Tuesday, July 1, 2025
spot_imgspot_img
spot_imgspot_img

ವಿಟ್ಲ: ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ ಸಭೆ

- Advertisement -
- Advertisement -

ವಿಟ್ಲ: ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಭಜನಾ ಪರಿಷತ್ – ವಿಟ್ಲ ಸೀಮೆ ಇದರ ಸಭೆಯು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಅನ್ನದಾಸೋಹ ಭವನದಲ್ಲಿ ಜರುಗಿತು.

ಸಭೆಯಲ್ಲಿ ಪರಿಷತ್ತಿನ ಪ್ರಮುಖರು ಹಾಗೂ ಕೆಲವು ಮಂಡಳಿಗಳ ಪ್ರಮುಖರು ಉಪಸ್ಥಿತರಿದ್ದರು.
ಮುಂದಿನ ದಿನಗಳಲ್ಲಿ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಜರಗಲಿರುವ ವಾರದ ಭಜನೆ ಹಾಗೂ ವಿಟ್ಲ ಸೀಮೆಯ ಎಲ್ಲಾ ಭಜನಾ ಮಂಡಳಿಗಳನ್ನು ಒಗ್ಗೂಡಿಸುವ ಸದುದ್ದೇಶದಿಂದ ವಿಟ್ಲ ಸೀಮೆಯ ಭಜನಾ ಮಂಡಳಿಗಳ ವಲಯವಾರು ಸಮಿತಿ ರಚಿಸುವ ಬಗ್ಗೆ ಪ್ರಮುಖವಾಗಿ ಚರ್ಚಿಸಿ, ತೀರ್ಮಾನಿಸಲಾಯಿತು.

ವಲಯವಾರು ಸಭೆ ನಡೆಸಿ ಜವಾಬ್ದಾರಿ ಹಂಚಲಾಯಿತು. ವಾರದ ಭಜನಾ ಸೇವೆ ನಡೆಸಿಕೊಡ ಬಯಸುವ ಭಜನಾ ತಂಡಗಳು ಹಾಗೂ ಭಜನಾ ಸೇವಾದಾರರು ಭಜನಾ ಪರಿಷತ್ತಿನ ಪದಾಧಿಕಾರಿಗಳಾದ
ಭಾಸ್ಕರ ಕಾಮಟ 7349491924, ಕಾರ್ತಿಕ್ ಕೈಂತಿಲ 9611820397 ಇವರನ್ನು ಸಂಪರ್ಕಿಸುವಂತೆ ಪರಿಷತ್ತಿನ ಕಾರ್ಯದರ್ಶಿ ಜಯರಾಮ್ ನಾಯ್ಕ್ ಕುಂಟ್ರಕಲ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

- Advertisement -

Related news

error: Content is protected !!