- Advertisement -
- Advertisement -



ವಿಟ್ಲ: ಪ್ರತಿಷ್ಠಿತ ವೆಸ್ಟ್ ಕೋಸ್ಟ್ ಶೋರೂಂ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು, ಗ್ರಾಹಕರ ಅಚ್ಚುಮೆಚ್ಚಿನ ಶೋರೂಂ ಆಗಿದೆ. ವೆಸ್ಟ್ ಕೋಸ್ಟ್ ಶೋರೂಂನ ದ್ವಿಚಕ್ರ ವಾಹನಗಳು ವಿವಿಧ ವಿನ್ಯಾಸ ಮತ್ತು ಆತ್ಯಾಕರ್ಷಕ ಶೈಲಿಯಿಂದ ದ್ವಿಚಕ್ರ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿದೆ.
ಇದೀಗ ವೆಸ್ಟ್ ಕೋಸ್ಟ್ ಶೋರೂಂನ ವಿಟ್ಲ ಮೇಗಿನಪೇಟೆಯ ಶಾಖೆಯಲ್ಲಿ ನೂತನ ಮಾದರಿಯ ಫ್ಯಾಷನ್ ಪ್ಲಸ್ ಮಾರುಕಟ್ಟೆಗೆ ಬಿಡುಗಡೆಗೊಂಡಿತು. ಬೈಕ್ ಪಾಯಿಂಟ್ ಗ್ಯಾರೇಜ್ ಮಾಲೀಕ ಮೋಹನ್ ಕುಮಾರ್ ಹಾಗೂ ಲಿಯೋ ಗ್ಯಾರೇಜ್ ಮಾಲೀಕ ಲಿಯೋ ಅವರು ನೂತನ ಫ್ಯಾಶನ್ ಪ್ಲಸ್ ಬಿಡುಗಡೆಗೊಳಿಸಿ ನೂತನ ಗ್ರಾಹಕರಿಗೆ ಕೀ ಹಸ್ತಾಂತರಿಸಿದರು.
ಈ ಸಂದರ್ಭ ವೆಸ್ಟ್ ಕೋಸ್ಟ್ ಮೋಟಾರ್ಸ್ ಎಂ.ಡಿ ಮಹಮ್ಮದ್ ರಫೀಕ್ ಹಾಗೂ ಜಿ.ಎಂ ಸಂದೀಪ್ ಕುಮಾರ್ ಉಪಸ್ಥಿತರಿದ್ದರು. ಅಲ್ಲದೇ ಮಾರುಕಟ್ಟೆಗೆ ಬಿಡುಗಡೆಯಾದ ಪ್ರಯುಕ್ತ ೦% ಬಡ್ಡಿಯಲ್ಲಿ ವಾಹನ ನೀಡುತ್ತಿದ್ದು ಹೆಚ್ಚಿನ ಮಾಹಿತಿಗೆ ವೆಸ್ಟ್ ಕೋಸ್ಟ್ ಮೋಟಾರ್ಸ್ ಸಂಪರ್ಕಿಸಿ ….
- Advertisement -








