Saturday, May 18, 2024
spot_imgspot_img
spot_imgspot_img

ವಿಟ್ಲ : ಸೈಂಟ್ ರೀಟಾ ಕನ್ನಡ ಮಾಧ್ಯಮ ಶಾಲಾ ಶಿಕ್ಷಕಿ ಲೀನಾ ವೇಗಸ್‌ರಿಗೆ ಬೀಳ್ಕೊಡುಗೆ

- Advertisement -G L Acharya panikkar
- Advertisement -

ವಿಟ್ಲ : ಕಳೆದ 34ವರ್ಷಗಳಿಂದ ವಿಟ್ಲದ ಸೈಂಟ್ ರೀಟಾ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಲೀನಾ ವೇಗಸ್ ರವರನ್ನು ಶಾಲಾ ವತಿಯಿಂದ ಬೀಳ್ಕೊಡಲಾಯಿತು.

ಸಂತರೀಟಾ ವಿದ್ಯಾಸಂಸ್ಥೆಯ ಜೊತೆ ಕಾರ್ಯದರ್ಶಿ ಫಾ. ಐವನ್ ಮೈಕಲ್ ರೊಡ್ರಿಗಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚರ್ಚ್‌ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ವಿಜಯ್ ಪಾಯ್ಸ್, ಕಾರ್ಯದರ್ಶಿ ತೋಮಸ್ ಡಿಸೋಜ, ಶಾಲಾ ಸುರಕ್ಷಾ ಸಮಿತಿ ಸದಸ್ಯ ಷರೀಫ್, ಆಡಳಿತ ಮಂಡಳಿ ಸದಸ್ಯ ಚಾಲ್ಸ್‌ ಸಿಕ್ವೇರಾ, ವಿಟ್ಲ ಸಂತ ರೀಟಾ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯ ಶಿಕ್ಷಕ ಫಾ. ಸುನಿಲ್ ಪ್ರವೀಣ್ ಪಿಂಟೊ, ಸುರಕ್ಷಾ ಸಮಿತಿ ಮಾಜಿ ಗೌರವ ಸಲಹೆಗಾರ ಸುದರ್ಶನ್ ಪಡಿಯಾರ್, ಸಂತ ರೀಟಾ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸಿಸ್ಟರ್ ಜಾನೆಟ್ ಡಿಸೋಜಾ, ಸಂತರೀಟಾ ಆಂಗ್ಲಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕರಾದ ಸಿಸ್ಟರ್ ಮರೀನಾ, ಎವೆರಸ್ಟ್ ಲೋಬೊ, ಎವಿಟಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯಶಿಕ್ಷಕರಾದ ಸಿ. ಜಾನೆಟ್ ಡಿಸೋಜಾ ಸನ್ಮಾನ ಪತ್ರ ವಾಚಿಸಿದರು. ನಿವೃತ್ತ ಶಿಕ್ಷಕಿಯ ಬಗ್ಗೆ ಶಿಕ್ಷಕಿ ಮಲ್ಲಿಕಾ, ವಿದ್ಯಾರ್ಥಿ ಕೆ. ಶಮ ಅನಿಸಿಕೆ ವ್ಯಕ್ತಪಡಿಸಿದರು. ಚುಕ್ರ ಎ. ವಂದಿಸಿದರು. ಸಹಶಿಕ್ಷಕ ಸಿ. ಜಯರಾಮಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

- Advertisement -

Related news

error: Content is protected !!