Saturday, May 18, 2024
spot_imgspot_img
spot_imgspot_img

ವಿಟ್ಲ: ಸಮಾಜದಲ್ಲಿರುವ ಪ್ರತಿಯೊಬ್ಬರ ಸಂಕಷ್ಟಗಳಿಗೆ ಸ್ಪಂಧಿಸುವುದು ಮುಸ್ಲಿಮರ ಕರ್ತವ್ಯವಾಗಿದೆ : ಅಝೀಝ್ ದಾರಿಮಿ ಕೊಡಾಜೆ; ಮಾಣಿ ಸೋಶಿಯಲ್ ಇಖ್ವಾ ಫೆಡರೇಶನ್ ಕಚೇರಿ ಉಧ್ಘಾಟನೆ;

- Advertisement -G L Acharya panikkar
- Advertisement -

ವಿಟ್ಲ: ನಮಾಝ್, ಉಪವಾಸ ಮಾತ್ರ ಮುಸ್ಲಿಮನಾದವನ ಕೆಲಸವಲ್ಲ. ಸಮಾಜದಲ್ಲಿರುವ ಪ್ರತಿಯೊಬ್ಬರ ಸಂಕಷ್ಟಗಳಿಗೆ ಸ್ಪಂಧಿಸುವುದು ಕೂಡಾ ಮುಸ್ಲಿಮನಾದವನ ಕರ್ತವ್ಯವಾಗಿದೆ. ಎಂದು ಕೊಡಾಜೆ ಬದ್ರಿಯಾ ಜುಮ್ಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಹೇಳಿದರು.

vtv vitla
vtv vitla

ಅವರು ಸೋಶಿಯಲ್ ಇಖ್ವಾ ಫೆಡರೇಶನ್ ಮಾಣಿ ಇದರ ಕಚೇರಿಯನ್ನು ಕೊಡಾಜೆ ಸುಲ್ತಾನ್ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟಿಸಿ ಮಾತನಾಡಿದ ಅವರು ನಾವು ಸದುದ್ಧೇಶದಿಂದ ಮಾಡುವ ಸಣ್ಣ ಸಮಾಜಮುಖಿ ಕೆಲಸ ಕೂಡಾ ನಾಳೆ ಪರಲೋಕದಲ್ಲಿ ಬಹುದೊಡ್ಡ ಪುಣ್ಯದ ಕಾರ್ಯವಾಗಲಿದೆ.

ಸೋಶಿಯಲ್ ಇಖ್ವಾ ಫೆಡರೇಶನ್ ಸಂಘಟನೆಯು ಆಂಬುಲೆನ್ಸ್ ಒಂದನ್ನು ಸಮಾಜಕ್ಕೆ ಈಗಾಗಲೇ ಅರ್ಪಿಸಿದ್ಧು, ಮಾಣಿ ಸುತ್ತಮುತ್ತಲಿನ 8 ಗ್ರಾಮಗಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಸಮುದಾಯ ಸಬಲೀಕರಣದ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಕಾರ್ಯಾಚರಿಸುವ ಮೂಲಕ ಜನರಿಗೆ ಸಹಕಾರಿಯಾಗಲಿ ಎಂದು ಆಶಿಸಿದರು.

ಫೆಡರೇಶನ್ ಗೌರವ ಸಲಹೆಗಾರ ಹನೀಫ್ ಖಾನ್ ಕೊಡಾಜೆ ಸಂಘಟನೆಯ ಮುಂದಿನ ಕಾರ್ಯ ಯೋಜನೆ, ಗುರಿಗಳ ಬಗ್ಗೆ ವಿವರಿಸಿದರು. ಸೋಶಿಯಲ್ ಇಖ್ವಾ ಫೆಡರೇಶನ್ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಸುಲ್ತಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧರು. ಕೊಡಾಜೆ ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಇಬ್ರಾಹಿಂ ರಾಜ್ ಕಮಲ್, ಉದ್ಯಮಿ ಅಹಮದ್ ಖಾನ್ ಕೊಡಾಜೆ, ಫೆಡರೇಶನ್ ಗೌರವ ಸಲಹೆಗಾರ ಹಾಜಿ ರಫೀಕ್ ಸುಲ್ತಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಹಾಜಿ ಅಬ್ದುಲ್ ಖಾದರ್ ಸುಲ್ತಾನ್, ಬಾಶಿತ್ ಬುಡೋಳಿ, ರಶೀದ್ ನೀರಪಾದೆ, ಇಂಜಿನಿಯರ್ ಲತೀಫ್ ಕೊಡಾಜೆ, ಇಂಜಿನಿಯರ್ ನವಾಝ್ ನೇರಳಕಟ್ಟೆ, ಫಾರೂಕ್ ಗೋಳಿಕಟ್ಟೆ,ಸಿದ್ದೀಕ್ ನೆಡ್ಯಾಲು, ಬಶೀರ್ ಕೊಡಾಜೆ, ರಫೀಕ್ ಯುನೈನ್, ಅಶ್ರಫ್ ಮನೋಹರ್ ಮಾಣಿ, ಶಬ್ಬೀರ್ ಖಾನ್ ಕಡೇಶ್ವಾಲ್ಯ, ಅತಾವುಲ್ಲಾ ನೇರಳಕಟ್ಟೆ, ಮೊದಲಾದವರು ಉಪಸ್ಥಿತರಿದ್ದರು.

ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಜೈನುಲ್ ಅಕ್ಬರ್ ಕಡೇಶ್ವಾಲ್ಯ ಸ್ವಾಗತಿಸಿ, ನಿರೂಪಿಸಿದರು. ಉಪಾಧ್ಯಕ್ಷ ರಿಯಾಝ್ ಕಲ್ಲಾಜೆ ವಂದಿಸಿದರು.

suvarna gold
- Advertisement -

Related news

error: Content is protected !!