Sunday, May 5, 2024
spot_imgspot_img
spot_imgspot_img

ವಿಟ್ಲ: (ಸೆ.16) ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ

- Advertisement -G L Acharya panikkar
- Advertisement -
astr

ವಿಟ್ಲ : ರೋಟರಿ ಕ್ಲಬ್ ಪುತ್ತೂರು ಸಿಟಿ, ಇಡ್ಕಿದು ಸೇವಾ ಸಹಕಾರಿ ಸಂಘ ನಿ., ಆನಂದಾಶ್ರಮ ಸೇವಾ ಟ್ರಸ್ಟ್ (ರಿ.) ಪುತ್ತೂರು, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಮಂಗಳೂರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ, ಇವರ ಸಹಭಾಗಿತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರವು ದಿನಾಂಕ : 16-09-2022ನೇ ಶುಕ್ರವಾರ ಇಡ್ಕಿದು ಸೇವಾ ಸಹಕಾರಿ ಸಂಘದ ‘ಶತಾಮೃತ ಆವರಣ’ ಉರಿಮಜಲು ಇಲ್ಲಿ ನಡೆಯಲಿದೆ.

ದಿನಾಂಕ: 16-09-2022ನೇ ಶುಕ್ರವಾರದಂದು ಪೂರ್ವಾಹ್ನ 9.30ರಿಂದ 12.30ರ ತನಕ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕ ಹಾಗೂ ಮಂಗಳೂರಿನ ಖ್ಯಾತ ಜಿಲ್ಲಾ ಆಸ್ಪತ್ರೆ (Wenlock) ಇದರ ಸಹಯೋಗದಲ್ಲಿ ಕೆ.ಎಂ.ಸಿ.ಯ ಪ್ರಸಿದ್ಧ ನೇತ್ರ ತಜ್ಞರು ಭಾಗವಹಿಸಲಿದ್ದಾರೆ.
ಸಿಗುವ ಸೌಲಭ್ಯಗಳು : ಉಚಿತ ಕಣ್ಣಿನ ಪರೀಕ್ಷೆ, ಶಸ್ತ್ರ ಚಿಕಿತ್ಸೆ ಮತ್ತು ಸಲಹೆ , ಉಚಿತ ಕಣ್ಣಿನ ಹೊರೆ ಚಿಕಿತ್ಸೆ (IOL ಅಳವಡಿಕೆ), ಉಚಿತ ಲಭ್ಯ ಕನ್ನಡಕ ವಿತರಣೆ. ಆನಂದಾಶ್ರಮ ಸೇವಾ ಟ್ರಸ್ಟ್ (ರಿ.) ಪುತ್ತೂರು – ಇವರ ವತಿಯಿಂದ ದೃಷ್ಟಿದೋಷ ಇರುವವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗುವುದು.

ಸೂಚನೆ: ತಪಾಸಣೆಯ ನಂತರ ಅಗತ್ಯತೆ ಇರುವವರಿಗೆ ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಉಚಿತವಾಗಿ ಶಸ್ತ್ರಚಿಕಿತ್ಸೆಯ ವ್ಯವಸ್ಥೆ ಇರುತ್ತದೆ. ಆಪರೇಶನ್ ಮಾಡಿಸುವವರು ಬರುವಾಗ ಎರಡು ದಿನಕ್ಕೆ ಬೇಕಾಗುವ ಬಟ್ಟೆ, ಊಟದ ತಟ್ಟೆ, ಲೋಟ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ಒಬ್ಬ ಸಹಾಯಕರೊಂದಿಗೆ ಬರಬೇಕು.

- Advertisement -

Related news

error: Content is protected !!