Tuesday, April 23, 2024
spot_imgspot_img
spot_imgspot_img

ವಿಟ್ಲ: ವಿಠಲ ಪ.ಪೂ ಕಾಲೇಜಿನಲ್ಲಿ “Inspire 2022-23” ಕಾರ್ಯಕ್ರಮ; ವಿಠ್ಠಲ್‌ ಜೆಸೀಸ್‌ ಆಂಗ್ಲ ಮಾಧ್ಯಮ ಶಾಲೆ ಚಾಂಪಿಯನ್‌

- Advertisement -G L Acharya panikkar
- Advertisement -

ವಿಟ್ಲ: ವಿಠ್ಠಲ ಎಜುಕೇಶನ್ ಸೊಸೈಟಿ ವಿಟ್ಲ, ವಿಠಲ ಪದವಿ ಪೂರ್ವ ಕಾಲೇಜು ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ಹೈಸ್ಕೂಲ್ ವಿದ್ಯಾರ್ಥಿಗಳಿಗೆ “Inspire for your success 2022-23” ಕಾರ್ಯಕ್ರಮ ವಿಠ್ಠಲ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಒಟ್ಟು 14 ಸ್ಫರ್ಧೆಗಳು ಏರ್ಪಡಿಸಲಾಗಿದ್ದು, ಒಟ್ಟು 22 ಶಾಲೆಗಳಿಂದ ಸುಮಾರು 700 ಅಧಿಕ ಮಕ್ಕಳು ಭಾಗವಹಿಸಿದ್ದರು.

ಅತಿಥಿಗಳಾಗಿ ನಿತ್ಯಾನಂದ ನಾಯಕ್‌, ಪ್ರಕಾಶ್‌ ನಾಯಕ್‌ ರೋಟರಿ ಕ್ಲಬ್‌ ವಿಟ್ಲ, ಪ್ರಾಂಶುಪಾಲ ಆದರ್ಶ ಚೊಕ್ಕಾಡಿ, ಉಪಪ್ರಾಂಶುಪಾಲ ಕಿರಣ್ ಕುಮಾರ್‌ ಉಪಸ್ಥಿತರಿದ್ದರು. ಉಪನ್ಯಾಸಕ ಅಣ್ಣಪ್ಪ ಸಾಶ್ತಾನ ಕಾರ್ಯಕ್ರಮ ನಿರೂಪಣೆಗೈದರು.

ಚಾಂಪಿಯನ್‌ ಆಗಿ ವಿಠ್ಠಲ್‌ ಜೆಸೀಸ್‌ ಆಂಗ್ಲ ಮಾಧ್ಯಮ ಶಾಲೆ, ದ್ವಿತೀಯ ಸ್ಥಾನಿಯಾಗಿ ವಿಠ್ಠಲ ಪ್ರೌಢಶಾಲೆ ವಿಟ್ಲ ಹೊರಹೊಮ್ಮಿತ್ತು.

vtv vitla
- Advertisement -

Related news

error: Content is protected !!