Wednesday, May 1, 2024
spot_imgspot_img
spot_imgspot_img

ವಿಟ್ಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಕಂಬಳಬೆಟ್ಟು ವತಿಯಿಂದ ಆ.31ರಿಂದ ಸೆ. 2ರವರೆಗೆ 51ನೇ ವರ್ಷದ ಶ್ರೀ ಮಹಾಗಣೇಶೋತ್ಸವ

- Advertisement -G L Acharya panikkar
- Advertisement -

ವಿಟ್ಲ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಧರ್ಮನಗರ ಕಂಬಳಬೆಟ್ಟು ಇಲ್ಲಿ 51ನೇ ವರ್ಷದ ಶ್ರೀ ಮಹಾಗಣೇಶೋತ್ಸವ ಕಾರ್ಯಕ್ರಮವು ಆ.31ರಿಂದ ಸೆ. 2ರವರೆಗೆ ಧರ್ಮನಗರ ಸಮಾಜ ಮಂದಿರದಲ್ಲಿ ನಡೆಯಲಿದೆ.

ದಿನಾಂಕ : 31-08-2022ರಂದು ಬೆಳಿಗ್ಗೆ ಗಂಟೆ 8:30ಕ್ಕೆ ಶ್ರೀ ಗಣಪತಿ ಹವನ,ಬೆಳಿಗ್ಗೆ ಗಂಟೆ 9:30ಕ್ಕೆ ಶ್ರೀ ಮಹಾಗಣಪತಿ ಪ್ರತಿಷ್ಠೆ ಹಾಗೂ ಉತ್ಸವದ ಉದ್ಘಾಟನೆ ನಡೆಯಲಿದೆ. ಧ್ವಜಾರೋಹಣವನ್ನು ಲೀಲಾವತಿ ಅಮ್ಮ,ಅಮೈ ನೇರವೇರಿಸಲಿದ್ದರೆ. ಉದ್ಘಾಟನೆಯನ್ನು ಸತೀಶ್ ಸಪಲ್ಯ, ಸಹಾಯಕ ಇಂಜಿನಿಯರ್ ಮೆಸ್ಕಾಂ ವಿಟ್ಲ, ಮೂರ್ತಿ ಪ್ರತಿಷ್ಠೆಯನ್ನು ನೂಜಿಯಲ್ಲಿರುವ ಪುರೋಹಿತ ಗೋಪಾಲಕೃಷ್ಣ ಭಟ್‌, ಮಿತ್ತೂರು ಮಾಡಲಿದ್ದಾರೆ.

ಗಂಟೆ 11.00ಕ್ಕೆ ಪೂಜಾ ಸೇವೆ ಪ್ರಾರಂಭ, ಮಧ್ಯಾಹ್ನ 12-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ (ದಿ. ಸುಂದರಿ ಮತ್ತು ದಿ. ರಾಮದಾಸ್ ನೇರ್ಲಾಜೆ ಸ್ಮರಣಾರ್ಥ ಇವರ ಕುಟುಂಬಸ್ಥರು ಕೋಲ್ಪೆ-ನೇರ್ಲಾಜೆ) ನಡೆಯಲಿದೆ. ಸಂಜೆ 6.30ರಿಂದ ಧರ್ಮನಗರ ಬಾಲಗೋಕುಲ ಮಕ್ಕಳಿಂದ ಭಜನೆ, ರಾತ್ರಿ ಘಂಟೆ 8.20ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 8.30ಕ್ಕೆ ಆಹ್ವಾನಿತ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸ್ಪರ್ಧೆ ಸುವರ್ಣ ಸಂಭ್ರಮ 2022 ನಡೆಯಲಿದೆ. ಪ್ರಥಮ ಬಹುಮಾನ 15,000ರೂ ನಗದು ಮತ್ತು ಸುವರ್ಣ ಸಂಭ್ರಮ 2022 ಟ್ರೋಫಿ, ದ್ವಿತೀಯ ಬಹುಮಾನ 10,000ರೂ. ನಗದು ಮತ್ತು ಸುವರ್ಣ ಸಂಭ್ರಮ 2022 ಟ್ರೋಫಿ.

