Monday, June 8, 2026
spot_imgspot_img
spot_imgspot_img

ವಿಟ್ಲ: 10 ವಿದ್ಯಾರ್ಥಿಗಳ ಡಿಬಾರ್ ಪ್ರಕರಣ ; ಪ್ರಾಂಶುಪಾಲರು ತಕ್ಷಣ ಅಮಾನತು ವಾಪಸು ತೆಗೆದುಗೊಳ್ಳಬೇಕು – ಹಿಂ.ಜಾ.ವೇ ವಿಟ್ಲ ತಾಲೂಕು ಎಚ್ಚರಿಕೆ

- Advertisement -
- Advertisement -
vtv vitla

ವಿಟ್ಲದ ಖಾಸಗಿ ಪದವಿ ಪೂರ್ವ ಕಾಲೇಜಿನ ಹಿಂದೂ ವಿದ್ಯಾರ್ಥಿನಿ ಮುಸ್ಲಿಂ ವಿದ್ಯಾರ್ಥಿಯೊಬ್ಬನಿಗೆ ಪ್ರೇಮ ಪತ್ರ ಬರೆದ ಆರೋಪ ಕೇಳಿ ಬಂದಿದ್ದು ಇದನ್ನು ಪ್ರಶ್ನಿಸಿದ 10 ಹಿಂದೂ ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿರುವ ಘಟನೆ ಅತ್ಯಂತ ಖಂಡನೀಯ ಎಂದು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಆಕ್ರೋಶ ವ್ಯಕ್ತಪಡಿಸಿದೆ.

ಪ್ರಾಂಶುಪಾಲರು ತಕ್ಷಣ ಅಮಾನತು ವಾಪಸು ತೆಗೆದುಗೊಳ್ಳಬೇಕು ಹಾಗೂ ಇದಕ್ಕೆ ಕಾರಣೀಕರ್ತರಾದ ಇಬ್ಬರು ವಿದ್ಯಾರ್ಥಿ ವಿದ್ಯಾರ್ಥಿನಿಯರ ಮೇಲೆ ಕ್ರಮ ಜರಗಿಸಬೇಕೆಂದು ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕಿನ ಎಚ್ಚರಿಕೆ ನೀಡಿದೆ.

ಲವ್ ಜಿಹಾದ್ ಆರೋಪ
ಈಗ ಸಿಕ್ಕಿ ಬಿದ್ದ ಜೋಡಿಗೆ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಲವ್ ಜಿಹಾದ್ ಎಂಬ ಆರೋಪವೂ ವ್ಯಕ್ತವಾಗಿತ್ತು. ಹಿಂದೂ ಸಂಘಟನೆಗಳು ಈ ವಿಚಾರವನ್ನು ಕಾಲೇಜಿಗೆ ಹಾಗೂ ಮನೆಯವರಿಗೆ ತಿಳಿಸಿದ್ದವು. ಆದರೂ ಸಹ ಈ ಕೃತ್ಯ ಮುಂದುವರಿದ ಹಿನ್ನಲೆ ಹಿಂದೂ ವಿದ್ಯಾರ್ಥಿಗಳು ಇದನ್ನು ತೀವ್ರವಾಗಿ ವಿರೋಧಿಸಿ ಡಿಬಾರ್ ಆಗಿದ್ದಾರೆ.

- Advertisement -

Related news

error: Content is protected !!