Monday, April 29, 2024
spot_imgspot_img
spot_imgspot_img

ವಿಟ್ಲ: 5 ವರ್ಷಗಳಿಂದ ಅಡ್ಯನಡ್ಕ ಪೇಟೆಯಲ್ಲೇ ತಿರುಗುತ್ತಿದ್ದ ಮಾನಸಿಕ ಅಸ್ವಸ್ಥ ಸಾಯಿನಿಕೇತನ ಸೇವಾಶ್ರಮಕ್ಕೆ ದಾಖಲು.!

- Advertisement -G L Acharya panikkar
- Advertisement -

ವಿಟ್ಲ: ಅಡ್ಯನಡ್ಕ ಪೇಟೆಯಲ್ಲಿ ಕಳೆದ 5 ವರ್ಷಗಳಿಂದ ತಿರುಗುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಸಾಯಿನಿಕೇತನ ಸೇವಾಶ್ರಮಕ್ಕೆ ದಾಖಲಿಸಲಾಗಿದೆ.

ಈತನನ್ನು ಈಶ್ವರ ನಾಯ್ಕ ಎಂದು ಗುರುತಿಸಲಾಗಿದ್ದು, ಈತನು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ. ಈತನು ಕಳೆದ 5ವರ್ಷಗಳಿಂದ ಅಂಗಡಿ ಬದಿಯಲ್ಲಿ, ಬಸ್ ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿ ವಾಸವಾಗಿದ್ದ.

ಕೇಪು ಪಂಚಾಯತ್ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ಅವರ ಮಾಹಿತಿ ಮೇರೆಗೆ, ಸ್ಥಳೀಯ ವಾಹನ ಚಾಲಕರು, ಮಾಲಕರು ಮತ್ತು ವ್ಯಾಪಾರಸ್ತರ ಸಹಕಾರದೊಂದಿಗೆ ಸಾಯಿನಿಕೇತನ ಸೇವಾಶ್ರಮಕ್ಕೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಇವರೆಲ್ಲರೂ ಸೇರಿ 9,000/ ರೂಪಾಯಿ ಯನ್ನು ಆಶ್ರಮಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ಈಶ್ವರ ನಾಯ್ಕ ಅವರನ್ನು ಸೇವಾಶ್ರಮಕ್ಕೆ ದಾಖಲಿಸಿ ಪ್ರಾಥಮಿಕ ಶುಚಿಗೊಳಿಸಿದರು, ನಂತರ ಮಾನಸಿಕ ತಜ್ಞರ ಸಲಹೆಯಂತೆ ಚಿಕಿತ್ಸೆ ನೀಡಲಾಗುವುದು ಎನ್ನಲಾಗಿದೆ.

ಸಾಯಿನಿಕೇತನ ಸೇವಾಶ್ರಮ ದೈಗೋಳಿ https://fb.watch/ahby5odJBA/

suvarna gold
vtv vitla
vtv vitla
- Advertisement -

Related news

error: Content is protected !!