ಸೆಪ್ಟೆಂಬರ್‌ 1ರಂದು ಬೆಳಿಗ್ಗೆ 10.00ಕ್ಕೆ ಸಾರ್ವಜನಿಕ ಕಬಡ್ಡಿ ಪಂದ್ಯಾಟ ನಡೆಯಲಿದೆ. ಬೆಳಿಗ್ಗೆ 10.30ಕ್ಕೆ ಸಾಮೂಹಿಕ ಕುಂಕುಮಾರ್ಚನೆ, ಮಧ್ಯಾಹ್ನ 12-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ 5.00ಕ್ಕೆ, ಭಜನೆ, ಶ್ರೀ ರಾಮಾಂಜನೇಯ ಭಜನಾ ಮಂದಿರ (ರಿ.) ಕಾರ್ಲ, ಪೆರ್ನೆ, ರಾತ್ರಿ ಘಂಟೆ 7.00ಕ್ಕೆ, ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ರಾತ್ರಿ 8.00ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮದ ಧಾರ್ಮಿಕ ಭಾಷಣ ಸಹನಾ ಕುಂದರ್ ಸೂಡ ವಕೀಲರು, ಉಡುಪಿ ಇವರು ಮಾಡಲಿದ್ದರೆ.ರಾತ್ರಿ 9.00ಕ್ಕೆ ಛದ್ಮವೇಷ ಸ್ಪರ್ಧೆ, ರಾತ್ರಿ 9 30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಕಲಾತಪಸ್ವಿ ತಂಡದಿಂದ ನಡೆಯಲಿದೆ.

ಸೆಪ್ಟೆಂಬರ್‌ 2ರಂದು ಪೂರ್ವಾಹ್ನ ಘಂಟೆ 9.00ಕ್ಕೆ ಪೂಜಾ ಸೇವೆ ಪ್ರಾರಂಭ, 40 ಕೆ. ಜಿ. ವಿಭಾಗದ ಕಬಡ್ಡಿ ಪಂದ್ಯಾಟ, 10.00ಕ್ಕೆ ಮಹಿಳೆಯರಿಗೆ ರಂಗವಲ್ಲಿ ಸ್ಪರ್ಧೆ, ಹೂ ಹಾರ ಸ್ಪರ್ಧೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಅಪರಾಹ್ನ 2.00 ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮವು ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಿವಾಕರ ದಾಸ್ ನೇರ್ಲಾಜೆ, ಎಸ್.ಎಲ್.ವಿ.ಗ್ರೂಪ್ಸ್ ಇಂಡಿಯಾ, ಪ್ರೈ.ಲಿ. ಮೈಸೂರು ವಹಿಸಲಿದ್ದರೆ. ಅತಿಥಿಗಳಾಗಿ ಡಾ. ಬಿ. ಸಂಜೀವ ರೈ ಅರ್ಕೆಚ್ಚಾರ್‌ ಚೀಫ್‌ ಮೆಡಿಕಲ್ ಆಫೀಸರ್, ಫಾದರ್‌ಮುಲ್ಲರ್ ಹಾಸ್ಪಿಟಲ್, ಮಂಗಳೂರು ಭಾಗವಹಿಸಲಿದ್ದಾರೆ.

ಗಂಟೆ 3.00ಕ್ಕೆ ಮಹಾ ಮಂಗಳಾರತಿ, ದಿಗ್ವಿಜಯೋತ್ಸವ ವಂದೇ ಮಾತರಂ, ಮೂರ್ತಿ ಬಲಸ್ಥಂಭನ, ರಾತ್ರಿ 7.30ಕ್ಕೆ ದೇವಿ ಸನ್ನಿಧಿಯಲ್ಲಿ ಭಜನೆ, ರಾತ್ರಿ 8.00ಕ್ಕೆ ಶ್ರೀ ಸಿದ್ಧಿವಿನಾಯಕ ಯುವಕ ಮಂಡಲ ಧರ್ಮನಗರ ಇದರ ಸದಸ್ಯರು ಅಭಿನಯಿಸುವ, ಸುಟ್ಟು ಸಂಟ್ಯಾರ್‌ ವಿರಚಿತ, ಕಾರ್ತಿಕ್ ಶೆಟ್ಟಿ ಮೂಡಾಯಿಮಾರ್‌‌ ನಿರ್ದೇಶನದ ತುಳು ಹಾಸ್ಯಮಯ ನಾಟಕ ಮರ್ಲ್ ಕಟ್ಟೊರ್ಚ್ಚಿ ಪ್ರದರ್ಶನಗೊಳ್ಳಲಿದೆ.

vtv vitla
- Advertisement -

Related news

error: Content is protected !!