Tuesday, June 16, 2026
spot_imgspot_img
spot_imgspot_img

ವಿಟ್ಲ: ವಿಠ್ಠಲ ಎಜುಕೇಶನ್ ಸೊಸೈಟಿ ವಿಟ್ಲ ಇದರ ಅಂಗ ಸಂಸ್ಥೆಗಳಾದ ವಿಠ್ಠಲ ಪದವಿ ಪೂರ್ವ ಕಾಲೇಜು, ವಿಠ್ಠಲ ಪ್ರೌಢಶಾಲೆ ಹಾಗೂ ವಿಠ್ಠಲ ಸುಪ್ರಜಿತ್ ಖಾಸಗಿ ಐಟಿಐ ಕಾಲೇಜಿನ ವಾರ್ಷಿಕೋತ್ಸವ

- Advertisement -
- Advertisement -
vtv vitla

ವಿಟ್ಲ: ವಿಠ್ಠಲ ಎಜುಕೇಶನ್ ಸೊಸೈಟಿ ವಿಟ್ಲ ಇದರ ಅಂಗ ಸಂಸ್ಥೆಗಳಾದ ವಿಠ್ಠಲ ಪದವಿ ಪೂರ್ವ ಕಾಲೇಜು, ವಿಠ್ಠಲ ಪ್ರೌಢಶಾಲೆ ಹಾಗೂ ವಿಠ್ಠಲ ಸುಪ್ರಜಿತ್ ಖಾಸಗಿ ಐಟಿಐ ವಾರ್ಷಿಕೋತ್ಸವವನ್ನು ಆಯುರ್ ಕ್ಲಿನಿಕ್ ಮತ್ತು ಕೋಟಕ್ಕಲ್ ಆರ್ಯ ವೈದ್ಯ ಶಾಲೆಯ ಡಾ. ದುರ್ಗಾಪ್ರಸಾದ್ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಸೌದಿ ಅರೇಬಿಯಾ ದಮಾಮ್ ನ A J smile ಮೆಡಿಕಲ್ ಕಂಪನಿಯ ಡಾ. ಸಕೀಬಾ ಆಲಿ ಕಡೂರು ಇವರು ಭಾಗವಹಿಸಿದ್ದರು.

ವಿಠ್ಠಲ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಎಲ್ ಎನ್ ಕೂಡೂರು, ಉಪಾಧ್ಯಕ್ಷ ಅಲ್ಫಾನ್ಸೊ ಸಿಲ್ವೆಸ್ಟರ್ ಮಸ್ಕರೇನಸ್, ಕೋಶಾಧಿಕಾರಿ ಬಾಬು ಕೊಪ್ಪಳ, ಐಟಿಐ ಕಾರ್ಯದರ್ಶಿ ಶ್ರೀಪ್ರಕಾಶ್ ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ನಾಯಕ್ ಸ್ವಾಗತಿಸಿದರು. ಪ್ರಾಂಶುಪಾಲರುಗಳಾದ ಆದರ್ಶ ಚೊಕ್ಕಾಡಿ ಮತ್ತು ರಮೇಶ್ ರೈ ಉಪಪ್ರಾಂಶುಪಾಲ ಕಿರಣ್ ಕುಮಾರ್ ವರದಿ ವಾಚಿಸಿದರು. ಆಶಾ ವಂದಿಸಿ, ಜಲಜಾಕ್ಷಿ ನಿರೂಪಿಸಿದರು. ಪ್ರಕಾಶ್ ನಾಯಕ್ ಮತ್ತು ರೂಪಶ್ರೀ ಸಹಕರಿಸಿದರು.

- Advertisement -

Related news

error: Content is protected !!