Friday, May 17, 2024
spot_imgspot_img
spot_imgspot_img

ವಿಟ್ಲ: ವೀರಕಂಭ ಗ್ರಾಮಸ್ಥರ ಕುಡಿಯುವ ನೀರಿಗೆ ಕತ್ತರಿ ಹಾಕಿದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌; ಬೆಳಗಿನ ಜಾವ ಕಳ್ಳನಂತೆ ಬಂದು ಪಂಪ್‌ ತೆಗೆದ ಕಾಂಟ್ರಕ್ಟರ್‌ ನಾಗರಾಜ

- Advertisement -G L Acharya panikkar
- Advertisement -
vtv vitla

ವಿಟ್ಲ: ವೀರಕಂಭ ಪಂಚಾಯತ್‌ ವ್ಯಾಪ್ತಿಯ ಪಂ.ನ 3ಮತ್ತು 4ನೇ ವಾರ್ಡಿನಲ್ಲಿ ಎರಡು ದಿನಗಳಿಂದ ನೀರು ಪೂರೈಸದೇ ಗುತ್ತಿಗೆದಾರ ನಾಗರಾಜ ಜನರನ್ನು ಸತಾಯಿಸಿದ್ದು, ನೀರಿಗೆ ಪರದಾಟ ನಡೆಸಿದ ಊರಿನ ಜನರು ಪಂಚಾಯತ್‌ ಅಧ್ಯಕ್ಷರಿಗೆ ಕರೆ ಮಾಡಿ ತಿಳಿಸಿದ್ದರು.

ಕಾಂಟ್ರಕ್ಟರ್‌ ನಾಗರಾಜ ನೀರು ಕಳ್ಳತನ ಮಾಡಿದ ವಿಷಯ ವೈರಲ್‌ ಆದ ಮಾಹಿತಿ ತಿಳಿದು ಬೆಳ್ಳಂಬೆಳಗ್ಗೆ 5 ಗಂಟೆಯ ಹೊತ್ತಲ್ಲಿ ಕಳ್ಳರ ಹಾಗೇ ಬಂದು ತನ್ನ ಕೆಲಸದವರ ಮುಖಾಂತರ ಟ್ಯಾಂಕ್‌ಗೆ ಆಳವಡಿಸಲಾಗಿದ್ದ ನೀರಿನ ಪಂಪ್‌ನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪಂಚಾಯತ್ ಟ್ಯಾಂಕ್ ಗೆ ಶೇಖರಣೆಯಾದ ನೀರನ್ನು ಅಕ್ರಮವಾಗಿ ಪಂಪ್‌ ಹಾಕಿ ತಾನು ಗುತ್ತಿಗೆ ಪಡೆದ ಕೆಲಸಕ್ಕೆ ಉಪಯೋಗಿಸಿ ಊರಿನ ಜನರಿಗೆ ಹಾನಿ ಮಾಡಿದ್ದಕ್ಕೆ ಗುತ್ತಿಗೆದಾರರ ನಾಗರಾಜನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಊರಿನ ಜನರು ವೀರಕಂಭ ಗ್ರಾಮ ಪಂಚಾಯತ್‌ಗೆ ಒತ್ತಾಯಿಸಿದ್ದಾರೆ. ಈ ಪ್ರಕರಣದಲ್ಲಿ ಪಂಚಾಯತ್‌ನ ಇನ್ನೊಬ್ಬ ಸದಸ್ಯನು ಶಾಮೀಲಾಗಿದ್ದಾನೆ ಎಂಬ ಸುದ್ದಿಯಿದ್ದು, ಅವರ ವಿರುದ್ದವೂ ಕ್ರಮ ಕೈಗೊಳ್ಳಬೇಕೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!