Wednesday, July 2, 2025
spot_imgspot_img
spot_imgspot_img

ವಿಟ್ಲ: ವೀರಕಂಬ ಗ್ರಾಮ ಪಂಚಾಯತ್ ವತಿಯಿಂದ ಯಶಸ್ವಿಯಾಗಿ ನಡೆದ ಗ್ರಾಮಸ್ಥರಿಗೆ ಮುಕ್ತ ಕಬಡ್ಡಿ ಪಂದ್ಯಾಟ

- Advertisement -
- Advertisement -

ವಿಟ್ಲ: ವೀರಕಂಬ ಗ್ರಾಮ ಪಂಚಾಯತ್ ವತಿಯಿಂದ ವೀರಕಂಬ ಗ್ರಾಮಸ್ಥರಿಗೆ ಮುಕ್ತ ಕಬಡ್ಡಿ ಪಂದ್ಯಾಟ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕೆಲಿಂಜ ವೀರಕಂಬ ಇಲ್ಲಿ ನಡೆಯಿತು.

ವೀರಕಂಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಬಡ್ಡಿ ತಂಡ ಗಳು ಭಾಗವಹಿಸಿದ್ದು ಪ್ರಥಮ ಪ್ರಶಸ್ತಿಯನ್ನು ಯುವಶಕ್ತಿ ಫ್ರೆಂಡ್ಸ್ ವೀರಕಂಬ ಹಾಗೂ ದ್ವಿತೀಯ ಪ್ರಶಸ್ತಿಯನ್ನು ಶ್ರೀ ಗಣೇಶ್ ಗೆಳೆಯರ ಬಳಗ ಗಣೇಶ್ ಕೋಡಿ, ವೀರಕಂಬ ಪಡೆದುಕೊಂಡಿತ್ತು. ತಿಲಕ್ ಗೋಳ್ತಮಜಲ್, ಹಾಗೂ ಮೋನಪ್ಪ ಗಣೇಶ್ ಕೊಡಿ ಪಂದ್ಯಾಟದ ತೀರ್ಪುಗಾರರಾಗಿ ಭಾಗವಹಿಸಿ ಉತ್ತಮ ರೀತಿಯಲ್ಲಿ ಪಂದ್ಯವನ್ನು ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್, ಪಂಚಾಯತ್ ಸದಸ್ಯರುಗಳಾದ ಜಯಪ್ರಸಾದ್, ಸಂದೀಪ್, ಅಬ್ದುಲ್ ರಹಿಮಾನ್, ನಿಶಾಂತ್ ರೈ, ಉಮಾವತಿ ದಾಮೋದರ ಸಪಲ್ಯ ಹಾಗೂ ಊರ ಪ್ರಮುಖರಾದ ಕೊರಗಪ್ಪ ಗೌಡ ಅಡ್ಡೆಯಿ, ನಾರಾಯಣ ಶೆಟ್ಟಿ ಕಲ್ಮಲೆ, ಚಂದ್ರಹಾಸ್ ಸಪಲ್ಯ ಕೆಲಿಂಜ, ಸಂತೋಷ್ ಸಿನಾಜೆ , ಪ್ರಕಾಶ್ ವೀರಕಂಬ ಹಾಗೂ ಗ್ರಾಮಸ್ಥರು ಭಾಗವಹಿಸಿದರು.

vtv vitla
- Advertisement -

Related news

error: Content is protected !!