- Advertisement -
- Advertisement -


ವಿಟ್ಲ: ಶ್ರೀ ಅನ್ನಪೂಣೇಶ್ವರಿ ದೇವಿ ಮಂದಿರ, ಅನ್ನಮೂಲೆ ಇದರ 41ನೇ ವಾರ್ಷಿಕೋತ್ಸವ ಮತ್ತು ಪರಿವಾರ ದೈವಗಳ ನೇಮೋತ್ಸವ ವೇ. ಮೂ ಉದಯೇಶ ಕೆದಿಲಾಯ ಇವರ ನೇತೃತ್ವದಲ್ಲಿ ನಡೆಯಿತು.
ಮಾರ್ಚ್. 19 ರಂದು ಶ್ರೀ ಗಣಪತಿ ಹೋಮ, ನವಕಲಶಾಭಿಷೇಕ, ತಂಬಿಲ, ನಾಗತಂಬಿಲ, ಹಾಗೂ ಪರಿವಾರ ದೈವಗಳಿಗೆ ತಂಬಿಲ, ಮಹಾಪೂಜೆ, ದರ್ಶನ ಬಲಿ, ವಿಶ್ವನಾಥ ದೇವಾಡಿಗ ಹಾಗೂ ಬಳಗದವರಿಂದ ಭಜನೆ, ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಪೂಜೆ, ದರ್ಶನ ಬಲಿ ನಡೆಯಿತು.


ರಾತ್ರಿ ಅಣ್ಣಪ್ಪ ಸ್ವಾಮಿ ಮತ್ತು ಮಂತ್ರ ಗುಳಿಗ, ಕೊರಗಜ್ಜ ದೈವಗಳಿಗೆ ನೇಮೋತ್ಸವ ನಡೆಯಿತು. ಈ ಕಾರ್ಯಕ್ರಮಕ್ಕೆ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು.


- Advertisement -