆಜ್ಜೆದ ಪೂಜೆ” ಎಂಬ ತುಳು ಯಕ್ಷಗಾನ ‌ನಡೆಯಿತು.

- Advertisement -

Related news

error: Content is protected !!