ವಿಟ್ಲ: ಹಿಂದು ಜಾಗರಣ ವೇದಿಕೆ ಮಂಗಳಪದವು ಘಟಕ ಇದರ ಆಶ್ರಯದಲ್ಲಿ 2ನೇ ವರ್ಷದ ವಾರ್ಷಿಕ ಕ್ರೀಡಾಕೂಟವು ಶ್ರೀ ಮಲರಾಯ ದೈವಸ್ಥಾನ ಸೀಮ್ಲಾಜೆ ಗುತ್ತು ಕೆಳಗಿನ ಗದ್ದೆಯಲ್ಲಿ ಬಹಳ ಆದ್ಧೂರಿಯಿಂದ ನಡೆಯಿತು.


ದೀಪ ಪ್ರಜ್ವಲನೆ ನಡೆದು ಆ ಬಳಿಕ ವಾಲಿಬಾಲ್ ಆಟದ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ದೊರಕಿತು. ನಂತರ ಸಭಾಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸುಳ್ಯ ಪಿಯು ಕಾಲೇಜು ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಇವರು ದಿಕ್ಸೂಚಿ ಭಾಷಣ ಮಾಡಿದರು. ಅತಿಥಿಗಳಾಗಿ ಹಿಂ.ಜಾ.ವೇ ಪುತ್ತೂರು ಜಿಲ್ಲಾ ಸಂಯೋಜಕ ಜಗದೀಶ್ ನೆತ್ತರಕೆರೆ, ಹಿಂ.ಜಾ.ವೇ ಪುತ್ತೂರು ತಾಲೂಕು ಸಹಸಂಯೋಜಕ ನರಸಿಂಹ ಶೆಟ್ಟಿ ಮಾಣಿ, ಹಿಂ.ಜಾ.ವೇ ವಿಟ್ಲ ತಾಲೂಕು ಸಂಯೋಜಕ ಪ್ರಶಾಂತ್ ಇರಾ, ಹಿಂದೂ ಸಂಘಟನ ಪ್ರಮುಖ್ ಅಕ್ಷಯ್ ರಜಪೂತ್ , ಕೃಷಿಕ ಹೊನ್ನಪ್ಪ ಗೌಡ, ಭೂಸೇನ ಯೋಧ ದಯಾನಂದ ಪೂಜಾರಿ ಕೈಂತಿಲ, ಹಿಂ.ಜಾ.ವೇ ಜಿಲ್ಲಾ ಪ್ರಮುಖ್ ಪ್ರಶಾಂತ್ ಕೆಂಪುಗುಡ್ಡೆ, ದೇವಿ ಪ್ರಸಾದ್ ಶೆಟ್ಟಿ ಬೆಞಂತ್ತಿಮಾರ್ ಗುತ್ತು, ಹರ್ಷ ವಿಟ್ಲ, ಜೀವನ್ ಶೆಟ್ಟಿ, ರಾಜೇಶ್ ಕರೋಪಾಡಿ, ತನುಜಾ ಗೌಡ ಪಾದೆ ಉಪಸ್ಥಿತರಿದ್ದರು.


ನಂತರ ಹಿಂ.ಜಾ.ವೇ ಮಂಗಳಪದವು ಮಹಿಳಾ ಘಟಕದ ಉದ್ಘಾಟನೆ ನಡೆಯಿತು. ಹಿಂ.ಜಾ.ವೇ ಮಹಿಳಾ ಘಟಕದ ಪ್ರಧಾನ ಸಂಯೋಜಕಿಯಾಗಿ ತನುಜಾ ಗೌಡ ಪಾದೆ, ಸಹ ಸಂಯೋಜಕಿಯಾಗಿ ಸಂಧ್ಯಾ ಗಣೇಶ್, ಸುಮಿತ, ಜಯಂತಿ ಸಿ.ಎಚ್, ಸುಜಾತ ಒಕ್ಕೆತ್ತೂರು ಮಾಡ, ಲತಾ ಸಿ.ಎಚ್ ಆಯ್ಕೆಯಾದರು. ಕಾರ್ಯಕಾರಣಿ ಸದಸ್ಯರಾಗಿ ಸವಿತಾ, ಪ್ರಜ್ಞಾನ, ಕೃತಿಕಾ ಹಾಗೂ ಹಲವರು ಜೊತೆಗೂಡಿದರು.

ಮಹಿಳೆಯರಿಗೆ ಸಂಗೀತ ಕುರ್ಚಿ, ಮಡಕೆ ಒಡೆಯುವುದು ಮತ್ತು ಮಕ್ಕಳಿಗೆ ಲೊಂಬೆ ಚಮಚ, ಮಡಕೆ ಒಡೆಯುವುದು, 100ಮೀ ಓಟ ವಿವಿಧ ಆಟಗಳು ನಡೆಯಿತು. ಪುರುಷರಿಗೆ ಮುಕ್ತ ವಾಲಿಬಾಲ್ ಪಂದ್ಯಾಟ ಮತ್ತು ಹಗ್ಗಜಗ್ಗಾಟ ನಡೆಯಿತು.


