Tuesday, July 21, 2026
spot_imgspot_img
spot_imgspot_img

ವಿಟ್ಲ: ವಿ.ಹಿಂ.ಪ. ಮುಖಂಡ ಜಯ ಕೊಟ್ಟಾರಿಯವರಿಗೆ ಹಲ್ಲೆ, ಜೀವ ಬೆದರಿಕೆ; ಆರೋಪಿ ಪವನ್ ಕನ್ಯಾನ ವಿರುದ್ಧ ಕೇಸು ದಾಖಲು

- Advertisement -
- Advertisement -
vtv vitla
vtv vitla

ವಿಟ್ಲ: ದ್ವಿಚಕ್ರ ವಾಹನದಲ್ಲಿ ತೆರಳುವ ಸಂದರ್ಭ ವಿ. ಹಿಂ. ಪ. ಮುಖಂಡ ಜಯಕೊಟ್ಟಾರಿಯವರಿಗೆ ವ್ಯಕ್ತಿಯೋರ್ವ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ವಿಟ್ಲ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಬಳಿ ನಿನ್ನೆ ರಾತ್ರಿ ನಡೆದಿದೆ.

ಆರೋಪಿಯನ್ನು ಪವನ್ ಎಂದು ಗುರುತಿಸಲಾಗಿದೆ.

ಜಯಕೊಟ್ಟಾರಿಯವರು ನಿನ್ನೆ ರಾತ್ರಿ ವಿಟ್ಲದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಿಂದ ತನ್ನ ದ್ವಿಚಕ್ರ ವಾಹನದಲ್ಲಿ ಕೇಪು ಕಡೆಗೆ ಹೊರಡುವ ಸಂದರ್ಭದಲ್ಲಿ ಅಲ್ಲಿಗೆ ಬಂದ ಪರಿಚಯಸ್ಥ ಪವನ್ ಎಂಬಾತ ಜಯ ಕೊಟ್ಟಾರಿ ಯವರನ್ನು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಲ್ಲೆ ಮಾಡಿ ದೂಡಿ ಹಾಕಿದ ಪರಿಣಾಮ ಜಯ ಕೊಟ್ಟಾರಿಯವರು ನೆಲಕ್ಕೆ ಬಿದ್ದಿದ್ದು, ಆ ವೇಳೆ ರಾಜೇಶ್ ಎಂಬಾತನು ಅದೇ ದಾರಿಯಿಂದಾಗಿ ಬರುತ್ತಿದ್ದದನ್ನು ನೋಡಿ ಆರೋಪಿ ಪವನ್ ನೀನು ನನ್ನ ಬಗ್ಗೆ ಅಪ್ರಪಚಾರ ಮಾಡಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿದ್ದಾನೆ. ಆರೋಪಿ ಪವನ್ ಜಯ ಕೊಟ್ಟಾರಿಯವರನ್ನು ದೂಡಿ ಹಾಕಿದ ಪರಿಣಾಮ ಅವರ ಕಾಲಿಗೆ ಗುದ್ದಿದ ಗಾಯವಾಗಿದೆ.

ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಅ.ಕ್ರ 166/2021, ಕಲಂ: 341, 323, 504,506, ಬಾಧಂಸಂ ಪ್ರಕಾರ ಕೇಸು ದಾಖಲಾಗಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!