Monday, May 20, 2024
spot_imgspot_img
spot_imgspot_img

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜು; ವಿಶ್ವ ಹಿಂದಿ ದಿನಾಚರಣೆ

- Advertisement -G L Acharya panikkar
- Advertisement -
vtv vitla

ವಿಟ್ಲ: ದೇಶದ ರಾಷ್ಟ್ರ ಭಾಷೆ ಹಿಂದಿಯ ಪ್ರಾಮುಖ್ಯತೆ ಮತ್ತು ಮಹತ್ವ ಹಾಗೂ ಮಕ್ಕಳಲ್ಲಿ ಈ ಬಗ್ಗೆ ಮಹತ್ತರ ಅರಿವು ಮೂಡಿಸುವ ನೆಲೆಯಲ್ಲಿ ಇಂದು ವಿಶ್ವ ಹಿಂದಿ ದಿನಾಚರಣೆ ಆಚರಿಸಲಾಯಿತು.

ವಿಠಲ ಜೇಸಿಸ್ ಶಾಲೆಯ ಹಿಂದಿ ಉಪನ್ಯಾಸಕಿಯಾದ ಸರ್ವಮಂಗಳ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಹಿಂದಿ ಭಾಷಾ ಪ್ರಾಮುಖ್ಯತೆ ಮತ್ತು ಹಿಂದಿ ದಿವಸದ ಮಹತ್ವವನ್ನು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಹಿಂದಿ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಶ್ರೀ ದೇವಿ ಶಾಲೆ ಪುಣಚ ಇಲ್ಲಿನ ವಿದ್ಯಾರ್ಥಿ ಹೃತಿಕ್ ಪಿ. ಜೆ ಪ್ರಥಮ ಹಾಗೂ ಜೇಸಿ ಶಾಲೆಯ ಅಕ್ಷತಾ ಪೈ ದ್ವಿತೀಯ ಮತ್ತು ವಿಠಲ ಪ್ರೌಢ ಶಾಲೆಯ ರಾಝಿಯಾ ಬಾನು ತೃತೀಯ ಸ್ಥಾನ ಪಡೆದರು. ಹಿಂದಿ ಭಾಷೆಯಲ್ಲಿ ಆಯೋಜಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಆದರ್ಶ ಚೊಕ್ಕಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿ ಸಹಕರಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಮುಕ್ತಶ್ರೀ ಉಪಸ್ಥಿತರಿದ್ದರು ವಿದ್ಯಾರ್ಥಿನಿ ಅಭಿಜ್ಞಾ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿನಿ ಪ್ರಣತಿ ಸ್ವಾಗತಿಸಿ ಉಪನ್ಯಾಸಕಿ ಆಶಾ ವಂದಿಸಿದರು.

- Advertisement -

Related news

error: Content is protected !!