Sunday, April 28, 2024
spot_imgspot_img
spot_imgspot_img

ವಿಟ್ಲ: ಸ್ಕೆಚ್‌ ನಡೆಸೋ ಜಾಗಕ್ಕೆ ಯಾರಿಗೂ ಎಂಟ್ರಿಯಿಲ್ಲ..!? ಹಲವು ಡೀಲ್‌ ನಡೆಯುತ್ತಿದ್ದ ಜಾಗಕ್ಕೆ NIA ರೈಡ್‌..! ಫ್ರೀಂಡಂ ಕಮ್ಯೂನಿಟಿ ಹಾಲ್‌ನಲ್ಲಿ ನಡೆಯುತ್ತಿರೋದೇನು..?!

- Advertisement -G L Acharya panikkar
- Advertisement -

ವಿಟ್ಲ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಹಿಂದೂ ಕಾರ್ಯಕರ್ತನ ಕೊಲೆಗೆ ಸಂಬಂಧಿಸಿ ಈಗಾಗಲೇ ಪೊಲೀಸ್ ಹಾಗೂ NIA ತಂಡ ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ನಡುವೆ ಕರಾವಳಿಯಲ್ಲಿ ನಡೆಯುವ ಚಟುವಟಿಕೆಯ ಮೇಲೆ ರಾಷ್ಟ್ರೀಯ ತನಿಖಾ ದಳ ಹದ್ದಿನ ಕಣ್ಣಿಟ್ಟಿದೆ.

ಇಂದು ಸದ್ದಿಲ್ಲದೆ ತನಿಖಾ ದಳದ ಅಧಿಕಾರಿಗಳು ಪುತ್ತೂರು, ಸುಳ್ಯದ 32 ಕಡೆಗಳಿಗೆ ರೈಡ್‌ ಮಾಡಿದೆ. ಅಂತೆಯೇ ವಿಟ್ಲ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಮಿತ್ತೂರು ಫ್ರೀಂಡಂ ಕಮ್ಯೂನಿಟಿ ಹಾಲ್ ಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸ್ಕೆಚ್‌ ನಡೆಯೋ ಅಡ್ಡ..! ಯಾರಿಗೂ ಇಲ್ಲ ಪರ್ಮಿಷನ್..?!
ಮಿತ್ತೂರು ಫ್ರೀಂಡಂ ಕಮ್ಯೂನಿಟಿ ಹಾಲ್‌ಗೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದ ಬೆನ್ನಲ್ಲೇ ಹಲವು ವಿಷಯಗಳು ಬೆಳಕಿಗೆ ಬರುತ್ತಿದೆ. ಸಾರ್ವಜನಿಕರು ವಿವಿಧ ತೆರನಾಗಿ ಮಾತನಾಡುತ್ತಿದ್ದಾರೆ. ಈ ಹಾಲ್‌ ಪಕ್ಕದಲ್ಲೇ ಮಸೀದಿ ಇದ್ದು ಹಲವು ಕಾನೂನು ವಿರೋಧಿ ಚಟುವಟಿಕೆಗಳು ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಪಿಎಫ್‌ಐ, ಎಸ್‌ಡಿಪಿಐ ಇಲ್ಲಿ ಸಭೆ ನಡೆಸಿ ಸಮಾಜ ಘಾತುಕ ಕೃತ್ಯ ಮಾಡಲು ಪ್ಲಾನ್ ನಡೆಸುತ್ತಿದ್ದರು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಇನ್ನು ಸ್ಥಳೀಯರನ್ನು ಸೇರಿಸಿಕೊಂಡು ಕೋಮು ಸೌಹಾರ್ದ ಕದಡುವ ಕೃತ್ಯಕ್ಕೆ ಪ್ರೇರಣೆ ನೀಡಲಾಗುತ್ತಿತ್ತು ಎನ್ನಲಾಗುತ್ತಿದೆ. ಪೊಲೀಸರು ಈ ಹಾಲ್‌ಗೆ ಎಂಟ್ರಿ ಕೊಡಲು ಸಹ ಬಿಡುವುದಿಲ್ಲ ಎಂಬ ಮಾತುಗಳು ಇವೆ.

ಒಟ್ಟಿನಲ್ಲಿ ಹಲವು ಸಂಶಯಗಳಿಗೆ ಕಾರಣವಾಗುತ್ತಿರುವ ಈ ಅಡ್ಡೆಗೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದ್ದು ಹೆಚ್ಚಿನ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಾಗಿದೆ.

- Advertisement -

Related news

error: Content is protected !!