

ವಿಟ್ಲ: ಬಂಟ್ವಾಳ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಕಾರದೊಂದಿಗೆ ಶಿವಾಜಿ ಗೆಳೆಯರ ಬಳಗ, ಕುದ್ದುಪದವು ಇದರ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ 60ಕೆ.೫. ವಿಭಾಗದ ಮ್ಯಾಟ್ ಕಬಡ್ಡಿ ಪದ್ಯಾಂಟ ಎಪ್ರಿಲ್ – 02 – 2022ರಂದು ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಪರಮ ಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ ನೇರವೇರಿಸಲಿದ್ದಾರೆ, ಅಧ್ಯಕ್ಷತೆಯನ್ನು ಎಸ್. ಆರ್. ರಂಗಮೂರ್ತಿ ಪುಣಚ ವಹಿಸಲಿದ್ದಾರೆ.
https://youtube.com/shorts/QHQJkhC_K-g?feature=share

ಪುತ್ತೂರು ಶಾಸಕ ಸಂಜೀವ ಮಠಂದೂರು ಗೌರವಉಪಸ್ಥಿತಿಯನ್ನು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಎಚ್. ನಾಗರಾಜ್, ವೃತ್ತ ನಿರೀಕ್ಷಕರು, ಪೊಲೀಸ್ ಠಾಣೆ ವಿಟ್ಲ, ರಾಜೀವ ಭಂಡಾರಿ ಗೌರವಾಧ್ಯಕ್ಷರು, ದಿವ್ಯಶಕ್ತಿ ಯುವಕ ಮಂಡಲ ಕುದ್ದುಪದವು, ಗೋಪಾಲ ಪಾಟಾಳಿ ಉದ್ಯಮಿ ಕುದ್ದುಪದವು, ಹರಿಪ್ರಸಾದ್ ಯಾದವ್ ಅಧ್ಯಕ್ಷ ಬಿ.ಜೆ.ಪಿ. ಪುಣಚ ಮಹಾಶಕ್ತಿ ಕೇಂದ್ರ, ದಯಾನಂದ ಶೆಟ್ಟಿ ಉಜಿರೆಯಾರು ಪ್ರಧಾನ ಕಾರ್ಯದರ್ಶಿ ಬಿ.ಜೆ.ಪಿ ಪುಣಚ ಮಹಾಶಕ್ತಿ ಕೇಂದ್ರ, ರಾಮ್‌ದಾಸ್ ಶೆಟ್ಟಿ ರಾಜ್ಯ ಸಂಚಾಲಕರು ಜಯ ಕರ್ನಾಟಕ ಜನಪರ ವೇದಿಕೆ, ರಾಜೇಶ್ ಕುಮಾರ್ ಬಾಳೆಕಲ್ಲು ಉಪಾಧ್ಯಕ್ಷರು ಮಾಣಿಲ ಗ್ರಾಮ ಪಂಚಾಯತ್, ಯಶಸ್ವಿನಿ ಶಾಸ್ತ್ರೀ ನೆಕ್ಕರೆ ಅಧ್ಯಕ್ಷರು ಕೇಪು ಗ್ರಾಮ ಪಂಚಾಯತ್ , ಅಕ್ಷಯ್ ರಜಪೂತ್ ಕಲ್ಲಡ್ಕ ಹಿಂದೂ ಯುವ ಮುಖಂಡ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಸಂಚಾಲಕರು ಕೇಪು ಬಿಜೆಪಿ ಮಹಾಶಕ್ತಿ ಕೇಂದ್ರ, ಸತೀಶ್ ಪಾಟಾಳಿ ಕುದ್ದುಪದವು ಅಧ್ಯಕ್ಷರು ದಿವ್ಯಶಕ್ತಿ ಯುವಕ ಮಂಡಲ ಕುದ್ದುಪದವು ಆಗಮಿಸಲಿದ್ದಾರೆ.











