- Advertisement -
- Advertisement -



ಕಡಬ : ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ತುಲಹಳ್ಳಿ ಕೊಟ್ಟೂರು ತಾಲೂಕು ವಿಜಯನಗರ ಎಂಬಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ಕೌಲ್ ಬಜಾರ್ ಬಳ್ಳಾರಿ ನಿವಾಸಿ ಸಯ್ಯದ್ ಕಲೀಂ ಪಾಷ (49) ಎನ್ನಲಾಗಿದೆ.
ಕಡಬ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಹೆಡ್ ಕಾನ್ಸ್‌ಟೇಬಲ್ ರಾಜುನಾಯ್ಕ ಮತ್ತು ಪೊಲೀಸ್ ಕಾನ್ಸ್‌ಟೇಬಲ್ ಸಿರಾಜುದ್ದಿನ್ ಆರೋಪಿಯನ್ನು ತುಲಹಳ್ಳಿ ಕೊಟ್ಟೂರು ತಾಲೂಕು ವಿಜಯನಗರ ಜಿಲ್ಲೆ ಎಂಬಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರತುಪಡಿಸಿದ್ದಾರೆ. ನ್ಯಾಯಲಯವು ಆರೋಪಿಗೆ 6 ತಿಂಗಳ ಸಜೆ ಮತ್ತು 2500/- ದಂಡ ವಿಧಿಸಿದೆ. ದಂಡ ಕಟ್ಟಲು ತಪ್ಪಿದ್ದಲ್ಲಿ ಇನ್ನೂ ಒಂದು ತಿಂಗಳು ಸಜೆ ವಿಧಿಸಿ ನ್ಯಾಯಲಯವು ಆದೇಶಿಸಿರುತ್ತದೆ .
- Advertisement -








