Sunday, May 5, 2024
spot_imgspot_img
spot_imgspot_img

ಚೆಸ್ ವಿಶ್ವಕಪ್​ನ  ಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯ; ನಾಳೆ ಪಂದ್ಯ ಮುಂದುವರಿಕೆ

- Advertisement -G L Acharya panikkar
- Advertisement -

ಅಝರ್​ಬೈಜಾನ್​ನ ಬಾಕುವಿನಲ್ಲಿ ನಡೆದ ಚೆಸ್ ವಿಶ್ವಕಪ್​ನ  ಫೈನಲ್ ಪಂದ್ಯದ ಮೊದಲ ಗೇಮ್​ ಡ್ರಾನಲ್ಲಿ ಅಂತ್ಯಗೊಂಡಿದೆ.​ವಿಶ್ವದ ನಂಬರ್ 1 ಚೆಸ್ ತಾರೆ ಮ್ಯಾಗ್ನಸ್ ಕಾರ್ಲ್‌ಸೆನ್ ಹಾಗೂ ಭಾರತದ ಆರ್​. ಪ್ರಜ್ಞಾನಂದ ನಡುವಣ ಈ ಪಂದ್ಯದ 2ನೇ ಕ್ಲಾಸಿಕ್ ಗೇಮ್​ ನಾಳೆ ನಡೆಯಲಿದ್ದು, ಇದರಲ್ಲಿ ಗೆದ್ದವರು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಲಿದ್ದಾರೆ.

90 ನಿಮಿಷಗಳ ಮೊದಲ ಸುತ್ತಿನಲ್ಲಿ  ನಾರ್ವೆಯ ಕಾರ್ಲ್​ಸೆನ್ ಅವರನ್ನು ಆರಂಭದಲ್ಲೇ  ಪ್ರಜ್ಞಾನಂದ ಒತ್ತಡಕ್ಕೆ ಸಿಲುಕಿಸಿದ್ದರು.  ಆದರೆ ಅತ್ತ ಕಾರ್ಲ್​ಸೆನ್ ಚೆಕ್​ ನೀಡುವತ್ತ ಹೆಚ್ಚಿನ ಗಮನಹರಿಸಿದ್ದರು. ಆದರೆ ಒಂದು ಹಂತ ದಾಟುತ್ತಿದ್ದಂತೆ ಭಾರತೀಯ ಆಟಗಾರನ ಜಾಣ ನಡೆಗಳನ್ನು ಅರಿತ ಬಳಿಕ ರಕ್ಷಾಣತ್ಮಕ ಆಟಕ್ಕೆ ಒತ್ತು ನೀಡಿದರು.

ಈ ಮೂಲಕ ಮೊದಲ ಸುತ್ತಿನ ಅಂತಿಮ ಹಂತದಲ್ಲಿ ಜಾಣ ನಡೆ ಪ್ರದರ್ಶಿಸಿದ ಕಾರ್ಲ್​ಸೆನ್ ಪಂದ್ಯದ ಮೇಲೆ ಮತ್ತೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಮೊದಲ ಸುತ್ತು 35 ಚಲನೆಗಳ ನಂತರ ಡ್ರಾದಲ್ಲಿ ಕೊನೆಗೊಂಡಿತು.

ಚೆಸ್ ವಿಶ್ವಕಪ್​ನ ಫೈನಲ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ಈ ಚಾಂಪಿಯನ್​ಶಿಪ್​ನಲ್ಲಿ ಫೈನಲ್​ಗೇರಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪ್ರಜ್ಞಾನಂದ  ಪಾತ್ರರಾಗಿದ್ದಾರೆ.

- Advertisement -

Related news

error: Content is protected !!