Sunday, May 5, 2024
spot_imgspot_img
spot_imgspot_img

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯದ ಅಳಕೆಮಜಲು ಒಕ್ಕೂಟದ ಚಿಗುರು ಜ್ಞಾನ ವಿಕಾಸ ಕೇಂದ್ರದ ವಿಚಾರ ಗೋಷ್ಠಿ

- Advertisement -G L Acharya panikkar
- Advertisement -
driving

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯದ ಅಳಕೆಮಜಲು ಒಕ್ಕೂಟದ ಚಿಗುರು ಜ್ಞಾನ ವಿಕಾಸ ಕೇಂದ್ರದ ವಿಚಾರ ಗೋಷ್ಠಿ, ಕಾರ್ಯಕ್ರಮ ಅಳಕೆಮಜಲು ಶಾರದಾಂಬ ಭಜನಾ ಮಂದಿರದಲ್ಲಿ ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸುಧೀರ್ ಕುಮಾರ್ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದ.ಕ 2ರ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ರವರು ನೆರವೇರಿಸಿ, ಇಂತಹ ಕಾರ್ಯಕ್ರಮದ ಮೂಲಕ ಮಹಿಳೆಯರು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಿದೆ. ಕುಟುಂಬದ ಪರಿವರ್ತನೆಗೆ ಇದು ಮೂಲಮಂತ್ರ ಆಗಬೇಕು, ನಾವು ಯೋಜನೆಯನ್ನು ಗಟ್ಟಿ ಮಾಡಿಕೊಂಡರೆ ,ನಮಗೆ ಯೋಜನೆ ಶಕ್ತಿಯಾಗಿ ನಿಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಕಲ್ಲಡ್ಕ: ಮಾದರಿ ಹಿ.ಪ್ರಾ.ಶಾಲೆಯ ಶತಮಾನೋತ್ತರ ಬೆಳ್ಳಿಹಬ್ಬ ಸಮಿತಿಯ ಆಶ್ರಯದಲ್ಲಿ “ಮನ್ವಂತರ-ಶತರಜತ ಹೆಜ್ಜೆ” ಸ್ಮರಣ ಸಂಚಿಕೆ ಬಿಡುಗಡೆ

ಸಂಪನ್ಮೂಲ ವ್ಯಕ್ತಿ ಭಾಗವಹಿಸಿದ ಶ್ರೀ ಹರಿಣಿ ಪುತ್ತೂರಾಯರು ಮಾತನಾಡಿ, ಮಹಿಳೆಯರು ಸಬಲೀಕರಣದೊಂದಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಪ್ರಬಲವಾಗಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ , ವಿಟ್ಲ ಯೋಜನಾಧಿಕಾರಿ ಚೆನ್ನಪ್ಪ ಗೌಡ ಅಳಕೆಮಜಲು, ಒಕ್ಕೂಟದ ಅಧ್ಯಕ್ಷ ಶ್ರೀ ತಿರುಮಲೇಶ್ವರ ಉಪಸ್ಥಿತರಿದ್ದರು. ಮಾಣಿ ವಲಯ ಮೇಲ್ವಿಚಾರಕಿ ಪ್ರೇಮಾ ಸ್ವಾಗತಿಸಿ, ಸೇವಾಪ್ರತಿನಿಧಿ ಸುಗಂಧಿನಿ ವಂದಿಸಿದರು. ವಿಟ್ಲ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ ನಿರೂಪಿಸಿದರು, ನಂತರ ಕೇಂದ್ರದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

- Advertisement -

Related news

error: Content is protected !!