Monday, April 29, 2024
spot_imgspot_img
spot_imgspot_img

ವಿಟ್ಲ; ಸೈಂಟ್ ರೀಟಾ ವಿದ್ಯಾಸಂಸ್ಥೆಯಲ್ಲಿ “ಆಟಿದ ತಿರ್ಲ್‌” ಕಾರ್ಯಕ್ರಮ

- Advertisement -G L Acharya panikkar
- Advertisement -

‌ವಿಟ್ಲ: ಸೈಂಟ್ ರೀಟಾ ವಿದ್ಯಾಸಂಸ್ಥೆ ಮೈದಾನದಲ್ಲಿ ಮಕ್ಕಳಿಗಾಗಿ “ಆಟಿದ ತಿರ್ಲ್” ಕಾರ್ಯಕ್ರಮ ನಡೆಯಿತು.

ಸೈಂಟ್ ರೀಟಾ ವಿದ್ಯಾಸಂಸ್ಥೆಯ ಸಂಚಾಲಕ ಫಾ. ಐವನ್ ಮೈಕಲ್ ರೋಡ್ರಿಗಸ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೈಂಟ್ ರೀಟಾ ವಿದ್ಯಾಸಂಸ್ಥೆಯ ಮುಖ್ಯಸ್ಥ ಫಾ. ಸುನೀಲ್ ಪ್ರವೀಣ್ ಪಿಂಟೋ ಹಾಗೂ ಸಿ.ಮರೀನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸೈಂಟ್ ರೀಟಾ ವಿದ್ಯಾಸಂಸ್ಥೆಯ ಸಂಚಾಲಕ ಫಾ. ಐವನ್ ಮೈಕಲ್ ರೋಡ್ರಿಗಸ್ ಹಾಗೂ ರೀಟಾ ವಿದ್ಯಾಸಂಸ್ಥೆಯ ಮುಖ್ಯಸ್ಥ ಫಾ. ಸುನೀಲ್ ಪ್ರವೀಣ್ ಪಿಂಟೋ ಇವರು ಆಟಿ ತಿಂಗಳ ಮಹತ್ವದ ಬಗ್ಗೆ ವಿವರಿಸುತ್ತಾ ತುಳುನಾಡಿನಲ್ಲಿ ಆಚರಿಸಲ್ಪಡುವ ತುಳು ತಿಂಗಳುಗಳ ಬಗ್ಗೆ ಮಕ್ಕಳಿಗೆ ಹೇಳಿಕೊಟ್ಟರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಶ್ರೇಯಾ ಸ್ವಾಗತಿಸಿ, ಗಣ್ಯಶ್ರೀ ವಂದಿಸಿದರು. ಶಾಲಾ ಶಿಕ್ಷಕ ಸಚಿನ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಶಾಲಾ ಮಕ್ಕಳಿಂದ ಆಟಿಕಳೆಂಜ ನೃತ್ಯ, ತುಳುನಾಡ ವೈಭವ ಸೇರಿದಂತೆ ಹಲವು ಜಾನಪದ ಸಾಂಸ್ಕೃತಿಕ ವೈಭವಗಳು ನಡೆಯಿತು. ಈ ಸಂದರ್ಭದಲ್ಲಿ ಆಟಿ ತಿಂಗಳ ವಿಶೇಷ ಔಷಧಿಯ ಗಿಡಗಳ ಪರಿಚಯ ಮಾಡಲಾಯಿತು. ಮಕ್ಕಳಿಗೆ ವಿವಿಧ ಆಟೊಟ ಸ್ಪರ್ಧೆಗಳನ್ನು ನಡೆಸಲಾಯಿತು. ಆಟಿಯ ವಿಶೇಷ ತಿನಿಸುಗಳನ್ನು ಉಂಡ ಮಕ್ಕಳು, ಹಾಗೂ ಶಾಲಾ ಶಿಕ್ಷಕರು “ಆಟಿದ ತಿರ್ಲ್” ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡರು.

- Advertisement -

Related news

error: Content is protected !!