Friday, May 3, 2024
spot_imgspot_img
spot_imgspot_img

ವಿಟ್ಲ: ಲೋನ್‌ ಆಪ್‌ ಮುಖಾಂತರ ಸಾಲ ಮಾಡುತ್ತೀರಾ ಹುಷಾರ್‌..?! ಅಶ್ಲೀಲ ಫೋಟೋ ಎಡಿಟ್ ಮಾಡಿ ಬೆದರಿಕೆಯೊಡ್ಡಿದ ಆಸಾಮಿ..! ಹಣ ಕೊಡುವಂತೆ ಬ್ಲ್ಯಾಕ್ ಮೇಲ್

- Advertisement -G L Acharya panikkar
- Advertisement -

ವಿಟ್ಲ: ಲೋನ್ ಆಪ್‌ ಮುಖಾಂತರ ಲೋನ್‌ ಪಡೆದ ಯುವಕನೋರ್ವನಿಗೆ ರಿಕವರಿ ಮಾಡುವ ಸಿಬ್ಬಂದಿ ವಿಚಿತ್ರವಾಗಿ ಹಣ ವಾಪಸ್ ಕೇಳಿ ಬ್ಲಾಕ್ ಮಾಡಿದ ಘಟನೆ ನಡೆದಿದೆ. ವಿಟ್ಲದ ಯುವಕನೋರ್ವ ಲೋನ್ ಆಪ್ ಮುಖಾಂತರ ಲೋನ್ ಪಡೆದುಕೊಂಡಿದ್ದ. ನಂತರ ವಾಟ್ಸ್‌ ಆಪ್‌ನಲ್ಲಿ ರಿಕವರಿ ಸಿಬ್ಬಂದಿಯಿಂದ ಮೇಸೆಜ್ ಬಂದಿದೆ. ವಾಟ್ಸ್‌ಆಪ್‌ ಸಂದೇಶದಲ್ಲಿ ಹಣ ಕೊಡುವಂತೆ ಒತ್ತಾಯಿಸಿದ್ದಾನೆ. ಯುವಕನ ಮುಖವನ್ನು ಅಶ್ಲೀಲ ಫೋಟೊದೊಂದಿಗೆ ಎಡಿಟ್ ಮಾಡಿ ಹಣ ಕೊಡುವಂತೆ ಬೆದರಿಕೆ ಹಾಕಿದ್ದಾನೆ.

ಹಣ ಕೊಡದೇ ಇದ್ದಲ್ಲಿ ಎಡಿಟ್ ಮಾಡಿದ ಫೋಟೊವನ್ನು ವಾಟ್ಸ್‌ ಆಪ್ ಗ್ರೂಪ್ ಹಾಗೂ ಸಂಬಂಧಿಕರ ಮೊಬೈಲ್‌ಗಳಿಗೆ ರವಾನಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಯುವಕ ಕೂಡಲೇ ಹಣ ವರ್ಗಾವಣೆ ಮಾಡಿದ್ದಾನೆ.

ಲೋನ್ ಆಪ್‌ನಲ್ಲಿ ಜನರು ಕೆಲವೇ ಕ್ಷಣದಲ್ಲಿ ಲೋನ್ ಪಡೆಯಲು ಸಾಧ್ಯವಾಗುತ್ತದೆ. ಆದರೆ ಇದರಲ್ಲಿ ನಡೆಯುವ ಕೆಲವು ಘಟನೆಗಳಿಂದ ಸಾಕಷ್ಟು ಅಮಾಯಕರು ಈಗಾಗಲೇ ಹಣ ಕಳೆದುಕೊಂಡ ಉದಾಹರಣೆಗಳೂ ಇದೆ. ಆದ್ರೆ ಈ ರೀತಿಯಾಗಿ ಬೆದರಿಕೆಯೊಡ್ಡುವ ಘಟನೆಗಳು ಮುಂದೆ ಹೆಚ್ಚು ಹೆಚ್ಚು ಹಣ ಕೊಡುವಂತೆ ಒತ್ತಾಯಿಸುವ ಪ್ರಸಂಗಗಳೂ ಇದೆ.

- Advertisement -

Related news

error: Content is protected !!