Sunday, June 14, 2026
spot_imgspot_img
spot_imgspot_img

ಚಿರು ಪುತ್ರ ಮತ್ತು ಮೇಘನಾ ರಾಜ್‌ ಸೇರಿದಂತೆ ಇಡೀ ಸುಂದರ್‌ ರಾಜ್‌ ಕುಟುಂಬಕ್ಕೆ ಕೊರೊನಾ ಪಾಸಿಟಿವ್‌!!

- Advertisement -
- Advertisement -

ಬೆಂಗಳೂರು: ಹಿರಿಯ ನಟಿ ಪ್ರಮೀಳಾ ಜೋಷಾಯ್‌ ಅವರಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಮತ್ತೊಂದು ಬೇಸರದ ಸುದ್ದಿ ಕೇಳಿಬಂದಿದೆ. ಮೇಘನಾ ರಾಜ್‌ ಮತ್ತು ಅವರ ಪುತ್ರನಿಗೂ ಕೊರೊನಾ ವೈರಸ್‌ ವಾಸಿಟಿವ್‌ ಆಗಿದೆ! ಅಲ್ಲದೆ, ಸುಂದರ್‌ ರಾಜ್‌ ಅವರಿಗೂ ಸೋಂಕು ತಗುಲಿರುವುದು ಖಚಿತವಾಗಿದೆ.

ಮೇಘನಾ ಮತ್ತು ಮಗುಗೆ ಕೂಡ ಪಾಸಿಟಿವ್‌ ವರದಿ ಬಂದಿದೆ’ ಎಂದು ಅವರು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆಯೇ ಪ್ರಮೀಳಾ ಜೋಷಾಯ್‌ ಬೆಂಗಳೂರಿನ ಖಾಸಗಿ ಆಸ್ಪತ್ರಗೆ ದಾಖಲಾಗಿದ್ದರು. ಮಂಗಳವಾರ (ಡಿ.8) ಸುಂದರ್‌ ರಾಜ್‌ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.’ಕೆಲವು ದಿನಗಳಿಂದ ಮೇಘನಾ ಮತ್ತು ಮಗುಗೆ ಮನೆಯಲ್ಲೇ ಐಸೊಲೇಟ್‌ ಆಗಿ ಚಿಕಿತ್ಸೆ ನೀಡಲಾಗುತ್ತಿದೆ.

ಅವರಿಗೆ ಯಾವುದೇ ರೋಗ ಲಕ್ಷಣ ಕಾಣಿಸಿಕೊಂಡಿಲ್ಲ. ನಾನು ಮತ್ತು ಪ್ರಮೀಳಾ ಹಿರಿಯ ನಾಗರಿಕರಾದ ಕಾರಣ ಮನೆಯಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ ಅಲ್ಲ ಎನಿಸಿತು. ನಮ್ಮ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇವೆ’ ಎಂದು ಸುಂದರ್‌ ರಾಜ್‌ ಹೇಳಿದ್ದಾರೆ.

- Advertisement -

Related news

error: Content is protected !!