Sunday, June 21, 2026
spot_imgspot_img
spot_imgspot_img

ವಿಟ್ಲ: ರಸ್ತೆಗೆ ಅಡ್ಡವಾಗಿ ಬಿದ್ದ ವಿದ್ಯುತ್ ಕಂಬ ; ಸಂಚಾರ ಅಸ್ತವ್ಯಸ್ತ

- Advertisement -
- Advertisement -

ವಿಟ್ಲ: ವಿಟ್ಲ- ಮಂಗಳೂರು ರಸ್ತೆಗೆ ಅಡ್ಡವಾಗಿ ಬಿದ್ದ ವಿದ್ಯುತ್ ಕಂಬದಿಂದ ಸಂಚಾರ ಅಸ್ತವ್ಯಸ್ತವಾದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಗಾಳಿ – ಮಳೆಗೆ ವಿದ್ಯುತ್ ಕಂಬ ರಸ್ತೆಗೆ ಬಿದ್ದ ಕಾರಣ ಕಂಬದ ಜೊತೆಗೆ ಮರದ ಕೊಂಬೆ ಕೊಡ ರಸ್ತೆಗೆ ಬಿದ್ದಿತ್ತು. ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮವಾಗಿ ಕೆಲವೂ ಸಮಯ ಪ್ರಯಾಣಿಕರು ಮತ್ತು ವಾಹನ ಸವಾರರು ಪರದಾಡುವಂತಾಯಿತು. ಎಲ್ಲಾ ವಾಹನಗಳು ಪಳಿಕೆ ರಸ್ತೆ ಮೂಲಕ ಬೊಬ್ಬೆಕೇರಿ ಸಂಪರ್ಕ ರಸ್ತೆಯಲ್ಲಿ ಸಂಚಾರಿಸಿದರು.

ಸರಿಯಾದ ಸಮಯಕ್ಕೆ ಅದೇ ಮಾರ್ಗವಾಗಿ ಬಂದ ಗಜಲಕ್ಷ್ಮಿ ಕ್ರೇನ್ ಮೂಲಕ ಸರಿಪಡಿಸಲಾಯಿತು ಎಂದು ತಿಳಿದು ಬಂದಿದೆ. ಮೆಸ್ಕಂ ಸಿಬ್ಬಂದಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ವಿದ್ಯುತ್ ಕಂಬವನ್ನು ರಸ್ತೆಯ ಪಕ್ಕಕ್ಕೆ ಸರಿಸುವ ಮೂಲಕ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿದರು.

- Advertisement -

Related news

error: Content is protected !!