Friday, April 26, 2024
spot_imgspot_img
spot_imgspot_img

ವಿಟ್ಲ: ಸರಕಾರಿ ಐಟಿಐ ಕಟ್ಟಡದ ಉದ್ಘಾಟನೆ; ಸಚಿವ ಅಶ್ವತ್ಥನಾರಾಯಣ, ಸಂಸದ ನಳೀನ್ ಕುಮಾರ್ ಭಾಗಿ

- Advertisement -G L Acharya panikkar
- Advertisement -

ವಿಟ್ಲ: ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ನೂತನ ಕಟ್ಟಡ ಇಂದು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿದೆ.

ಇದರ ಉದ್ಘಾಟನೆಯನ್ನು ಉನ್ನತ ಶಿಕ್ಷಣ, ಐ.ಟಿ.ಬಿ.ಟಿ, ವಿಜ್ಞಾನ ಮತ್ತು ತಂತ್ರಜ್ಞಾನ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖಾ ಸಚಿವ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಸಿ.ಎನ್. ಅಶ್ವತ್ಥನಾರಾಯಣ ಅವರು ನೆರವೇರಿಸಿದರು.

ಈಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರಾದ ಸಂಗೀತಾ ಜಗದೀಶ ಪಾಣೆಮಜಲು, ಅರುಣ್ ವಿಟ್ಲ, ರವಿಪ್ರಕಾಶ್, ಉದ್ಯಮಿ ಸುಬ್ರಾಯ ಪೈ, ಪ್ರಾಂಶುಪಾಲ ಬಾಲಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

ಕೈಗಾರಿಕಾ ತರಬೇತಿ ಸಂಸ್ಥೆಗಳು ದೇಶಕ್ಕೆ ಶಕ್ತಿಯನ್ನು ತುಂಬುವ ಕಾರ್ಯ ನಡೆಸುತ್ತಿದೆ. ಇಂಡಸ್ಟ್ರೀ 4.0 ಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಕಲಿಕೆಯಲ್ಲೂ ಸುಧಾರಣೆಗಳನ್ನು ತರುವ ಕಾರ್ಯವನ್ನು ಸರ್ಕಾರ ಮಾಡಿದೆ. ವಿಟ್ಲ ಐಟಿಐಯಲ್ಲಿ ಉದ್ಯೋಗ ಯೋಜನೆಯಡಿ 1ಕೋಟಿಯ ಕಟ್ಟಡ, 31ಕೋಟಿ ವೆಚ್ಚದ ತಂತ್ರಜ್ಞಾನಗಳನ್ನು ಪ್ರಯೋಗಾಲಯದಲ್ಲಿ ಅಳವಡಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಹೇಳಿದರು.ಬಜೆಟ್ ನಲ್ಲಿ 30ಸಂಸ್ಥೆಗಳ ಉನ್ನತೀಕರಣಕ್ಕೆ ಅವಕಾಶ ಮಾಡಲಾಗಿದೆ. 1200 ಸಂಸ್ಥೆಯ ಮೂಲಕ 1.5ಲಕ್ಷ ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾವಿದೆ. ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ನೀಡುವ ಜತೆಗೆ ದೊಡ್ಡ ಸುಧಾರಣೆಯನ್ನು ಮಾಡಲಾಗುತ್ತಿದೆ. 23 ನೂತನ ವಿಷಯಗಳ ತರಬೇತಿಯನ್ನು ಆರಂಭಿಸುವ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ ಖಾಸಗೀ ಇಂಜಿನಿಯರಿಂಗ್ ಕಾಲೇಜಿನಷ್ಟು ಸುಸಜ್ಜಿತವಾಗಿ ವ್ಯವಸ್ಥೆ ವಿಟ್ಲ ಐಟಿಐಗೆ ಲಭಿಸಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ಉತ್ತಮ ಗುಣಮಟ್ಟವನ್ನು ನಾವು ಕಾಣಬಹುದಾಗಿದೆ. ದೇಶವಿದೇಶಗಳಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಅತ್ಯಂತ ಹೆಚ್ಚಿನ ಬೇಡಿಕೆಯಿದೆ. ದೇಶದಲ್ಲಿ ಅತೀ ಹೆಚ್ಚು ಉದ್ಯೋಗ ಮೇಳ ನಡೆಸುವ ಮೂಲಕ ಉದ್ಯೋಗ ಸೃಷ್ಟಿ ಮಾಡಲಾಗಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ ನೂತನ ಕಟ್ಟಡಕ್ಕೆ 4 ಕೋಟಿ ಅನುದಾನ ನೀಡಿದ್ದು, ಕಟ್ಟಡದ ಸಮೀಪ ತಡೆಗೋಡೆ ನಿರ್ಮಾಣಕ್ಕೆ 1ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಕಾಲಿಕವಾಗಿ ಅಗತ್ಯ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು

- Advertisement -

Related news

error: Content is protected !!