- Advertisement -
- Advertisement -


ವಿಟ್ಲ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಹೊರಬಿದ್ದಿದೆ. ಪ್ರಾಥಮಿಕ & ಪ್ರೌಡ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಫಲಿತಾಂಶ ಪ್ರಕಟಿಸಿದ್ದು, ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಚೈತನ್ಯ 560 ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾರೆ.

ಇವರು ಕನ್ಯಾನದ ಜಳಕದಗುಂಡಿ ಮನೆಯ ಶಿವರಾಮ ಗೌಡ ಮತ್ತು ಜಾಹ್ನವಿ ಇವರ ಪುತ್ರಿ.
ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜು 82% ಫಲಿತಾಂಶ ದಾಖಲಿಸಿದೆ. ಕಲಾ ವಿಭಾಗದಲ್ಲಿ 62.5%, ವಾಣಿಜ್ಯ ವಿಭಾಗದಲ್ಲಿ 85.7%, ವಿಜ್ಞಾನ ವಿಭಾಗದಲ್ಲಿ 82.7% ಫಲಿತಾಂಶ ದಾಖಲಿಸಿಕೊಂಡಿದೆ.


- Advertisement -